Home ದಾವಣಗೆರೆ ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ಸಂಬಂಧ ಚೆನ್ನಾಗಿದೆ, ಹುಳಿ ಹಿಂಡಬೇಡಿ: ವಿಪಕ್ಷಗಳಿಗೆ ಶಾಸಕ ಬಿ. ದೇವೇಂದ್ರಪ್ಪ ನೇರ ಎಚ್ಚರಿಕೆ!
ದಾವಣಗೆರೆಬೆಂಗಳೂರು

ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ಸಂಬಂಧ ಚೆನ್ನಾಗಿದೆ, ಹುಳಿ ಹಿಂಡಬೇಡಿ: ವಿಪಕ್ಷಗಳಿಗೆ ಶಾಸಕ ಬಿ. ದೇವೇಂದ್ರಪ್ಪ ನೇರ ಎಚ್ಚರಿಕೆ!

Share
ಬಿ. ದೇವೇಂದ್ರಪ್ಪ
Share

ಜಗಳೂರು:ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ನನ್ನ ಸಂಬಂಧ ಚೆನ್ನಾಗಿದೆ. ವಿಪಕ್ಷಗಳು ಹುಳಿ ಹಿಂಡುವ ಕೆಲಸ ಮಾಡಬಾರದು ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ಜಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಅಂದು ಜಗಳೂರು ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೇರಿಲ್ಲ ಎಂಬ ಬೇಸರದಿಂದ ನಮ್ಮ ಪಕ್ಷದ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಿದ್ದೆ. ನಾನೂ ಮತ್ತು ಉಸ್ತುವಾರಿ ಸಚಿವರು ಅತ್ಯಂತ ಆತ್ಮೀಯರಾಗಿದ್ದೇವೆ. ನಮ್ಮ ಸಂಬಂಧದಲ್ಲಿ ಹುಳಿ ಹಿಂಡುವ ಪ್ರಯತ್ನ ಮಾಡಬೇಡಿ. ಬಿಜೆಪಿಯವರಿಗೆ ನಿಮ್ಮ ನಾಯಕರನ್ನು ಪ್ರಶ್ನಿಸುವ ನೈತಿಕತೆ ಮತ್ತು ತಾಕತ್ತು ಇದೆಯೇ?” ಎಂದು ಸವಾಲೆಸೆದರು.

“ನನ್ನ ಕ್ಷೇತ್ರದ ಜನರ ಬದುಕು ಮುಖ್ಯ, ನನಗೆ ರಾಜಕೀಯ ಮುಖ್ಯವಲ್ಲ. ಶಾಸಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

ಇಂದು ಜಗಳೂರಿನ ಜನಸಂಪರ್ಕ ಕಚೇರಿಯಲ್ಲಿ ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪತ್ರಕರ್ತರ ವಿವಿಧ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದರು.

“ನಮ್ಮ ಸತತ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಇಂದು ಜಗಳೂರು ತಾಲೂಕು ಮೂರನೇ ಬರತಾಲೂಕು ಪಟ್ಟಿಗೆ ಸೇರ್ಪಡೆಯಾಗಿದೆ. ಆದರೆ ವಿರೋಧ ಪಕ್ಷಗಳು ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟುಮಾಡಿವೆ. ಬಿಜೆಪಿಯವರ ಸಂಸ್ಕೃತಿ ಇದೇನಾ?” ಎಂದು ತೀವ್ರವಾಗಿ ಪ್ರಶ್ನಿಸಿದರು. ಅಲ್ಲದೆ, “ಯಾರಾದರೂ ಬೆಂಕಿ ಹಚ್ಚುವುದಿದ್ದರೆ ಮೊದಲು ನನಗೇ ಹಚ್ಚಿ” ಎಂದು ವಿಪಕ್ಷಗಳಿಗೆ ಆಹ್ವಾನ ನೀಡಿದರು.

Share

Leave a comment

Leave a Reply

Your email address will not be published. Required fields are marked *