Home ಕ್ರೈಂ ನ್ಯೂಸ್ ನನ್ನನ್ನು ತಾಕತ್ತಿದ್ದರೆ ಬಂಧಿಸಿ, ನಿಮ್ಮಪ್ಪನ ಆಸ್ತಿನಾ ಗೃಹ ಇಲಾಖೆ? ಎಷ್ಟು ಮನೆ ಹಾಳು ಮಾಡಬೇಕೆಂದಿದ್ದೀರಿ: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್. ಡಿ. ಕುಮಾರಸ್ವಾಮಿ ರೋಷ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನನ್ನನ್ನು ತಾಕತ್ತಿದ್ದರೆ ಬಂಧಿಸಿ, ನಿಮ್ಮಪ್ಪನ ಆಸ್ತಿನಾ ಗೃಹ ಇಲಾಖೆ? ಎಷ್ಟು ಮನೆ ಹಾಳು ಮಾಡಬೇಕೆಂದಿದ್ದೀರಿ: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್. ಡಿ. ಕುಮಾರಸ್ವಾಮಿ ರೋಷ!

Share
ಹೆಚ್. ಡಿ. ಕುಮಾರಸ್ವಾಮಿ
Share

ಬೆಂಗಳೂರು: ನಿಮ್ಮಪ್ಪನ ಆಸ್ತಿನಾ ಗೃಹ ಇಲಾಖೆ. ಎಷ್ಟು ಮನೆ ಹಾಳು ಮಾಡಬೇಕು ಎಂದಿದ್ದೀರಿ. ನನಗೆ ನೊಟೀಸ್ ಕೊಡಿ. ಜೆಡಿಎಸ್ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ದಬ್ಬಾಳಿಕೆ ನಡೆಸುವುದು ಯಾಕೆ? ಯಾರು ಅವ್ನು. ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡಿದ್ದಾನೆ ಠಾಣೆಯಲ್ಲಿ. ಅಂಥವನಿಗೆ ರಕ್ಷಣೆ ಕೊಡ್ತೀರಾ. ನನ್ನನ್ನು ಬೇಕಾದರೆ ಬಂಧಿಸಿ ಎಂದು ಕೇಂದ್ರದ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಏಕವಚನದಲ್ಲಿಯೇ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ, ಮುನಿರತ್ನ, ಕೆ. ಎನ್. ರಾಜಣ್ಣರನ್ನು ಹೇಗೆ ಮುಗಿಸಿದ್ದೀರಾ? ನನ್ನ ಜೊತೆ ಆಟ ಆಡಿದರೆ ಸುಮ್ಮನಿರಲ್ಲ. ಸಂಶಯ ಬಂದರೆ ನನ್ನನ್ನು ವಶಕ್ಕೆ ಪಡೆಯುತ್ತಾರಂತೆ. ಯಾರನ್ನು ಕೇಳಿ ಬಂಧಿಸುತ್ತೀರಾ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೂರಿಸಿಕೊಂಡಿದ್ದೀರಲ್ವಾ. ಏನು ಸಿಕ್ಕಿದೆ ನಿಮಗೆ ಎಂದರು.

ಸ್ಕ್ರಿಪ್ಟ್ ರೈಟರ್ ನಾನಾ. ನೀವಾ? ಪ್ರಿಯಾಂಕ್ ಖರ್ಗೆ ಮತ್ತು ಸಿಎಂ ಶಿವಕುಮಾರ್ ಅವರು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ. ಆಪರೇಷನ್ ಸ್ಟಿಂಗ್ ಮಾಡಿದ್ದ ಬಗ್ಗೆ ತನಿಖೆ ಮಾಡಿಸಲಿ. ನೀವು ತಯಾರಾಗಿರಿ. ನೊಟೀಸ್ ಕೊಟ್ಟರೆ ಹೆದರಿಕೊಂಡು ಕುಳಿತುಕೊಳ್ಳುತ್ತೀನಾ. ಹೋರಾಟಕ್ಕೆ ಶುರು, ಅಖಾಡ ಸಿದ್ಧವಾಗಿದೆ. ತಪ್ಪು ಮಾಡಿದ್ದರೆ ನಾನು ತಲೆಬಾಗುತ್ತೇನೆ. ಒತ್ತಾಯಿಸಿ, ಹೆದರಿಸಿ ಬೆದರಿಸಿದರೆ ಹೇಳಿಕೆ ತೆಗೆದುಕೊಂಡರೆ ನಾವು ಸುಮ್ಮನೆ ಇರಲ್ಲ. ಬರಬೇಕೋ ನಾನೇ ಬರುತ್ತೇನೆ. ಬಾರಪ್ಪಾ ಅರೆಸ್ಟ್ ಮಾಡು ನೋಡುತ್ತೇನೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles