Home ದಾವಣಗೆರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2026: SSLC, ITI ಮುಗಿಸಿದವರಿಗೆ ಸರ್ಕಾರಿ ಕೆಲಸ; 210 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ 2026: SSLC, ITI ಮುಗಿಸಿದವರಿಗೆ ಸರ್ಕಾರಿ ಕೆಲಸ; 210 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ

Share
ಕರ್ನಾಟಕ
Share

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪೌರಾಡಳಿತ ನಿರ್ದೇಶನಾಲಯದ ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವಿಭಾಗದ ಒಟ್ಟು 210 ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅಕ್ಟೋಬರ್ 07, 2026 ರವರೆಗೆ ವಿಸ್ತರಿಸಲಾಗಿದೆ.
ಹುದ್ದೆಗಳ ವಿವರ (Vacancies Details):
ಹುದ್ದೆಯ ಹೆಸರುಒಟ್ಟು ಹುದ್ದೆಗಳುಮಾಸಿಕ ವೇತನ (Salary)
ವಾಟರ್ ಸಪ್ಲೈ ಆಪರೇಟರ್ (Water Supply Operator)80₹ 37,500 – ₹ 76,100/-
ಎಲೆಕ್ಟ್ರೀಷಿಯನ್ ಗ್ರೇಡ್-1 (Electrician Grade-1)03₹ 37,500 – ₹ 76,100/-
ಅಸಿಸ್ಟೆಂಟ್ ವಾಟರ್ ಸಪ್ಲೈ ಆಪರೇಟರ್ (Assistant Water Supply Operator)122₹ 34,100 – ₹ 67,600/-
ಎಲೆಕ್ಟ್ರೀಷಿಯನ್ ಗ್ರೇಡ್-2 (Electrician Grade-2)05₹ 34,100 – ₹ 67,600/-
ಒಟ್ಟು ಹುದ್ದೆಗಳು210

ಶೈಕ್ಷಣಿಕ ಅರ್ಹತೆ (Educational Qualification):

ವಾಟರ್ ಸಪ್ಲೈ ಆಪರೇಟರ್ & ಎಲೆಕ್ಟ್ರೀಷಿಯನ್ ಗ್ರೇಡ್-1: 10ನೇ ತರಗತಿ/SSLC ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ (Electrical / Fitter) 2 ವರ್ಷದ ITI ಹಾಗೂ 1 ವರ್ಷದ ಅಪ್ರೆಂಟಿಸ್‌ಶಿಪ್‌ ತರಬೇತಿ (NAC) ಪಡೆದಿರಬೇಕು.

ಅಸಿಸ್ಟೆಂಟ್ ವಾಟರ್ ಸಪ್ಲೈ ಆಪರೇಟರ್ & ಎಲೆಕ್ಟ್ರೀಷಿಯನ್ ಗ್ರೇಡ್-2: 10ನೇ ತರಗತಿ/SSLC ಯೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ (Electrical / Fitter) ITI ಪೂರ್ಣಗೊಳಿಸಿರಬೇಕು.

ವಯೋಮಿತಿ (Age Limit):

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.

ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷ

ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷ

SC / ST / ಪ್ರವರ್ಗ-1: ಗರಿಷ್ಠ 45 ವರ್ಷ

ಅರ್ಜಿ ಶುಲ್ಕ (Application Fee):

ಸಾಮಾನ್ಯ ಅಭ್ಯರ್ಥಿಗಳು & ಪ್ರವರ್ಗ (2A, 2B, 3A, 3B): ₹ 750/-

SC / ST / ಪ್ರವರ್ಗ-1 / ಮಾಜಿ ಸೈನಿಕರು / ತೃತೀಯ ಲಿಂಗಿಗಳು: ₹ 500/-

ವಿಶೇಷ ಚೇತನ ಅಭ್ಯರ್ಥಿಗಳು (PwD): ₹ 250/-

ಪಾವತಿ ವಿಧಾನ: ಆನ್‌ಲೈನ್ ನೆಟ್ ಬ್ಯಾಂಕಿಂಗ್/ಯುಪಿಐ/ಡೆಬಿಟ್ ಕಾರ್ಡ್ ಮೂಲಕ.

ಆಯ್ಕೆ ಪ್ರಕ್ರಿಯೆ (Selection Process):

ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ (Paper-1 ಜನರಲ್ ನಾಲೆಡ್ಜ್ & Paper-2 ಪೋಸ್ಟ್ ಸಂಬಂಧಿತ ವಿಷಯ)

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (ಅನ್ವಯಿಸುವ ಅಭ್ಯರ್ಥಿಗಳಿಗೆ)

ಮೂಲ ದಾಖಲೆಗಳ ಪರಿಶೀಲನೆ (Document Verification)

ಪ್ರಮುಖ ದಿನಾಂಕಗಳು (Important Dates):

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-ಸೆಪ್ಟೆಂಬರ್-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ವಿಸ್ತರಿಸಲಾಗಿದೆ): 07-ಅಕ್ಟೋಬರ್-2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 08-ಅಕ್ಟೋಬರ್-2026

ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ: ನವೆಂಬರ್ 2026

ಅರ್ಜಿ ಸಲ್ಲಿಸುವುದು ಹೇಗೆ?

KEA ಅಧಿಕೃತ ವೆಬ್‌ಸೈಟ್‌ cetonline.karnataka.gov.in/kea ಗೆ ಭೇಟಿ ನೀಡಿ.

“Group-C Water Supply Operator / Electrician Recruitment 2026” ಲಿಂಕ್ ಮೇಲ್ಕ್ಲಿಕ್ ಮಾಡಿ.

ಅಗತ್ಯವಿರುವ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ

ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಿ.

ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ (Submit) ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Official Website: cetonline.karnataka.gov.in

Share

Leave a comment

Leave a Reply

Your email address will not be published. Required fields are marked *