Home ಕ್ರೈಂ ನ್ಯೂಸ್ 40 ವರ್ಷ ಭಾರತದಲ್ಲೇ ಇದ್ದವರಿಗೆ ಈ ಸ್ಥಿತಿಯೇ?: ಇಮ್ರಾನ್ ಖಾನ್ ಪರ ರಂಗಕ್ಕಿಳಿದ ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಬಾಲಿವುಡ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

40 ವರ್ಷ ಭಾರತದಲ್ಲೇ ಇದ್ದವರಿಗೆ ಈ ಸ್ಥಿತಿಯೇ?: ಇಮ್ರಾನ್ ಖಾನ್ ಪರ ರಂಗಕ್ಕಿಳಿದ ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಮತ್ತು ಬಾಲಿವುಡ್!

Share
ಕಿರಣ್ ರಾವ್
Share

ಮುಂಬೈ: ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಅಕ್ಟೋಬರ್ 28 ರೊಳಗೆ ಭಾರತ ತೊರೆಯುವಂತೆ ಮುಂಬೈನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೋಟಿಸ್ ನೀಡಿದೆ. ಈ ಕ್ರಮವನ್ನು ಖಂಡಿಸಿರುವ ನಿರ್ಮಾಪಕಿ ಹಾಗೂ ನಿರ್ದೇಶಕಿ ಕಿರಣ್ ರಾವ್, ಇಮ್ರಾನ್ ಖಾನ್ ಪರವಾಗಿ ಧ್ವನಿ ಎತ್ತಿದ್ದು ನೋಟಿಸ್ ಕುರಿತು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10 ರಂದು ಕೊಕ್ರೋಚ್ ಜನತಾ ಪಾರ್ಟಿ  ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಭಾಗವಹಿಸಿದ್ದರು. ಅಮೆರಿಕದ ಪಾಸ್‌ಪೋರ್ಟ್ ಹಾಗೂ ‘ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ’ (OCI) ಕಾರ್ಡ್ ಹೊಂದಿರುವ ಇಮ್ರಾನ್ ಖಾನ್, OCI ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ನೀಡಿದ ದೂರಿನ ಆಧಾರದ ಮೇಲೆ FRRO ಈ ಕ್ರಮ ಕೈಗೊಂಡಿದೆ.

ಕಿರಣ್ ರಾವ್ ಬೆಂಬಲ: “ಇಮ್ರಾನ್ ಖಾನ್‌ಗೆ 43 ವರ್ಷ ವಯಸ್ಸು, ಅದರಲ್ಲಿ 40 ವರ್ಷಗಳನ್ನು ಅವರು ಭಾರತದಲ್ಲೇ ಕಳೆದಿದ್ದಾರೆ. ಇಲ್ಲೇ ವ್ಯಾಸಂಗ ಮಾಡಿ, ಕೆಲಸ ಮಾಡಿ, ಪ್ರೀತಿಸಿ, ಗೆದ್ದು ಸೋತಿದ್ದಾರೆ. ಈಗ ಮುಂಬೈ ಪೊಲೀಸರು ಈ ರೀತಿ ಮಾಡುತ್ತಿರುವುದು ಆಶ್ಚರ್ಯಕರ” ಎಂದು ಕಿರನ್ ರಾವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪ್ರತಿಭಟನೆಯ ಹಿನ್ನೆಲೆ: ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್ ಮತ್ತು ಅವರ ಸಂಗಾತಿ ಲೇಖಾ ವಾಷಿಂಗ್ಟನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ನ್ಯಾಯಾಲಯದ ಮೊರೆ: FRRO ನೀಡಿರುವ ನಿರ್ಗಮನ ನೋಟಿಸ್‌ ಅನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಅವರ ಕಾನೂನು ತಂಡವು ಮುಂಬೈ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದೆ.

ಈ ಕ್ರಮವು ಅತ್ಯಂತ ಕಠಿಣವಾಗಿದ್ದು, OCI ಕಾರ್ಡ್‌ದಾರರು ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಾರದು ಎಂದು ಯಾವುದೇ ನಿರ್ದಿಷ್ಟ ಕಾನೂನು ನಿಯಮವಿಲ್ಲ ಎಂದು ಇಮ್ರಾನ್ ಖಾನ್ ಪರ ವಕೀಲ ಜುಲ್ಫಿಕರ್ ಮೇಮನ್ ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles