ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರಗಾಲದ ಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರಾಜ್ಯದ ಒಟ್ಟು 177 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾಗಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಎದುರಾಗಿದ್ದು, ಸಂಕಷ್ಟದಲ್ಲಿರುವ ರೈತರು ಹಾಗೂ ಗ್ರಾಮೀಣ ಜನತೆಗೆ ತಕ್ಷಣದ ನೆರವು ನೀಡಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸಲ್ಲಿಸಿರುವ ಹಾನಿ ಅಂದಾಜು ಮೆಮೊರಾಂಡಮ್ ಮೊತ್ತದ ಶೇಕಡಾ 50 ರಷ್ಟನ್ನು ತಕ್ಷಣವೇ ಮಧ್ಯಂತರ ಪರಿಹಾರ ನಿಧಿಯಾಗಿ ಬಿಡುಗಡೆ ಮಾಡಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ತಂಡದ ಅಂತಿಮ ಪರಿಶೀಲನೆ ಹಾಗೂ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯದೆ, ಮುಂಗಡವಾಗಿ ಈ ಹಣ ಬಿಡುಗಡೆಯಾದರೆ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣದ ಪರಿಹಾರ ನೀಡಲು, ಕುಡಿಯುವ ನೀರಿನ ಅಭಾವ ನೀಗಿಸಲು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲು ಸಹಕಾರಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದರೊಂದಿಗೆ, ರಾಜ್ಯ ವಿಪತ್ತು ಶಮನ ನಿಧಿಯ (SDRF) ಎರಡನೇ ಕಂತಿನಲ್ಲಿ ಬರಬೇಕಾದ ಕೇಂದ್ರದ ಪಾಲಿನ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡುವಂತೆಯೂ ಸಿಎಂ ಕೋರಿದ್ದಾರೆ.
“ಬರದಿಂದ ತತ್ತರಿಸಿರುವ ರಾಜ್ಯದ ಪ್ರತಿಯೊಬ್ಬ ರೈತ ಕುಟುಂಬಕ್ಕೂ ಸೂಕ್ತ ಸಮಯದಲ್ಲಿ ಸರಕಾರದ ನೆರವು ತಲುಪಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ,” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
- 177 taluks drought affected
- 177 ತಾಲೂಕುಗಳು ಬರಪೀಡಿತ
- DK Shivakumar letter to PM Modi
- Farmer relief
- Interim financial assistance
- Karnataka crop loss
- Karnataka Drought Crisis
- Karnataka News
- SDRF advance release
- ಎಸ್ಡಿಆರ್ಎಫ್ ಅನುದಾನ
- ಕರ್ನಾಟಕ ಬರಗಾಲ
- ಕರ್ನಾಟಕ ಸುದ್ದಿ
- ಕುಡಿಯುವ ನೀರು ಕ್ಷಾಮ
- ಡಿ ಕೆ ಶಿವಕುಮಾರ್ ಪತ್ರ
- ಪ್ರಧಾನಿ ನರೇಂದ್ರ ಮೋದಿ
- ಬೆಳೆ ಹಾನಿ ಪರಿಹಾರ
- ರೈತರ ನೆರವು





Leave a comment