Home ದಾವಣಗೆರೆ ಜಿಎಂಐಟಿಯಲ್ಲಿ 22ನೇ ಪದವಿ ಪ್ರದಾನ ಸಮಾರಂಭ: 668 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ದಾವಣಗೆರೆನವದೆಹಲಿಬೆಂಗಳೂರು

ಜಿಎಂಐಟಿಯಲ್ಲಿ 22ನೇ ಪದವಿ ಪ್ರದಾನ ಸಮಾರಂಭ: 668 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

Share
ಪದವಿ
Share

ದಾವಣಗೆರೆ: ನಗರದ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (GMIT) ಕಾಲೇಜಿನಲ್ಲಿ 2025-26ನೇ ಸಾಲಿನ ಉತ್ತೀರ್ಣರಾಗಿ ಪದವಿ ಪಡೆಯಲು ಅರ್ಹರಾಗಿರುವ ಬ್ಯಾಚ್‌ನ ವಿದ್ಯಾರ್ಥಿಗಳಿಗಾಗಿ 22ನೇ ಪದವಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ 17, 2026 ರ ಶನಿವಾರ ಬೆಳಿಗ್ಗೆ 10:30 ಕ್ಕೆ ಕಾಲೇಜಿನ ‘ಜಿಎಂ ಹಾಲಮ್ಮ ಆಡಿಟೋರಿಯಂ’ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ವಿವರಣೆ ನೀಡಿದ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಸ್. ಓಂಕಾರಪ್ಪ ಅವರು, ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 644 ಯುಜಿ ಹಾಗೂ 24 ಪಿಜಿ ಸೇರಿದಂತೆ ಒಟ್ಟು 668 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮಟ್ಟದಲ್ಲಿ ಜಿಎಂಐಟಿ ಕಾಲೇಜಿಗೆ 7 ರ‍್ಯಾಂಕ್ ಗಳ ತಂದ ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದ ಮೀನಾಕ್ಷಿ ವಿ.ಬಿ (ಮೊದಲ ರ‍್ಯಾಂಕ್ -ಚಿನ್ನದ ಪದಕ), ಕಿರಣ್ ಜೆ (2ನೇ ರ‍್ಯಾಂಕ್), ಪುಣ್ಯ ಟಿ.ಎಮ್ (4ನೇ ರ‍್ಯಾಂಕ್), ಎಸ್. ದೀಪ್ತಿ (5ನೇ ರ‍್ಯಾಂಕ್), ಸುಕೃತಿ ಎಸ್. ಜಂಪಣ್ಣನವರ್ (6ನೇ ರ‍್ಯಾಂಕ್), ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ರೇವತಿ ಜಿ (4ನೇ ರ‍್ಯಾಂಕ್), ಬಯೋಟೆಕ್ನಾಲಜಿ ವಿಭಾಗದ ಮಮತಾ ಹೆಚ್.ಜಿ ( 9ನೇ ರ‍್ಯಾಂಕ್) ಈ ಎಲ್ಲರೂ ಇದೇ ಬ್ಯಾಚ್‌ ನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಹೇಳಿದರು.

ಸಮಾರಂಭಕ್ಕೆ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ಆರ್. ಶಂಕಪಾಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪದವಿ ಪ್ರದಾನ ಭಾಷಣ ಮಾಡಲಿದ್ದಾರೆ. ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ. ಎಂ. ಲಿಂಗರಾಜು, ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾದ ಜಿ.ಎಂ. ಪ್ರಸನ್ನ ಕುಮಾರ್, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ. ಕೆ. ದಿವ್ಯಾನಂದ ಹಾಗೂ ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಸ್. ಓಂಕಾರಪ್ಪ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.

ಶ್ರೀಶೈಲ ಎಜುಕೇಷನಲ್ ಟ್ರಸ್ಟ್, ಗವರ್ನಿಂಗ್ ಕೌನ್ಸಿಲ್, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಈ ಶುಭ ಸಮಾರಂಭಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ಡೀನ್ ಡಾ. ವೀರಗಂಗಾಧರಸ್ವಾಮಿ ಟಿ.ಎಂ, ಸ್ಕೂಲ್ ಆಫ್ ಎಂಜಿನಿಯರಿಂಗ್ ನಿರ್ದೇಶಕರಾದ ಡಾ. ಪ್ರವೀಣ್ ಜೆ, ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ನೀಲಾಂಬಿಕೆ ಎಸ್ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles