Home ಕ್ರೀಡೆ ಏಷ್ಯನ್ ಗೇಮ್ಸ್ 2026 BIG BREAKING: ಇರಾನ್ ವಿರುದ್ಧ ಥ್ರಿಲ್ಲರ್ ಜಯ! ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನದ ಪದಕ
ಕ್ರೀಡೆದಾವಣಗೆರೆಬೆಂಗಳೂರು

ಏಷ್ಯನ್ ಗೇಮ್ಸ್ 2026 BIG BREAKING: ಇರಾನ್ ವಿರುದ್ಧ ಥ್ರಿಲ್ಲರ್ ಜಯ! ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ಚಿನ್ನದ ಪದಕ

Share
ಭಾರತ
Share

ಏಷ್ಯಾನ್ ಗೇಮ್ಸ್: 2026ರ ಐಚಿ-ನಗೋಯಾ ಆಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಕಬಡ್ಡಿ ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ 3ನೇ ಚಿನ್ನದ ಪದಕವನ್ನು ತಂದುಕೊಟ್ಟಿದೆ. ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಇರಾನ್ ವಿರುದ್ಧ 37-34 ಅಂತರದ ರೋಮಾಂಚನಕಾರಿ ಗೆಲುವು ಸಾಧಿಸಿತು.

ಅಂತಿಮ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಹತ್ತಿರ ಬಂದಿದ್ದ ಇರಾನ್ ತಂಡಕ್ಕೆ ಸೋಲು ತೀವ್ರ ನಿರಾಸೆ ಮೂಡಿಸಿತು. ಇನ್ನೊಂದೆಡೆ, ಕೊನೆಯ ಹಂತದಲ್ಲಿ ಅದ್ಭುತವಾಗಿ ತಿರುಗೇಟು ನೀಡಿದ ಭಾರತೀಯ ಆಟಗಾರ್ತಿಯರು ಜಪಾನ್ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿದರು. ಕಬಡ್ಡಿಗೆ ಹೊಸಬರಾಗಿದ್ದ ಜಪಾನ್ ಪ್ರೇಕ್ಷಕರು ಕೂಡ ಈ ಥ್ರಿಲ್ಲರ್ ಪಂದ್ಯವನ್ನು ಕಂಡು ಮನಸೋತರು.

ಆಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಸೆಪ್ಟೆಂಬರ್ 26ರ ಪಂದ್ಯಾವಳಿಯಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ.

ಪುರುಷರ ಮ್ಯಾರಥಾನ್‌ನಲ್ಲಿ ಸಾವನ್ ಬರ್ವಾಲ್ 2:11:37 ಸಮಯದಲ್ಲಿ ಓಟ ಪೂರ್ಣಗೊಳಿಸಿ, ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಪದಕ ಗೆದ್ದು ಐತಿಹಾಸಿಕ  ಸಾಧನೆ ಮಾಡಿದರು. ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ತಂಡ ವಿಭಾಗದಲ್ಲಿ ತಿಲೋತ್ತಮ ಸೇನ್, ಆಶಿ ಚೌಕ್ಸೆ ಮತ್ತು ವಿದರ್ಸಾ ವಿನೋದ್ ಸೇರಿ ಬೆಳ್ಳಿ ಪದಕ ಪಡೆದರು.

ಇದಲ್ಲದೆ, ಸ್ಕ್ವಾಷ್ ಮಿಶ್ರ ಜೋಡಿ ವಿಭಾಗದಲ್ಲಿ ಜೋಶ್ನಾ ಚಿನ್ನಪ್ಪ ಹಾಗೂ ವೆಲವನ್ ಸೆಂಥಿಲ್‌ಕುಮಾರ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್, ಸಿಂಗಾಪುರದ ಲೋಹ್ ಕೀನ್ ಯೂ ವಿರುದ್ಧ ಹೋರಾಡಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು.

Share

Leave a comment

Leave a Reply

Your email address will not be published. Required fields are marked *