ಮುಂಬೈ: ಐಐಟಿ ಬಾಂಬೆಯ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ (22) ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರೀಕ್ಷಾ ಕೊಠಡಿಯ ನಿರ್ಣಾಯಕ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ.
ಕಳೆದ ಶುಕ್ರವಾರ (ಸೆಪ್ಟೆಂಬರ್ 18) ನಡೆದ ಮಧ್ಯಂತರ ಪರೀಕ್ಷೆಯ ವೇಳೆ ಸಾಹಿಲ್ ಮೊಬೈಲ್ ಫೋನ್ ಬಳಸಿ ‘ಚಾಟ್‌ಜಿಪಿಟಿ’ (ChatGPT) ಮೂಲಕ ಉತ್ತರ ಹುಡುಕುತ್ತಿದ್ದಾಗ ಮೇಲ್ವಿಚಾರಕ ಪ್ರೊ. ಸೂರ್ಯನಾರಾಯಣ ಡೂಲ್ಲಾ ಆತನನ್ನು ತಡೆದು ಹೊರಗೆ ಕಳುಹಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಸಾಹಿಲ್ ವಸತಿ ನಿಲಯದ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಸಿಸಿಟಿವಿಯಲ್ಲಿ ಸಾಹಿಲ್ ಮೊದಲ ಸಾಲಿನಲ್ಲಿ ಕುಳಿತಿದ್ದು, ಪ್ರೊಫೆಸರ್ ಬಂದಾಗ ಮೊಬೈಲ್ ಹಸ್ತಾಂತರಿಸಿ ಪರೀಕ್ಷಾ ಕೊಠಡಿಯಿಂದ ಹೊರನಡೆಯುವುದು ದಾಖಲಾಗಿದೆ.
ಆದರೆ, ಸಾಹಿಲ್ ಪೋಷಕರು ತಮ್ಮ ಮಗನ ಜಾತಿ ತಾರತಮ್ಯ ಹಾಗೂ ಪ್ರೊಫೆಸರ್ ಅವರ ಮಾನಸಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದು, ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಎಸ್‌ಸಿ/ಎಸ್‌ಟಿ ತಡೆ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಐಐಟಿ ಆಡಳಿತ ಮಂಡಳಿಯು ಪ್ರೊ. ಡೂಲ್ಲಾ ಅವರನ್ನು ಡೀನ್ ಹುದ್ದೆಯಿಂದ ವಜಾಗೊಳಿಸಿದೆ.





Leave a comment