Home ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲೇ ಜನರಿಂದ ತಕ್ಕ ಉತ್ತರ: ಶಿಕಾರಿಪುರ ಸಮಾವೇಶದಲ್ಲಿ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ
Homeದಾವಣಗೆರೆಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲೇ ಜನರಿಂದ ತಕ್ಕ ಉತ್ತರ: ಶಿಕಾರಿಪುರ ಸಮಾವೇಶದಲ್ಲಿ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

Share
ಬಿಜೆಪಿ
Share

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇರಿ ಅವರಿಗೆ ತಕ್ಕ ಉತ್ತರ ನೀಡಿರುವ ಜನತೆಗೆ ಅಭಿನಂದನೆಗಳು. ಯಾವ ಶಿವಮೊಗ್ಗ ಸೌದರ್ಯ, ರಾಜಕೀಯ ವಿಶ್ಲೇಷಣೆಯಿಂದ ಕೂಡಿದ್ದ ಜಿಲ್ಲೆ ಬಿಜೆಪಿಯಿಂದ ಯಾವ ಮಟ್ಟಕ್ಕೆ ಬಂದಿದೆ ಎಂದು ಆಲೋಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

ಶಿಕಾರಿಪುರದಲ್ಲಿ ನಡೆದ ಜನತಾ ಜೋಡೋ ಜಾಗೃತಿ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾವು ಈಸೂರಿನಲ್ಲಿ ಈ ಯಾತ್ರೆ ಆರಂಭಿಸಿದ್ದೇವೆ. 1942ನೇ ಇಸವಿಯಲ್ಲಿ ಬ್ರಿಟೀಷರ ವಿರುದ್ಧ ಗಾಂಧೀಜಿ ಅವರು ಭಾರತ ಬಿಟ್ಟು ತೊಲಗಿ ಎಂದು ಸಂದೇಶ ನೀಡಿದ್ದರು. ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿತಾದರೂ ಈಸೂರು 1942ರಲ್ಲಿ ನಾವು ಸ್ವತಂತ್ರರು ಎಂದು ಘೋಷಣೆ ಮಾಡಿದ ವೀರ ನಾಡನ್ನು ಯಾವ ಪರಿಸ್ಥಿತಿಗೆ ತರಲಾಗಿದೆ.ಸಾಮಾಜಿಕ ನ್ಯಾಯದ ಹರಿಕಾರರಾದ ಬಂಗಾರಪ್ಪ, ವಿಶ್ವ ಮಾನವ ಸಂದೇಶ ಕೊಟ್ಟ ಕುವೆಂಪು, ರೈತ ಹೋರಾಟ ಮಾಡಿದ ಗೋಪಾಲ ಗೌಡರು, ಕಡಿದಾಳ್ ಮಂಜಪ್ಪ, ಜೆ.ಹೆಚ್ ಪಾಟೀಲ್ ರಂತಹ ಮಹನೀಯರನ್ನು ಕೊಟ್ಟ ಜಿಲ್ಲೆ ಶಿವಮೊಗ್ಗ ಎಂದು ಹೇಳಿದರು.

ಬಿಜೆಪಿ ಈ ಜಿಲ್ಲೆಗೆ ಬಂದ ಬಳಿಕ ಜಿಲ್ಲೆ ಪರಿಸ್ಥಿತಿ ಏನಾಗಿದೆ? ಮರಿ ಯಡಿಯೂರಪ್ಪನವರು ಒಂದು ಹೇಳಿಕೆ ನೀಡಿದ್ದು, ನಾವು ಮಾಡಿರುವ ಅಭಿವೃದ್ಧಿ ನೋಡಿ ಎಂದಿದ್ದಾರೆ. ಅವರ ಅಭಿವೃದ್ಧಿ ಇದೇ ಜಿಲ್ಲೆಯ ಶಿಕಾರಿಪುರ ವಿವೇಕಾನಂದ ಶಿಕ್ಷಣ ಸಂಸ್ಥೆ ಪರಿಚಯವಿದೆಯೇ? ಮಲ್ಲಜ್ಜ ಕಟ್ಟೆ ಕೆರೆಯನ್ನು ಕಾಲೇಜಿಗೆ 90 ವರ್ಷಕ್ಕೆ ಲೀಜ್ ಪಡೆದರು. ಇದೇನಾ ಅಭಿವೃದ್ಧಿ, ಹೊನ್ನಾಳಿ ರಸ್ತೆಯಲ್ಲಿ ಬಂಡಿಭೈರನಹಳ್ಳಿ ಅರಣ್ಯ ಒತ್ತುವರಿ ಮಾಡಿ ಇವರ ಜಮೀನಿಗೆ ನೀರು ಹರಿಸಲು ಕೆರೆ ನಿರ್ಮಿಸಿ ಸನ್ಯಾಸಿ ಕೊಪ್ಪ ಏತನೀರಾವರಿಂದ ನೀರು ಪಡೆಯುತ್ತಿದ್ದಾರೆ. 1983ರಲ್ಲಿ ಮಾಜಿ ಸಚಿವ ಶಿಕಾರಿಪುರದ ವೆಂಕಟಪ್ಪನವರ ಪತ್ನಿ 3 ಸಾವಿರ ರೂ ಮೈಲ್ಯದ ಸೀರೆ ಉಟ್ಟಿದ್ದಕ್ಕೆ ಭ್ರಷ್ಟಾಚಾರ ಆರೋಪ ಮಾಡಿ ಮನೆ ಮುಂದೆ ಕೂಗಾಡಿದ್ದ ಯಡಿಯೂಪ್ಪನವರ ಭ್ರಷ್ಟಾಚಾರದ ಬಗ್ಗೆ ನಾವು ಏನು ಹೇಳಬೇಕು? ಎಂದು ಪ್ರಶ್ನಿಸಿದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles