ನವದೆಹಲಿ: “ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ ‘ಅಸೂಯೆ’ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ” ಎಂದು ಸಿಎಂ ಡಿ. ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇದಕ್ಕೆ ತಾರ್ತಿಕ ಅಂತ್ಯವಿಲ್ಲವೇ ಎಂದು ಕೇಳಿದಾಗ, “ನನಗೆ ಅವರ ಮೇಲೆ ಆರೋಪ ಮಾಡಲು ಇಷ್ಟವಿಲ್ಲ. ಅದಕ್ಕೆಲ್ಲ ನನ್ನ ಬಳಿ ಸಮಯವೂ ಇಲ್ಲ. ನೀವು ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಅಷ್ಟೇ. ಉತ್ತರ ಕೊಡಲೂ ನನಗೆ ಇಷ್ಟವಿಲ್ಲ” ಎಂದರು.
ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ
ಬಂಗಾರಪ್ಪ ಅವರು ನೀಡಿದ್ದ ನಿವೇಶನದ ಬಗ್ಗೆ ಕೇಳಿದಾಗ, “ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಾಲದಲ್ಲಿ 99 ಸಾವಿರ ನೀಡಿ ನಿವೇಶನ ಖರೀದಿಸಿದ್ದೆ. ಅವರೇ ಅದನ್ನು ಹಂಚಿಕೆ ಮಾಡಿದ್ದರು. ಇವತ್ತಿಗೆ 20 ಕೋಟಿ ಬೆಲೆ ಬಾಳುತ್ತದೆ. ನನ್ನ ಆಸ್ತಿಯ ಬೆಲೆ ಹೆಚ್ಚಾಗಿದೆ. ಅದನ್ನು ಘೋಷಿಸಿದ್ದೇನೆ. ತಪ್ಪೇನಿದೆ? ಇಂಥ ನೂರಾರು ಆಸ್ತಿ ನನ್ನ ಬಳಿ ಇದೆ. ಲಾರಿ ಇಟ್ಟುಕೊಂಡು ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ. ನನ್ನದೇ ವೃತ್ತಿ, ವ್ಯವಹಾರ ಬದುಕಿದೆ. ಪ್ರತಿ ವರ್ಷವೂ ಆಸ್ತಿ ಘೋಷಿಸಿದ್ದೇನೆ. ಚುನಾವಣಾ ಆಯೋಗ, ಇಡಿ ಎಲ್ಲಾ ನೋಡಿ ಆಗಿದೆ. ಇನ್ನು ಯಾವುದಾದರೂ ದೊಡ್ಡ ಏಜೆನ್ಸಿಯನ್ನು ಹಾಕಿ ನೋಡಲಿ. ಯಾರು ಬೇಡ ಹೇಳುತ್ತಾರೆ” ಎಂದರು.





Leave a comment