Home ಕ್ರೈಂ ನ್ಯೂಸ್ ‘ನಾವು ಈ ಪ್ರಪಂಚ ತೊರೆಯುತ್ತಿದ್ದೇವೆ’: ಕಂಪನಿಗೆ ಇಮೇಲ್ ಕಳುಹಿಸಿ ಜನ್ಮದಿನದ ಸಂಭ್ರಮದಲ್ಲಿದ್ದ ಪತ್ನಿ ಕೊಂದು ಟೆಕ್ಕಿ ಆತ್ಮಹತ್ಯೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

‘ನಾವು ಈ ಪ್ರಪಂಚ ತೊರೆಯುತ್ತಿದ್ದೇವೆ’: ಕಂಪನಿಗೆ ಇಮೇಲ್ ಕಳುಹಿಸಿ ಜನ್ಮದಿನದ ಸಂಭ್ರಮದಲ್ಲಿದ್ದ ಪತ್ನಿ ಕೊಂದು ಟೆಕ್ಕಿ ಆತ್ಮಹತ್ಯೆ!

Share
ಪತ್ನಿ
Share

ಗುರುಗ್ರಾಮ: ಕೇರಳ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ಮ ಕಂಪನಿಗೆ “ನಾವು ಈ ಪ್ರಪಂಚವನ್ನು ತೊರೆಯುತ್ತಿದ್ದೇವೆ” ಎಂದು ಇಮೇಲ್ ಕಳುಹಿಸಿ, ಹೆಂಡತಿಯನ್ನು ಕೊಲೆ ಮಾಡಿ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿರುವ  ಘಟನೆ ಗುರುಗ್ರಾಮದ ಎಮ್‌3ಎಮ್ ಮರೀನಾ ವಸತಿ ಸಮುಚ್ಚಯದಲ್ಲಿ ನಡೆದಿದೆ.

ಮೃತರನ್ನು ಮೊಹಮ್ಮದ್ ಅಸ್ಲಂ (30) ಹಾಗೂ ಅವರ ಪತ್ನಿ ಫರ್ಹಾನಾ ಎಂದು ಗುರುತಿಸಲಾಗಿದ್ದು, ಪತ್ನಿಯ ಜನ್ಮದಿನದಂದೇ ಈ ದುರಂತ ಸಂಭವಿಸಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಿಂದ ಗುರುಗ್ರಾಮಕ್ಕೆ ಸ್ಥಳಾಂತರಗೊಂಡಿದ್ದ ಈ ದಂಪತಿ ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದರು. ಅಸ್ಲಂ ಕಂಪನಿಗೆ ಕಳುಹಿಸಿದ ಇಮೇಲ್ ನೋಡಿ ಸಹೋದ್ಯೋಗಿಗಳು ಆಸ್ತಿ ಮಾಲೀಕರಿಗೆ (ಲ್ಯಾಂಡ್‌ಲಾರ್ಡ್) ಮಾಹಿತಿ ನೀಡಿದ್ದಾರೆ. ಮಾಲೀಕರು ಬಂದು ನೋಡಿದಾಗ ಅಪಾರ್ಟ್‌ಮೆಂಟ್ ಬಾಗಿಲು ತೆರೆದಿದ್ದು, ಅಸ್ಲಂ ಶವ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಫರ್ಹಾನಾ ಶವ ಕತ್ತಿನ ಗಾಯಗಳೊಂದಿಗೆ ನೆಲದ ಮೇಲೆ ಪತ್ತೆಯಾಗಿದೆ. ಮೃತದೇಹದ ಮೇಲಿದ್ದ ಉಡುಪಿನಲ್ಲಿ ‘ಐ ಲವ್ ಯು’ ಎಂದು ಕೈಬರಹದಲ್ಲಿ ಬರೆಯಲಾಗಿತ್ತು.

ಹಿನ್ನೆಲೆ ಹಾಗೂ ಶಿಕ್ಷಣ: ಅಸ್ಲಂ ಎನ್‌ಐಟಿ ಕಾಲಿಕಟ್ ಹಾಗೂ ಐಐಎಂ ಇಂದೋರ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ಪತ್ನಿ ಫರ್ಹಾನಾ ವರ್ಕ್ ಫ್ರಮ್ ಹೋಮ್ ಮೂಲಕ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ತನಿಖೆ ಹಾಗೂ ವಶ: ಘಟನಾ ಸ್ಥಳದಿಂದ ಪೊಲೀಸರು 3 ಲ್ಯಾಪ್‌ಟಾಪ್, 2 ಮೊಬೈಲ್, ಡೈರಿ, ಕತ್ತರಿ, ಹಗ್ಗ ಹಾಗೂ ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ತನಿಖೆಗೆ ರವಾನಿಸಿದ್ದಾರೆ.

ಸಾಧ್ಯತೆಗಳು: ಅಸ್ಲಂ ಕಳೆದ ಒಂದೂವರೆ ವರ್ಷದಿಂದ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆಲಸದ ವಿಪರೀತ ಒತ್ತಡವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಸಂಬಂಧಿಕರು ಶಂಕಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ರಡಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *