Home ಕ್ರೈಂ ನ್ಯೂಸ್ 82 ಮಂದಿಗೆ ಹನಿ ಟ್ರ್ಯಾಪ್: ಯುವತಿಯ ನಕಲಿ ಪ್ರೊಫೈಲ್‌ನಿಂದ 25 ಲಕ್ಷ ರೂ. ಎಗರಿಸಿದ ಹೈದರಾಬಾದ್ ಕಿಲಾಡಿ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

82 ಮಂದಿಗೆ ಹನಿ ಟ್ರ್ಯಾಪ್: ಯುವತಿಯ ನಕಲಿ ಪ್ರೊಫೈಲ್‌ನಿಂದ 25 ಲಕ್ಷ ರೂ. ಎಗರಿಸಿದ ಹೈದರಾಬಾದ್ ಕಿಲಾಡಿ ಅರೆಸ್ಟ್!

Share
ಯುವತಿ
Share

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು, ಸುಂದರ ಯುವತಿಯ ಚಿತ್ರಗಳನ್ನು ಬಳಸಿ ಬಲೆ ಬೀಸಿ ಆನ್‌ಲೈನ್ ಹನಿ ಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 23 ವರ್ಷದ ಯುವಕನನ್ನು ಹೈದರಾಬಾದ್‌ನ ಸೈದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕುಕಟ್‌ಪಲ್ಲಿ ನಿವಾಸಿ, ಕೊಂಡಬತ್ತುಲ ಪವನ್ ಕುಮಾರ್ ಎಂದು ಗುರುತಿಸಲಾಗಿದೆ.

ಆರೋಪಿಯು ಇನ್‌ಸ್ಟಾಗ್ರಾಮ್‌ನಲ್ಲಿ 13 ಹಾಗೂ ಫೇಸ್‌ಬುಕ್‌ನಲ್ಲಿ 14 ಸೇರಿದಂತೆ ಒಟ್ಟು 27 ನಕಲಿ ಖಾತೆಗಳನ್ನು ಸೃಷ್ಟಿಸಿದ್ದ. ಕೋಲ್ಕತಾದ ಯುವತಿಯೊಬ್ಬಳ ಫೋಟೋಗಳನ್ನು ಬಳಸಿ ಜನರನ್ನು ಸಂಪರ್ಕಿಸುತ್ತಿದ್ದ ಈತ, ಆನ್‌ಲೈನ್‌ನಲ್ಲಿ ನಿಕಟ ಸಂಬಂಧ ಬೆಳೆಸಿ ಖಾಸಗಿ ಫೋಟೋ ಹಾಗೂ ವೀಡಿಯೊಗಳನ್ನು ಹಂಚಿಕೊಳ್ಳುವಂತೆ ಪ್ರಚೋದಿಸುತ್ತಿದ್ದನು. ತದನಂತರ ಅದೇ ಯುವತಿಯ ಸಹೋದರ ಎಂದು ಹೇಳಿಕೊಂಡು, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಹಾಗೂ ದೂರು ನೀಡುವುದಾಗಿ ಬೆದರಿಸಿ ಹಣ ಪೀಕುತ್ತಿದ್ದನು.

ದೊಡ್ಡ ಜಾಲ: ಆರೋಪಿಯು ಕಳೆದ 3 ರಿಂದ 4 ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕ ಹೊಂದಿದ್ದು, ಅವರಲ್ಲಿ 82 ಪುರುಷರು ಆತನ ಹನಿ ಟ್ರ್ಯಾಪ್‌ಗೆ ಬಲಿಯಾಗಿದ್ದಾರೆ.

ಸಂತ್ರಸ್ತರ ವಿವರ: ಖಾಸಗಿ ಚಿತ್ರಗಳನ್ನು ಹಂಚಿಕೊಂಡು ವಂಚನೆಗೊಳಗಾದವರಲ್ಲಿ ವೈದ್ಯರು, ಉದ್ಯಮಿಗಳು, ಉಪನ್ಯಾಸಕರು, ಖಾಸಗಿ ವಲಯದ ನೌಕರರು ಮತ್ತು ಡೆಲಿವರಿ ಸಿಬ್ಬಂದಿ ಸೇರಿದ್ದಾರೆ.

ವ್ಯಾಪ್ತಿ ಹಾಗೂ ಹಣ: ದೇಶದ ವಿವಿಧ ರಾಜ್ಯಗಳ 24 ಮಂದಿ ಹಾಗೂ ವಿದೇಶದ 9 ಮಂದಿ ಈತನ ಜಾಲಕ್ಕೆ ಬಿದ್ದಿದ್ದಾರೆ. ಬ್ಲ್ಯಾಕ್‌ಮೇಲ್ ಮೂಲಕ ಸುಮಾರು 18 ಲಕ್ಷ ರೂ. ಹಾಗೂ ಹೂಡಿಕೆಯ ಹೆಸರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ 7.16 ಲಕ್ಷ ರೂ. ವಂಚಿಸಿದ್ದು, ಒಟ್ಟು 25.16 ಲಕ್ಷ ರೂ. ಪೀಕಿದ್ದಾನೆ.

ಪೊಲೀಸರು ಆರೋಪಿಯಿಂದ 3 ಮೊಬೈಲ್ ಫೋನ್, 1 ಲ್ಯಾಪ್‌ಟಾಪ್ ಹಾಗೂ ಪೆನ್‌ಡ್ರೈವ್ ಜಪ್ತಿ ಮಾಡಿದ್ದು, ಆತನಿಗೆ ಸೇರಿದ 2 ವಾಟ್ಸಾಪ್ ಹಾಗೂ 3 ಬ್ಯಾಂಕ್ ಖಾತೆಗಳನ್ನು ಗುರುತಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles