Home ದಾವಣಗೆರೆ ಕೇಂದ್ರ ಸರ್ಕಾರದಿಂದ ಮಹತ್ವದ ಅಭಯ: ಆಧಾರ್ ಕಾರ್ಡ್ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ನಿಲ್ಲಲ್ಲ ಸ್ಕಾಲರ್‌ಶಿಪ್!
ದಾವಣಗೆರೆನವದೆಹಲಿಬೆಂಗಳೂರು

ಕೇಂದ್ರ ಸರ್ಕಾರದಿಂದ ಮಹತ್ವದ ಅಭಯ: ಆಧಾರ್ ಕಾರ್ಡ್ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ನಿಲ್ಲಲ್ಲ ಸ್ಕಾಲರ್‌ಶಿಪ್!

Share
ಆಧಾರ್
Share

ನವದೆಹಲಿ: 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಎಂ ಕೇರ್ಸ್ ಸ್ಕಾಲರ್‌ಶಿಪ್ ಯೋಜನೆಯ ಲಾಭ ಪಡೆಯಲು ಆಧಾರ್ ಸಂಖ್ಯೆ ಅಥವಾ ಆಧಾರ್ ದೃಢೀಕರಣವನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಆಧಾರ್ ಇಲ್ಲದ ಅಥವಾ ಆಧಾರ್ ದೃಢೀಕರಣ ವಿಫಲವಾದ ಕಾರಣಕ್ಕೆ ಯಾವುದೇ ಮಗುವಿಗೆ ಸ್ಕಾಲರ್‌ಶಿಪ್ ನೆರವನ್ನು ನಿರಾಕರಿಸಲಾಗುವುದಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸ್ಪಷ್ಟಪಡಿಸಿದೆ.

ಅಕ್ಟೋಬರ್ 14 ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆ ಇಲ್ಲದಿದ್ದರೂ ಪರ್ಯಾಯ ದಾಖಲೆಗಳನ್ನು ಪರಿಶೀಲಿಸಿ ಶೈಕ್ಷಣಿಕ ಧನಸಹಾಯವನ್ನು ತಡೆರಹಿತವಾಗಿ ತಲುಪಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪರ್ಯಾಯ ಗುರುತಿನ ಚೀಟಿಗಳ ಬಳಕೆ: ಆಧಾರ್ ಇಲ್ಲದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದಾಖಲಾತಿ ಸಂಖ್ಯೆ (Enrolment ID), ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಥವಾ 10/12ನೇ ತರಗತಿ ಅಂಕಪಟ್ಟಿ ಸಲ್ಲಿಸಿ ನೆರವು ಪಡೆಯಬಹುದು.

ಪೋಷಕರ ಸಂಬಂಧದ ದೃಢೀಕರಣ: ಪೋಷಕರು ಅಥವಾ ಕಾನೂನುಬದ್ಧ ರಕ್ಷಕರೊಂದಿಗಿನ ಬಾಂಧವ್ಯವನ್ನು ದೃಢೀಕರಿಸಲು ಪಡಿತರ ಚೀಟಿ, ಪಾಸ್‌ಪೋರ್ಟ್, ಜಾತಿ ಅಥವಾ ನಿವಾಸಿ ಪ್ರಮಾಣಪತ್ರಗಳನ್ನು ಒದಗಿಸಬೇಕಾಗುತ್ತದೆ.

ಬಯೋಮೆಟ್ರಿಕ್ ಪರ್ಯಾಯ ವ್ಯವಸ್ಥೆ: ಬಯೋಮೆಟ್ರಿಕ್ ದೃಢೀಕರಣ ವಿಫಲವಾದರೆ, ಒಟಿಪಿ (OTP) ಅಥವಾ ಇತರ ಬಯೋಮೆಟ್ರಿಕ್ ವಿಧಾನಗಳ ಮೂಲಕ ಪರಿಶೀಲನೆಗೆ ಅವಕಾಶ ನೀಡಲಾಗುತ್ತದೆ.

ನೊಂದಣಿಗೆ ನೆರವು: ಆಧಾರ್ ಇಲ್ಲದ ಅರ್ಹ ವಿದ್ಯಾರ್ಥಿಗಳನ್ನು ಹೊಸದಾಗಿ ಆಧಾರ್ ನೊಂದಣಿ ಮಾಡಲು ಹಾಗೂ ವಿವರಗಳನ್ನು ನವೀಕರಿಸಲು ಸಂಬಂಧಪಟ್ಟ ಇಲಾಖೆಯು ಪೂರ್ಣ ಸಹಾಯ ಮಾಡಲಿದೆ.

ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಆಧಾರ್ ಹೊಂದಿಲ್ಲದ ಅಥವಾ ತಾಂತ್ರಿಕ ಕಾರಣಗಳಿಂದ ದೃಢೀಕರಣಗೊಳ್ಳದ ಸಾವಿರಾರು ಬಡ ಮತ್ತು ಶೋಷಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ದೊಡ್ಡ ಮಟ್ಟದ ಆಸರೆಯಾಗಲಿದೆ.

Share

Leave a comment

Leave a Reply

Your email address will not be published. Required fields are marked *