Home ಕ್ರೈಂ ನ್ಯೂಸ್ “ಅಪ್ಪ-ಅಮ್ಮ ನನ್ನ ಕ್ಷಮಿಸಿ, ಮನೆಗೆ ಸೇರಿಸಿಕೊಳ್ಳಿ”: ಧರ್ಮ, ಹೆಸರು ಮುಚ್ಚಿಟ್ಟು ಮದುವೆಯಾಗಿದ್ದ ಪತಿ ಫರಾರ್, ಇಬ್ಬರು ಮಕ್ಕಳೊಂದಿಗೆ ಬೀದಿಗೆ ಬಿದ್ದ ಮಹಿಳೆ ಗೋಳಾಟ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಅಪ್ಪ-ಅಮ್ಮ ನನ್ನ ಕ್ಷಮಿಸಿ, ಮನೆಗೆ ಸೇರಿಸಿಕೊಳ್ಳಿ”: ಧರ್ಮ, ಹೆಸರು ಮುಚ್ಚಿಟ್ಟು ಮದುವೆಯಾಗಿದ್ದ ಪತಿ ಫರಾರ್, ಇಬ್ಬರು ಮಕ್ಕಳೊಂದಿಗೆ ಬೀದಿಗೆ ಬಿದ್ದ ಮಹಿಳೆ ಗೋಳಾಟ!

Share
ಧರ್ಮ
Share

ನವದೆಹಲಿ: ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಧರ್ಮ ಹಾಗೂ ನೈಜ ಗುರುತನ್ನು ಮರೆಮಾಚಿ ವಂಚಿಸಿ, ಕೊನೆಗೆ ಇಬ್ಬರು ಮಕ್ಕಳೊಂದಿಗೆ ಆಕೆಯನ್ನು ಬೀದಿಗೆ ತಳ್ಳಿರುವ ಧಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ವಂಚನೆಗೊಳಗಾದ ದುರದೃಷ್ಟಕರ ಮಹಿಳೆಯನ್ನು ರಿಂಕಿ ದೇವಿ ಎಂದು ಗುರುತಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು:

ಸಾಮಾಜಿಕ ಜಾಲತಾಣಗಳಲ್ಲಿ ರಿಂಕಿ ದೇವಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2019 ರಲ್ಲಿ ಯುವಕನೊಬ್ಬನ ಜೊತೆ ಆಕೆಗೆ ಪ್ರೇಮಾಂಕುರವಾಗಿತ್ತು. ಸುಮಾರು ಒಂದು ವರ್ಷದ ಪ್ರೇಮಾಲಾಪದ ಬಳಿಕ, ಹೆತ್ತವರ ವಿರೋಧದ ನಡುವೆಯೂ ಮನೆ ಬಿಟ್ಟು ಬಂದ ಆಕೆ ದೇವಸ್ಥಾನವೊಂದರಲ್ಲಿ ಆತನನ್ನು ವಿವಾಹವಾಗಿದ್ದಳು. ಆದರೆ, ಮೊದಲ ಮಗು ಜನಿಸಿದ ಬಳಿಕ ಆಕೆಗೆ ಆಘಾತಕಾರಿ ಸತ್ಯ ಬಯಲಾಗಿತ್ತು. ತನ್ನ ಪತಿ ಮುಸ್ಲಿಂ ಸಮುದಾಯದವನೆಂಬುದನ್ನು ಹಾಗೂ ತನ್ನ ನೈಜ ಧರ್ಮ ಮತ್ತು ಗುರುತನ್ನು ಮುಚ್ಚಿಟ್ಟು ಮೋಸದಿಂದ ಮದುವೆಯಾಗಿದ್ದಾನೆ ಎಂಬ ವಿಚಾರ ಆಕೆಗೆ ತಡವಾಗಿ ತಿಳಿದುಬಂದಿತ್ತು.

ಅನಾಥವಾಗಿ ಬೀದಿಗೆ ಬಿದ್ದ ಕುಟುಂಬ:

ಇದೀಗ ಆತ ರಿಂಕಿ ದೇವಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಸಹಾಯಕರನ್ನಾಗಿ ಮಾಡಿ ಕೈಬಿಟ್ಟು ಪರಾರಿಯಾಗಿದ್ದಾನೆ. ಇಬ್ಬರು ಮಕ್ಕಳನ್ನು ಸಾಕಲು ಯಾವುದೇ ಆದಾಯದ ದಾರಿಯಿಲ್ಲದೆ, ತುತ್ತು ಅನ್ನಕ್ಕೂ ಪರದಾಡುವಂತಾಗಿರುವ ಆಕೆ, ಬದುಕಿನ ನಿರ್ವಹಣೆಗಾಗಿ ದಾನಿಗಳ ಸಹಾಯ ಹಸ್ತ ಕೋರುತ್ತಿದ್ದಾಳೆ.

“ನಾನು ಪ್ರೀತಿಯ ಭರದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ, ನನ್ನನ್ನು ಕ್ಷಮಿಸಿ ಮತ್ತೆ ಮನೆಗೆ ಸೇರಿಸಿಕೊಳ್ಳಿ” ಎಂದು ರಿಂಕಿ ದೇವಿ ತನ್ನ ಹೆತ್ತವರ ಮುಂದೆ ಕಣ್ಣೀರಿಟ್ಟು ಅಂಗಲಾಚುತ್ತಿದ್ದಾಳೆ. ನಂಬಿಸಿ ವಂಚಿಸಿದ ಪತಿಯ ನಡವಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಕಷ್ಟದಲ್ಲಿರುವ ಮಹಿಳೆಯ ಸ್ಥಿತಿಗೆ ಅನುಕಂಪ ವ್ಯಕ್ತವಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles