ಬೆಂಗಳೂರು: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಮತ್ತು ರಾಜ್ಯ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ತೀವ್ರವಾಗಿ ಖಂಡಿಸಿರುವ ಸರ್ಕಾರ, ಆರ್ಥಿಕ ಇಲಾಖೆಯು ನೀಡುವ ಸಲಹೆ ಮತ್ತು ಮುನ್ನೆಚ್ಚರಿಕೆಗಳು ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಹಣಕಾಸಿನ ಶಿಸ್ತು ಕಾಪಾಡಲು ನೀಡುವ ಸಹಜ ಹಾಗೂ ನಿಯಮಿತ ಕಾರ್ಯವಿಧಾನ ಎಂದು ಸ್ಪಷ್ಟಪಡಿಸಿದೆ.
ವಿಪಕ್ಷಗಳು ಮಾಡುತ್ತಿರುವ ‘ದಿವಾಳಿ’ ಆರೋಪವು ಕೇವಲ ರಾಜಕೀಯ ಅಪಪ್ರಚಾರಕ್ಕೆ ಸೀಮಿತವಾಗಿದ್ದು, ಇದರಲ್ಲಿ ಯಾವುದೇ ವಾಸ್ತವಾಂಶವಿಲ್ಲ ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಬಜೆಟ್ ಚೌಕಟ್ಟು ಮತ್ತು ಆರ್ಥಿಕ ಇಲಾಖೆಯ ಪಾತ್ರ
ಬಜೆಟ್ ನಿರ್ವಹಣೆ ಮತ್ತು ಹಣಕಾಸಿನ ಶಿಸ್ತಿನ ಕುರಿತು ವಿವರಣೆ ನೀಡಿರುವ ಸಚಿವರು, ಆಡಳಿತದಲ್ಲಿ ಪ್ರತಿಯೊಂದು ರಂಗದಲ್ಲೂ ಹಣಕಾಸಿನ ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ಹೇಳಿದ್ದಾರೆ:
ಬಜೆಟ್ ವ್ಯಾಪ್ತಿಯ ನಿಯಂತ್ರಣ: ವಿಧಾನಸಭೆ ಮತ್ತು ವಿಧಾನಪರಿಷತ್ ಅನುಮೋದಿಸಿರುವ ಬಜೆಟ್ ಮತ್ತು ಹಣಕಾಸು ಮಸೂದೆಯ ವ್ಯಾಪ್ತಿಯನ್ನು ಮೀರಿ ಹಣ ಖರ್ಚು ಮಾಡಲು ಯಾವುದೇ ಸರ್ಕಾರಕ್ಕೆ ಅಧಿಕಾರವಿರುವುದಿಲ್ಲ.
ಪೂರಕ ಬಜೆಟ್ ಕಡ್ಡಾಯ: ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸದ ಹೊಸ ಕಾರ್ಯಕ್ರಮ ಅಥವಾ ಹೆಚ್ಚುವರಿ ವೆಚ್ಚ ಎದುರಾದರೆ, ಅದಕ್ಕೆ ಮೂಲ ಸೌಕರ್ಯ ಅಥವಾ ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂದು ಪ್ರಶ್ನಿಸುವುದು ಆರ್ಥಿಕ ಇಲಾಖೆಯ ಶಾಸನಬದ್ಧ ಕರ್ತವ್ಯವಾಗಿದೆ. ಹೆಚ್ಚುವರಿ ವೆಚ್ಚಕ್ಕಾಗಿ ಪೂರಕ ಬಜೆಟ್ ಮಂಡಿಸಿ ಸದನದ ಅನುಮೋದನೆ ಪಡೆಯುವುದೇ ಕನಿಷ್ಠ ಹಣಕಾಸಿನ ಪ್ರಜ್ಞೆಯಾಗಿದೆ.
ಹೊಸ ಯೋಜನೆಗಳಿಗೆ ಎಚ್ಚರಿಕೆ: ಸರ್ಕಾರಗಳು ಬಜೆಟ್ ಹೊರತಾಗಿ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲು ಮುಂದಾದಾಗ, ಇಲಾಖೆಯು ಮುನ್ನೆಚ್ಚರಿಕೆ ಟಿಪ್ಪಣಿ ನೀಡುವುದು ಆಡಳಿತಾತ್ಮಕ ನಿಯಮ. ಇದನ್ನು ‘ಸರ್ಕಾರದಲ್ಲಿ ಹಣವಿಲ್ಲ’ ಎಂದು ವ್ಯಾಖ್ಯಾನಿಸುವುದು ತಪ್ಪು.
ಬಿಜೆಪಿ ಸರ್ಕಾರದ ಅವಧಿಯಲ್ಲೂ ಹಣಕಾಸು ಇಲಾಖೆ ನೀಡಿತ್ತು ಎಚ್ಚರಿಕೆ
ಆರ್ಥಿಕ ಇಲಾಖೆಯ ಸಲಹೆಗಳನ್ನು ಆಧಾರವಾಗಿಟ್ಟುಕೊಂಡು ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ಸಚಿವರು ಹಿಂದಿನ ಉದಾಹರಣೆಗಳ ಮೂಲಕ ತಿರುಗೇಟು ನೀಡಿದ್ದಾರೆ.
ಜನವರಿ 2020 ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯದ ಸ್ವಂತ ಆದಾಯ: ಸಂಗ್ರಹ ಶೇ. 70ಕ್ಕೆ ಕುಸಿದಾಗ, ಗಂಭೀರ ಹಣಕಾಸಿನ ಸಂಕಷ್ಟದ ಬಗ್ಗೆ ಎಚ್ಚರಿಕೆ ನೀಡಿತ್ತು.
ಫೆಬ್ರವರಿ 2022, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬದ್ಧತಾ ಖರ್ಚು ಹೆಚ್ಚಾಗಿ, ಆದಾಯ ಮಿಗತೆ ಬಜೆಟ್ ಮಂಡಿಸುವುದು ಕಷ್ಟ ಎಂದು ಸ್ಪಷ್ಟಪಡಿಸಲಾಗಿತ್ತು.
ಫೆಬ್ರವರಿ 2023, ಚುನಾವಣೆಗೂ ಮುನ್ನ 7ನೇ ವೇತನ ಆಯೋಗ ಜಾರಿಗೆ ಮುಂದಾದಾಗ,FRBM (ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ) ಮಿತಿ ಉಲ್ಲಂಘನೆ ಹಾಗೂ ಸಾಲದ ಹೊರೆ ಹೆಚ್ಚಾಗುವ ಬಗ್ಗೆ ಮುಚ್ಚಳಿಕೆ ನೀಡಲಾಗಿತ್ತು.
- BJP vs Congress Karnataka
- Dr G Parameshwara
- Finance Department Warning
- Fiscal Discipline Karnataka
- FRBM Act Limit
- FRBM ಮಿತಿ
- Karnataka Budget Discipline
- Karnataka Financial Crisis
- Karnataka Politics News
- Karnataka Treasury Status
- State Bankruptcy Allegations
- ಆರ್ಥಿಕ ಇಲಾಖೆ
- ಆರ್ಥಿಕ ಶಿಸ್ತು
- ಕರ್ನಾಟಕ ಖಜಾನೆ
- ಕರ್ನಾಟಕ ರಾಜಕೀಯ
- ಡಾ. ಜಿ. ಪರಮೇಶ್ವರ್
- ಪೂರಕ ಬಜೆಟ್
- ಬಜೆಟ್ ಅನುದಾನ
- ಬಸವರಾಜ ಬೊಮ್ಮಾಯಿ
- ಬಿ.ಎಸ್. ಯಡಿಯೂರಪ್ಪ
- ಬಿಜೆಪಿ ಅಪಪ್ರಚಾರ
- ರಾಜ್ಯ ಸರ್ಕಾರ ದಿವಾಳಿ





Leave a comment