ಚೆನ್ನೈ: ಭಾರತೀಯ ಚಿತ್ರರಂಗದ ‘ಸೂಪರ್ಸ್ಟಾರ್’ ರಜನಿಕಾಂತ್ ತಮ್ಮ ನಟನೆಗೆ ಮಾತ್ರವಲ್ಲದೆ, ಸರಳತೆ ಹಾಗೂ ಅಪರೂಪದ ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ.
ತಮ್ಮ ಜೀವನದ ಯಶಸ್ಸಿಗೆ ಕಾರಣಕರ್ತರಾದ ಅಭಿಮಾನಿಗಳ ಬಗ್ಗೆ ಅವರು ಮತ್ತೊಮ್ಮೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಜೀವಿತಾವಧಿಯ ನಂತರ ತಾವು ಗಳಿಸಿದ ಪ್ರತಿಯೊಂದು ಆಸ್ತಿಯು ತಮಿಳುನಾಡು ಜನತೆಗೆ ಹಾಗೂ ಸಾರ್ವಜನಿಕ ಟ್ರಸ್ಟ್ಗಳಿಗೆ ಸೇರಲಿದೆಯೇ ಹೊರತು, ಕುಟುಂಬದವರಿಗೆ ಒಂದೇ ಒಂದು ಪೈಸೆಯೂ ಸಿಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚೆನ್ನೈನ ಪ್ರಸಿದ್ಧ ರಾಘವೇಂದ್ರ ಮಂಟಪ ಸೇರಿದಂತೆ ತಮ್ಮ ಒಟ್ಟು ಆಸ್ತಿಯನ್ನು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಿಡುವ ಬಗ್ಗೆ ರಜಿನಿಕಾಂತ್ ಹಿಂದೆ ಮಾಡಿದ್ದ ಐತಿಹಾಸಿಕ ಘೋಷಣೆಯ ವಿಡಿಯೋ ಮತ್ತು ವರದಿಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಅಭಿಮಾನಿಗಳು ತಮ್ಮ ಬೆವರು ಹರಿಸಿ ಗಳಿಸಿದ ಹಣದಿಂದ ಸಿನಿಮಾ ಟಿಕೆಟ್ ಖರೀದಿಸಿ ತಮಗೆ ಜೀವನ ನೀಡಿದ್ದಾರೆ ಎಂದು ರಜಿನಿಕಾಂತ್ ಹಲವು ಬಾರಿ ಭಾವನಾತ್ಮಕವಾಗಿ ನುಡಿದಿದ್ದಾರೆ.
ತಮ್ಮ ಹೆಂಡತಿ ಲತಾ ರಜಿನಿಕಾಂತ್ ಹಾಗೂ ಕುಟುಂಬದವರ ಒಪ್ಪಿಗೆಯೊಂದಿಗೆ ಈ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದು, ಆಸ್ತಿ ಮತ್ತು ಉಯಿಲು ದಾಖಲೆಗಳನ್ನು ತಮ್ಮ ಆಪ್ತರಿಗೆ ಹಸ್ತಂತರಿಸಿರುವುದಾಗಿ ಹೇಳಿದ್ದಾರೆ. ತೆರೆಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಅಸಲಿ ‘ಥಲೈವಾ’ ಎನಿಸಿಕೊಂಡಿರುವ ರಜಿನಿಕಾಂತ್ ಅವರ ಈ ದೊಡ್ಡ ಮನಸ್ಸಿನ ನಿರ್ಧಾರಕ್ಕೆ ಕೋಟ್ಯಂತರ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
- Raghavendra Mandapam Chennai
- Rajinikanth charitable trust
- Rajinikanth latest updates
- Rajinikanth news
- Rajinikanth property
- superstar Rajinikanth family property
- Tamil Nadu public welfare
- Thalaivar fans devotion
- ತಮಿಳುನಾಡು ಜನತೆ
- ಥಲೈವಾ ಸುದ್ದಿ
- ರಜಿನಿಕಾಂತ್ ಅಭಿಮಾನಿಗಳು
- ರಜಿನಿಕಾಂತ್ ಆಸ್ತಿ
- ರಜಿನಿಕಾಂತ್ ಚಾರಿಟಬಲ್ ಟ್ರಸ್ಟ್
- ರಜಿನಿಕಾಂತ್ ಸಮಾಜಮುಖಿ ನಿರ್ಧಾರ
- ರಾಘವೇಂದ್ರ ಮಂಟಪ
- ಸೂಪರ್ಸ್ಟಾರ್ ರಜಿನಿಕಾಂತ್ ಇತ್ತೀಚಿನ ಸುದ್ದಿ





Leave a comment