Home ಕ್ರೈಂ ನ್ಯೂಸ್ ಅನಧಿಕೃತ ಸ್ಪಾ, ಮಸಾಜ್ ಸೆಂಟರ್‌ಗಳ ವಿರುದ್ಧ ಕೇರಳ ಸರ್ಕಾರದ ಸರ್ಜಿಕಲ್ ಸ್ಟ್ರೈಕ್: ರಾಜ್ಯಾದ್ಯಂತ ‘ಆಪರೇಷನ್ ಸ್ಪಾ’ ಶುರು! ಅನಧಿಕೃತ ಸ್ಪಾ, ಮಸಾಜ್ ಸೆಂಟರ್‌ಗಳ ವಿರುದ್ಧ ಕೇರಳ ಸರ್ಕಾರದ ಸರ್ಜಿಕಲ್ ಸ್ಟ್ರೈಕ್: ರಾಜ್ಯಾದ್ಯಂತ ‘ಆಪರೇಷನ್ ಸ್ಪಾ’ ಶುರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನಧಿಕೃತ ಸ್ಪಾ, ಮಸಾಜ್ ಸೆಂಟರ್‌ಗಳ ವಿರುದ್ಧ ಕೇರಳ ಸರ್ಕಾರದ ಸರ್ಜಿಕಲ್ ಸ್ಟ್ರೈಕ್: ರಾಜ್ಯಾದ್ಯಂತ ‘ಆಪರೇಷನ್ ಸ್ಪಾ’ ಶುರು! ಅನಧಿಕೃತ ಸ್ಪಾ, ಮಸಾಜ್ ಸೆಂಟರ್‌ಗಳ ವಿರುದ್ಧ ಕೇರಳ ಸರ್ಕಾರದ ಸರ್ಜಿಕಲ್ ಸ್ಟ್ರೈಕ್: ರಾಜ್ಯಾದ್ಯಂತ ‘ಆಪರೇಷನ್ ಸ್ಪಾ’ ಶುರು!

Share
ಕೇರಳ
Share

ತ್ರಿಶ್ಶೂರ್ (ಕೇರಳ): ರಾಜ್ಯದಲ್ಲಿ ನಕಲಿ ಸ್ಪಾ ಹಾಗೂ ಮಸಾಜ್ ಸೆಂಟರ್‌ಗಳ ಮರೆಯಲ್ಲಿ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ, ಮಹಿಳೆಯರ ಶೋಷಣೆ ಹಾಗೂ ಹಣಕಾಸು ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ, ರಾಜ್ಯಾದ್ಯಂತ ‘ಆಪರೇಷನ್ ಸ್ಪಾ’ (Operation Spa) ಹೆಸರಿನಲ್ಲಿ ಬೃಹತ್ ಪೊಲೀಸ್ ದಾಳಿ ಆರಂಭಿಸಿದೆ. ಕಾನೂನು ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಎಲ್ಲಾ ಅಕ್ರಮ ಸ್ಪಾಗಳನ್ನು ತಕ್ಷಣವೇ ಬಂದ್ ಮಾಡಲಾಗುವುದು ಎಂದು ಕೇರಳ ಗೃಹ ಸಚಿವ ರಮೇಶ್ ಚೆನ್ನಿಥಾಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ತ್ರಿಶ್ಶೂರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಗಂಭೀರ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದರು. ಇತ್ತೀಚೆಗೆ ತಿರುವನಂತಪುರದ ಕೋವಲಂನಲ್ಲಿರುವ ಸ್ಪಾವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಕೊಚ್ಚಿಯ ಸ್ಪಾವೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದವು.

ಅಕ್ರಮ ಸ್ಪಾಗಳಿಗೆ ಹೊಸ ಕಾಯ್ದೆಯ ಮೂಗುದಾರ

ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ಸ್ಪಾಗಳನ್ನು ತೆರೆದು, ಯಾವುದೇ ಸೂಕ್ತ ಪರಿಶೀಲನೆ ಇಲ್ಲದೆ ಅಕ್ರಮ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ರಾಜ್ಯದ ಒಳಗಿನಿಂದ ಹಾಗೂ ಹೊರರಾಜ್ಯಗಳಿಂದ ಮಹಿಳೆಯರನ್ನು ಕರೆತಂದು ಇಲ್ಲಿ ಶೋಷಣೆಗೊಳಪಡಿಸಲಾಗುತ್ತಿದೆ. ಸಾಲದೆಂಬಂತೆ ಸಾರ್ವಜನಿಕರು ಹಾಗೂ ಕುಟುಂಬಗಳಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಸ್ಪಾ ರಂಗವನ್ನು ನಿಯಂತ್ರಿಸಲು ವಿಶೇಷ ಶಾಸನ/ಕಾಯ್ದೆ ರೂಪಿಸಲು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಮಾದಕ ದ್ರವ್ಯ ಮುಕ್ತ ಅಭಿಯಾನ (‘ಆಪರೇಷನ್ ತೂಫಾನ್’):

ಕೇರಳ ಪೊಲೀಸರು ಕೈಗೊಂಡಿರುವ ‘ಆಪರೇಷನ್ ತೂಫಾನ್’ ಡ್ರಗ್ಸ್ ವಿರೋಧಿ ಕಾರ್ಯಾಚರಣೆಯಿಂದಾಗಿ ರಾಜ್ಯದಲ್ಲಿ ಶೇ. 30ಕ್ಕಿಂತ ಹೆಚ್ಚು ಮಾದಕ ವಸ್ತುಗಳ ಬಳಕೆ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು. ಅಲ್ಲದೆ, ಹಿಂಸಾತ್ಮಕ ಕೃತ್ಯಗಳು ಹಾಗೂ ಕೊಲೆ ಪ್ರಕರಣಗಳ ಸಂಖ್ಯೆಯಲ್ಲೂ ಗಮನಾರ್ಹ ಇಳಿಕೆಯಾಗಿದೆ. ಇದನ್ನು ಇನ್ನಷ್ಟು ತೀವ್ರಗೊಳಿಸಲು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

10,000 ಡ್ರಂಕ್ ಅಂಡ್ ಡ್ರೈವ್ ಕೇಸ್:

ಹಬ್ಬದ ಋತುವಿನಲ್ಲಿ ರಸ್ತೆ ಅಪಘಾತ ತಡೆಯಲು ಜಾರಿಗೆ ತಂದ ಕಟ್ಟುನಿಟ್ಟಿನ ನಿಯಮಗಳ ಭಾಗವಾಗಿ, ಕಳೆದ ಎರಡೇ ದಿನಗಳಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ 10,000 ಜನರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡುಮಾಡಿದರೆ ಚಾಲನಾ ಪರವಾನಗಿಯನ್ನು  ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles