Home ಕ್ರೈಂ ನ್ಯೂಸ್ “ನಾನು ಯಾವುದೇ ತಪ್ಪು ಮಾಡಿಲ್ಲ, ತನಿಖೆಗೆ ಸಹಕರಿಸುವೆ”:” ಅದು ಕೊಲೆಯಲ್ಲ, ಆತ್ಮಹತ್ಯೆ” ಎಂದ ಇನ್‌ಫ್ಲುಯೆನ್ಸರ್ ಶ್ರದ್ಧಾ ದುಬೆ..!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ನಾನು ಯಾವುದೇ ತಪ್ಪು ಮಾಡಿಲ್ಲ, ತನಿಖೆಗೆ ಸಹಕರಿಸುವೆ”:” ಅದು ಕೊಲೆಯಲ್ಲ, ಆತ್ಮಹತ್ಯೆ” ಎಂದ ಇನ್‌ಫ್ಲುಯೆನ್ಸರ್ ಶ್ರದ್ಧಾ ದುಬೆ..!

Share
ಶ್ರದ್ಧಾ ದುಬೆ
Share

ಲಕ್ನೋ: ಪ್ರೇಮಿ, 28 ವರ್ಷದ ಯುವ ಉದ್ಯಮಿ ಶಿವ ಶರ್ಮಾ ಅವರ ಸಾವಿನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್‌ಫ್ಲುಯೆನ್ಸರ್ ಹಾಗೂ ಮೇಕ್‌ಅಪ್ ಆರ್ಟಿಸ್ಟ್ ಶ್ರದ್ಧಾ ದುಬೆ ತಮ್ಮ ಮೊದಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶಿವ ಶರ್ಮಾ ಸಾವು ಕೊಲೆಯಲ್ಲ, ಬದಲಿಗೆ ಅದು ಆತ್ಮಹತ್ಯೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದು ನಿಮಿಷಕ್ಕೂ ಅಧಿಕ ಸಮಯವಿರುವ ಈ ವಿಡಿಯೋದಲ್ಲಿ ಮಾತನಾಡಿದ ಶ್ರದ್ಧಾ ದುಬೆ, ತಾನು ಯಾವುದೇ ತಪ್ಪು ಮಾಡಿಲ್ಲವೆಂದೂ, “ಅದು ಕೊಲೆಯಲ್ಲ” ಎಂದು ಹೇಳಿದ್ದಾರೆ. ತಾನು ಪೊಲೀಸರ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಲು ಮತ್ತು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧಳಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಹಿರಿಯ ಅಧಿಕಾರಿಗಳು ಅಥವಾ ರಾಜಕಾರಣಿಗಳೊಂದಿಗೆ ತನಗೆ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತನ್ನ ಹೆಸರನ್ನು ಅವರೊಂದಿಗೆ ತಳಕು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ತಮ್ಮ ಆರೋಗ್ಯ ಸರಿಯಿಲ್ಲದಿರುವ ಕಾರಣ ಸದ್ಯಕ್ಕೆ ದೈಹಿಕವಾಗಿ ಸದೃಢವಾಗಿಲ್ಲ ಎಂದಿರುವ ಶ್ರದ್ಧಾ, ತಾನು ಎಲ್ಲೂ ನಾಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಒಬ್ಪ ಮಹಿಳೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಮುನ್ನ ಎಲ್ಲರೂ ಯೋಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ರೆಸ್ಟೋರೆಂಟ್ ಸರಪಳಿ ಮಾಲೀಕರಾಗಿದ್ದ ಶಿವ ಶರ್ಮಾ, ಶ್ರದ್ಧಾ ದುಬೆ ಅವರ ಲಕ್ನೋ ಫ್ಲಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಶ್ರದ್ಧಾ ದುಬೆ ಹಾಗೂ ಅವರ ಸಹೋದರಿ ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕಾಗಿ ಲಕ್ನೋ ಪೊಲೀಸರು ತಲಾ 25,000 ರೂ. ಬಹುಘೋಷಣೆ ಮಾಡಿದ್ದಾರೆ.

ಮೃತನ ತಾಯಿ ರಂಜನಾ ಶರ್ಮಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಶ್ರದ್ಧಾ ದುಬೆ, ಆಕೆಯ ಸಹೋದರಿ ರಶ್ಮಿ, ಡ್ರೈವರ್ ಡ್ಯಾನಿಶ್, ಸಹಚರ ಆದಿಲ್ ಹಾಗೂ ಇತರೆ ಕೆಲವರ ವಿರುದ್ಧ ದೂರು ದಾಖಲಿಸಲಾಗಿದೆ. ತನ್ನ ಮಗನ ಅಶ್ಲೀಲ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಮತ್ತು ಮಾನಹಾನಿ ಮಾಡುವುದಾಗಿ ಶ್ರದ್ಧಾ ಬೆದರಿಕೆ ಹಾಕುತ್ತಿದ್ದರು ಹಾಗೂ ಪ್ರೀತಿಯ ಹೆಸರಿನಲ್ಲಿ ಕಳೆದ ನಾಲ್ಕು ತಿಂಗಳಿಂದ ದೈಹಿಕ ಹಿಂಸೆ ನೀಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ತಾಯಿ ಆರೋಪಿಸಿದ್ದಾರೆ.

ಸಂಜೆ 9 ಗಂಟೆ ಸುಮಾರಿಗೆ ಶ್ರದ್ಧಾ ತನಗೆ ಫೋನ್ ಮಾಡಿ ಶಿವ ಬಾಲ್ಕನಿಯಿಂದ ಬಿದ್ದು ಹೋಗಿದ್ದಾರೆ ಮತ್ತು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾಗಿ ರಂಜನಾ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತರ ತಾಯಿಯ ದೂರು ಹಾಗೂ ಶ್ರದ್ಧಾ ದುಬೆ ಅವರ ವಿಡಿಯೋ ಹೇಳಿಕೆಯ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles