Home ದಾವಣಗೆರೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಆಸಿಯಾ ಗಮನ ಸೆಳೆಯುತ್ತಿರುವುದ್ಯಾಕೆ? ಮೊದಲ ವಾರದಲ್ಲಿ ಫೇವರಿಟ್, ನಾಲ್ಕೇ ವಾರಕ್ಕೆ ಪಲ್ಟಿ ಯಾಕೆ?
ದಾವಣಗೆರೆಬೆಂಗಳೂರುಸಿನಿಮಾ

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಆಸಿಯಾ ಗಮನ ಸೆಳೆಯುತ್ತಿರುವುದ್ಯಾಕೆ? ಮೊದಲ ವಾರದಲ್ಲಿ ಫೇವರಿಟ್, ನಾಲ್ಕೇ ವಾರಕ್ಕೆ ಪಲ್ಟಿ ಯಾಕೆ?

Share
ಆಸಿಯಾ
Share

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗುತ್ತಿದ್ದಂತೆ, ಮನೆಯೊಳಗಿನ ಸ್ಪರ್ಧಿಗಳ ಆಟಕ್ಕಿಂತ ಹೊರಗಡೆ ಸೋಶಿಯಲ್ ಮೀಡಿಯಾದಲ್ಲಿ ‘ರಿವ್ಯೂವರ್’ಗಳ ನಡುವಿನ ವಾಕ್ಸಮರವೇ ಜೋರಾಗಿರುತ್ತದೆ. ಯಾರು ಸರಿ, ಯಾರು ತಪ್ಪು ಎಂದು ತೀರ್ಪು ಕೊಡುವ ಈ ವಿಮರ್ಶಕರು, ಹಲವು ಬಾರಿ ತಮ್ಮ ಹಿಂದಿನ ನಿಲುವುಗಳನ್ನೇ ಮರೆತು ನಗೆಪಾಟಲಿಗೀಡಾಗುವುದು ಹೊಸದೇನಲ್ಲ. ಇದೀಗ ಅಂತಹದ್ದೇ ದ್ವಂದ್ವ ನಿಲುವಿನ ಘಟನೆಯೊಂದು ಬಿಗ್ ಬಾಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೊದಲ ವಾರದಲ್ಲಿ ಫೇವರಿಟ್, ನಾಲ್ಕೇ ವಾರಕ್ಕೆ ಪಲ್ಟಿ!

ನಿನ್ನೆಯ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್ ಮುಕ್ತಾಯಗೊಂಡ ಬೆನ್ನಲ್ಲೇ, ಬಿಗ್ ಬಾಸ್ ವಿಮರ್ಶಕಿಯೊಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಆಸಿಯಾಗೆ ಬಕೆಟ್ ಹಿಡಿಯಬೇಡಿ ಸುದೀಪ್” ಎಂಬುದು ಆ ಪೋಸ್ಟ್‌ನ ಮುಖ್ಯ ಸಾಲಾಗಿತ್ತು. ಆದರೆ, ಈ ಪೋಸ್ಟ್‌ನ ಬೆನ್ನಲ್ಲೇ ಅವರ ಹಳೆಯ ನಿಲುವು ಬಯಲಾಗಿದೆ.

ಬಿಗ್ ಬಾಸ್ ಶುರುವಾದ ಮೊದಲ ವಾರದಲ್ಲಿ, ಸ್ಪರ್ಧಿ ಆಸಿಯಾ ಅವರ ಆಟವನ್ನು ಗಮನಿಸುವ ಮುನ್ನವೇ “ಈ ಬಾರಿ ನನ್ನ ಬೆಂಬಲ ಆಸಿಯಾಗೆ, ಅವರೇ ನನ್ನ ಫೇವರಿಟ್” ಎಂದು ಇದೇ ಮೇಡಂ ಪೋಸ್ಟ್ ಹಾಕಿದ್ದರು. ಆದರೆ ಈಗ ಆ ಹಳೆಯ ಪೋಸ್ಟ್ ಅನ್ನು ಗುಟ್ಟಾಗಿ ಡಿಲೀಟ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಾಬೀತಾಗಿದೆ. ಮೊದಲು ತಾವೇ ಆಸಿಯಾಗೆ ಬೆಂಬಲ ಸೂಚಿಸಿ, ಕೇವಲ ನಾಲ್ಕೇ ವಾರಗಳಲ್ಲಿ ತಮ್ಮ ನಿಲುವು ಬದಲಿಸಿ ಈಗ ನಿರೂಪಕ ಕಿಚ್ಚ ಸುದೀಪ್ ಅವರತ್ತ ಬೆರಳು ತೋರಿಸುತ್ತಿರುವುದು ನೆಟ್ಟಿಗರ ಹುಬ್ಬೇರಿಸಿದೆ.

ಸುದೀಪ್ ಅವರಿಗೆ ಬಕೆಟ್ ಹಿಡಿಯುವ ಅಗತ್ಯವಿದೆಯೇ?

ಕಿಚ್ಚ ಸುದೀಪ್ ಅವರು ಕೇವಲ ಶೋ ಒಂದರ ನಿರೂಪಕರಲ್ಲ; ಅವರು ಕನ್ನಡ ಚಿತ್ರರಂಗದ ಮಾಣಿಕ್ಯ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ. ಬಿಗ್ ಬಾಸ್ ಮನೆಯಲ್ಲಿರುವ ಯಾವೊಬ್ಬ ಸ್ಪರ್ಧಿಗೂ ಪಕ್ಷಪಾತ ಮಾಡುವ ಅಥವಾ ‘ಬಕೆಟ್’ ಹಿಡಿಯುವ ಅವಶ್ಯಕತೆ ಅವರಿಗೆ ಖಂಡಿತಾ ಇಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ತಮ್ಮ ಪೇಜ್ ರೀಚ್ ಹೆಚ್ಚಿಸಿಕೊಳ್ಳಲು, ವ್ಯೂವ್ಸ್ ಹಾಗೂ ಟ್ರೆಂಡಿಂಗ್‌ನಲ್ಲಿರಲು ಸುದೀಪ್ ಅವರ ಹೆಸರನ್ನು ಎಳೆದು ತರುವುದು ಕೆಲವು ರಿವ್ಯೂವರ್‌ಗಳ ಅಗ್ಗದ ತಂತ್ರ ಎಂಬ ಟೀಕೆ ವ್ಯಕ್ತವಾಗಿದೆ. ಸುದೀಪ್ ಅವರ ನಿರೂಪಣೆಯ ತೂಕವನ್ನು ಪ್ರಶ್ನಿಸುವ ಮುನ್ನ, ತಮ್ಮ ಹಳೆಯ ಪೋಸ್ಟ್‌ಗಳು ಮತ್ತು ನಿಲುವುಗಳನ್ನು ಒಮ್ಮೆ ಹಿಂತಿರುಗಿ ನೋಡಿಕೊಳ್ಳುವುದು ಒಳಿತು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Share

Leave a comment

Leave a Reply

Your email address will not be published. Required fields are marked *