Home ದಾವಣಗೆರೆ ಲೆಕ್ಕವಿಲ್ಲದಷ್ಟು ಗೂಗಲ್ ಪೇ ಹಣದ ವರ್ಗಾವಣೆ ಹಾಗೂ ಪರಪುರುಷರ ನಂಟು ಶಂಕೆ: ಪತ್ನಿ ಕೊಂದ ಪತಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಲೆಕ್ಕವಿಲ್ಲದಷ್ಟು ಗೂಗಲ್ ಪೇ ಹಣದ ವರ್ಗಾವಣೆ ಹಾಗೂ ಪರಪುರುಷರ ನಂಟು ಶಂಕೆ: ಪತ್ನಿ ಕೊಂದ ಪತಿ!

Share
ಪತ್ನಿ
Share

ನವಿ ಮುಂಬೈ: ಪತ್ನಿಯ ಮೊಬೈಲ್ ಫೋನ್ ಅಕೌಂಟ್‌ಗೆ ಗೂಗಲ್ ಪೇ ಮೂಲಕ ನಿರಂತರವಾಗಿ ಹಣ ಜಮೆಯಾಗುತ್ತಿರುವುದು ಮತ್ತು ಪರಪುರುಷರೊಂದಿಗೆ ನಿರಂತರವಾಗಿ ಮಾತನಾಡುವುದನ್ನು ಶಂಕಿಸಿದ ಪತಿಯೊಬ್ಬ, ತನ್ನ ಪತ್ನಿಯನ್ನು ಮನಸೋಇಚ್ಛೆ ಥಳಿಸಿ ಭೀಕರವಾಗಿ ಹತ್ಯೆ ಮಾಡಿರುವ ದೊಡ್ಡ ಆಘಾತಕಾರಿ ಘಟನೆ ಮಹಾರಾಷ್ಟ್ರದ ನವಿ ಮುಂಬೈನ ಕಳಂಬೋಲಿ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಪಿಂಕಿ ಮನೀಶ್ ಗೋಪ್ ಅಲಿಯಾಸ್ ಸೋನಿಯಾ ಮೊಹಮ್ಮದ್ ಅಬು ಖಾತೂನ್ (31) ಎಂದು ಗುರುತಿಸಲಾಗಿದೆ. ಈಕೆಯು ಮೂಲತಃ ಬಾಂಗ್ಲಾದೇಶದ ಪ್ರಜೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತಿ ಮನೀಶ್ ಗೋಪ್ ಕಳಂಬೋಲಿಯಲ್ಲಿ ಡೆಲಿವರಿ ಕೆಲಸ ಮಾಡಿಕೊಂಡಿದ್ದನು.

ಘಟನೆಯ ಹಿನ್ನೆಲೆ ಏನು?

ಆರೋಪಿ ಮನೀಶ್ ಗೋಪ್ ತನ್ನ ಪತ್ನಿ ಪಿಂಕಿ ಬೇರೆ ಪುರುಷರೊಂದಿಗೆ ಅತಿಯಾಗಿ ಮಾತನಾಡುತ್ತಾಳೆ ಮತ್ತು ಇತರ ವ್ಯಕ್ತಿಗಳಿಂದ ನಿರಂತರವಾಗಿ ಗೂಗಲ್ ಪೇ (Google Pay) ಮೂಲಕ ಆಕೆಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎಂದು ತೀವ್ರವಾಗಿ ಅನುಮಾನಗೊಂಡಿದ್ದನು. ಈ ವಿಷಯವಾಗಿ ದಂಪತಿಗಳ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು.

ಅದರಂತೆ ಅಕ್ಟೋಬರ್ 15ರಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದಂಪತಿಗಳ ನಡುವೆ ಮತ್ತೆ ಗಂಭೀರ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಆರೋಪಿ ಮನೀಶ್, ಪತ್ನಿಯ ಮುಖ, ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಮುಷ್ಠಿಯಿಂದ ಹಾಗೂ ಕಾಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರ ಸ್ವರೂಪದ ಆಂತರಿಕ ಗಾಯಗಳಿಂದ ನರಳಾಡಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಪೊಲೀಸ್ ತನಿಖೆ ಮತ್ತು ಆರೋಪಿ ಬಂಧನ

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಳಂಬೋಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಸ್ಥಳದಲ್ಲೇ ಮಹಜರು ಕೈಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿಕೊಂಡು ಕಾಯ್ದು ತನಿಖೆ ಮುಂದುವರೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles