Home ಕ್ರೈಂ ನ್ಯೂಸ್ ಕಲ್ಬುರ್ಗಿಯಲ್ಲಿ ಕೊಲೆಯಾದರೆ ಪುಡಾರಿಗಳು ಹೋಗಿ 15 ರಿಂದ 20 ಲಕ್ಷ ರೂಪಾಯಿ ನೀಡ್ತಾರೆ, ಅಲ್ಲಿಗೆ ಸುಪಾರಿ ಕಿಲ್ಲರ್‌ಗಳನ್ನು ಕಳುಹಿಸುತ್ತಿರುವವರು ಯಾರು?: ಪ್ರಿಯಾಂಕ್ ಖರ್ಗೆಗೆ ಬಿ. ವೈ. ವಿಜಯೇಂದ್ರ ಗಂಭೀರ ಪ್ರಶ್ನೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಕಲ್ಬುರ್ಗಿಯಲ್ಲಿ ಕೊಲೆಯಾದರೆ ಪುಡಾರಿಗಳು ಹೋಗಿ 15 ರಿಂದ 20 ಲಕ್ಷ ರೂಪಾಯಿ ನೀಡ್ತಾರೆ, ಅಲ್ಲಿಗೆ ಸುಪಾರಿ ಕಿಲ್ಲರ್‌ಗಳನ್ನು ಕಳುಹಿಸುತ್ತಿರುವವರು ಯಾರು?: ಪ್ರಿಯಾಂಕ್ ಖರ್ಗೆಗೆ ಬಿ. ವೈ. ವಿಜಯೇಂದ್ರ ಗಂಭೀರ ಪ್ರಶ್ನೆ!

Share
ಬಿ. ವೈ. ವಿಜಯೇಂದ್ರ
Share

ಬೆಂಗಳೂರು: ಕಲಬುರಗಿ ಜಿಲ್ಲೆಯು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಪಿಮುಷ್ಟಿಯಲ್ಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ ಎಷ್ಟು ಕೊಲೆಗಳಾಗಿವೆ ಎಂಬುದಕ್ಕೆ ಅವರು ಉತ್ತರ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

“ಜಿಲ್ಲೆಯಲ್ಲಿ ಕೊಲೆಯಾದರೆ ಪುಡಾರಿಗಳು ಹೋಗಿ 15 ರಿಂದ 20 ಲಕ್ಷ ರೂಪಾಯಿ ನೀಡುತ್ತಾರೆ. ಅಲ್ಲಿಗೆ ಸುಪಾರಿ ಕಿಲ್ಲರ್‌ಗಳನ್ನು ಕಳುಹಿಸುತ್ತಿರುವವರು ಯಾರು? ನಮಗೆ ಕಾನೂನಿನ ಅರಿವು ಹೇಳಿಕೊಡುವ ಅಗತ್ಯ ನಿಮಗಿಲ್ಲ” ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಅಧಿಕಾರ ಮತ್ತು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಎಫ್‌ಐಆರ್ ದಾಖಲಿಸುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಯತ್ನವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. “ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಎಂದಿಗೂ ಅಂಜುವ ಪ್ರಶ್ನೆಯೇ ಇಲ್ಲ” ಎಂದು ಹೆದರಿಕೆಯಿಲ್ಲದೆ ಗುಡುಗಿದರು.

ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಹಿತರಕ್ಷಣೆಗೆ ಬಿಜೆಪಿ ಸದಾ ಬದ್ಧವಾಗಿದೆ. ಬರೀ ರಾಜಕೀಯ ದುರುದ್ದೇಶಕ್ಕಾಗಿ ಅಧಿಕಾರ ಬಳಸುವುದನ್ನು ಬಿಟ್ಟು, ಗೃಹ ಸಚಿವರು ತಮ್ಮ ಜಿಲ್ಲೆಯ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆಯತ್ತ ಸ್ವಲ್ಪವಾದರೂ ಗಮನಹರಿಸಲಿ ಎಂದು ವಿಜಯೇಂದ್ರ ಅವರು ಸಲಹೆ ನೀಡಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles