Home ದಾವಣಗೆರೆ ಷಡ್ಯಂತ್ರಗಳಿಗೆ ಕೊನೆಗೂ ತೆರೆ, 3ನೇ ಪಟ್ಟಿಯಲ್ಲಿ ಬರಪೀಡಿತ ಪಟ್ಟಿಗೆ ಜಗಳೂರು ತಾಲೂಕು ಸೇರ್ಪಡೆ: ಜಗಳೂರಿನಲ್ಲಿ ಶಾಸಕ ದೇವೇಂದ್ರಪ್ಪ ನೇತೃತ್ವದಲ್ಲಿ ಜಯೋತ್ಸವ!
ದಾವಣಗೆರೆಬೆಂಗಳೂರು

ಷಡ್ಯಂತ್ರಗಳಿಗೆ ಕೊನೆಗೂ ತೆರೆ, 3ನೇ ಪಟ್ಟಿಯಲ್ಲಿ ಬರಪೀಡಿತ ಪಟ್ಟಿಗೆ ಜಗಳೂರು ತಾಲೂಕು ಸೇರ್ಪಡೆ: ಜಗಳೂರಿನಲ್ಲಿ ಶಾಸಕ ದೇವೇಂದ್ರಪ್ಪ ನೇತೃತ್ವದಲ್ಲಿ ಜಯೋತ್ಸವ!

Share
ಜಗಳೂರು
Share

ದಾವಣಗೆರೆ: ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ನೆಪವೊಡ್ಡಿ ಶಾಸಕರ ವಿರುದ್ಧ ನಡೆಯುತ್ತಿದ್ದ ವೈಯಕ್ತಿಕ ತೇಜೋವಧೆ ಹಾಗೂ ರಾಜಕೀಯ ಷಡ್ಯಂತ್ರಗಳಿಗೆ ಕೊನೆಗೂ ತೆರೆ ಬಿದ್ದಿದೆ. ಜಗಳೂರು ತಾಲೂಕು ರಾಜ್ಯ ಸರ್ಕಾರದ ಮೂರನೇ ಬರಪೀಡಿತ ತಾಲೂಕುಗಳ ಅಧಿಕೃತ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.

ತಾಲೂಕಿನ ರೈತರು ಅನುಭವಿಸುತ್ತಿದ್ದ ಕಷ್ಟಗಳು ಮತ್ತು ಬೆಳೆ ಹಾನಿಯ ನೈಜ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಶಾಸಕ ಬಿ. ದೇವೇಂದ್ರಪ್ಪ ಯಶಸ್ವಿಯಾಗಿದ್ದು, ಅಧಿಕೃತ ಆದೇಶದ ಪ್ರತಿಯೊಂದಿಗೆ ಬೆಂಗಳೂರಿನಿಂದ ಜಗಳೂರಿಗೆ ಆಗಮಿಸಿದರು.

ವಿಪಕ್ಷಗಳಿಗೆ ಕಠಿಣ ತಿರುಗೇಟು

ಜಗಳೂರು ತಾಲೂಕಿನಲ್ಲಿ ಮುಂಗಾರು ಮಳೆ ಅಭಾವದಿಂದ ಉಂಟಾದ ಬೆಳೆ ನಷ್ಟವನ್ನು ಮುಂದಿಟ್ಟುಕೊಂಡು, ಆಡಳಿತಾರೂಢ ಶಾಸಕರ ವಿರುದ್ಧ ವಿರೋಧ ಪಕ್ಷದವರು ನಿರಂತರ ಆರೋಪಗಳನ್ನು ಮಾಡುತ್ತಿದ್ದರು. ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳಿಗೂ ಈ ನೂತನ ಆದೇಶ ಸೂಕ್ತ ಉತ್ತರ ನೀಡಿದೆ. ಶಾಸಕರ ಆಗಮನದ ನಂತರ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಯೊಂದು ಅಪಪ್ರಚಾರಕ್ಕೂ ಅವರು ಅಂಕಿ-ಅಂಶಗಳ ಸಮೇತ ಕೌಂಟರ್ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ರೈತರಿಂದ ಸಂಭ್ರಮಾಚರಣೆ

ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರಿನ ಹೆಸರು ಸೇರ್ಪಡೆಯಾಗಿರುವುದು ತಾಲೂಕಿನಾದ್ಯಂತ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಸ್ಥಳೀಯ ರೈತರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಶಾಸಕರನ್ನು ಪ್ರೀತಿಯಿಂದ ಸ್ವಾಗತಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. “ನಮ್ಮ ಶಾಸಕರು ಜನರ ಪರವಾಗಿದ್ದು, ಯಾವುದೇ ಹಂತದಲ್ಲೂ ತಾಲೂಕಿನ ಹಿತಾಸಕ್ತಿಯನ್ನು ಬಲಿ ಕೊಡುವುದಿಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ” ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *