Home ಉದ್ಯೋಗ ವಾರ್ತೆ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: ಬಳ್ಳಾರಿಯಲ್ಲಿ ಉಚಿತ ನೇರ ಸಂದರ್ಶನ ಮೂಲಕ ಉದ್ಯೋಗಾವಕಾಶ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: ಬಳ್ಳಾರಿಯಲ್ಲಿ ಉಚಿತ ನೇರ ಸಂದರ್ಶನ ಮೂಲಕ ಉದ್ಯೋಗಾವಕಾಶ!

Share
ನೇರ ಸಂದರ್ಶನ
Share

ಬಳ್ಳಾರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 17 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಸಂಸ್ಥೆಯು ತಮ್ಮಲ್ಲಿ ಖಾಲಿ ಇರುವ 20 ಕ್ಕೂ ಹೆಚ್ಚು ಡೆವಲಪ್ಮೆಂಟ್ ಮ್ಯಾನೇಜರ್ (ಟೆಲಿಕಾಲರ್) ಹಾಗೂ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಈ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಪಿಯುಸಿ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿದ ಹಾಗೂ 38 ವರ್ಷದ ಒಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಈ ಉದ್ಯೋಗಾವಕಾಶದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಹುದ್ದೆಗಳ ವಿವರ: 20ಕ್ಕೂ ಹೆಚ್ಚು ಡೆವಲಪ್ಮೆಂಟ್ ಮ್ಯಾನೇಜರ್ (ಟೆಲಿಕಾಲರ್) ಹಾಗೂ 1 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು.

ವಿದ್ಯಾರ್ಹತೆ ಮತ್ತು ವಯೋಮಿತಿ: ಪಿಯುಸಿ ಅಥವಾ ಯಾವುದೇ ಪದವಿ ಉತ್ತೀರ್ಣರಾಗಿರಬೇಕು ಮತ್ತು 38 ವರ್ಷದ ಒಳಗಿನವರಾಗಿರಬೇಕು.

ಸಂದರ್ಶನದ ವಿವರ: ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ ( ಸಂಪೂರ್ಣ ಉಚಿತ ಪ್ರವೇಶ ).

ಸ್ಥಳ ಹಾಗೂ ಸಂಪರ್ಕ: ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಕಚೇರಿ, ಜಿ.ಎಸ್.ಆರ್ ಬಿಲ್ಡಿಂಗ್, ಪಾರ್ವತಿ ನಗರ ಮುಖ್ಯ ರಸ್ತೆ, ಬಳ್ಳಾರಿ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳು: 7619207762, 7676774293, 6360408094.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಸ್ವ-ವಿವರಗಳ (Resume) ಪ್ರತಿಯೊಂದಿಗೆ ನಿಗದಿತ ದಿನದಂದು ನೇರ ಸಂದರ್ಶನಕ್ಕೆ ಹಾಜರಾಗುವಂತೆ ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *