Home ಕ್ರೈಂ ನ್ಯೂಸ್ “ಇನ್ಮುಂದೆ ವಿದೇಶಕ್ಕೆ ಕಾಲಿಡಲ್ಲ!” ಆಫ್ರಿಕಾದಲ್ಲಿ ಕೆಲಸದ ಆಸೆಗೆ ಬಿದ್ದು ಕಷ್ಟ ಅನುಭವಿಸಿ 4 ತಿಂಗಳ ಬಳಿಕ ಭಾರತಕ್ಕೆ ವಾಪಸ್ ಆದ ವ್ಯಕ್ತಿ ನೋವಿನ ಮಾತು!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಇನ್ಮುಂದೆ ವಿದೇಶಕ್ಕೆ ಕಾಲಿಡಲ್ಲ!” ಆಫ್ರಿಕಾದಲ್ಲಿ ಕೆಲಸದ ಆಸೆಗೆ ಬಿದ್ದು ಕಷ್ಟ ಅನುಭವಿಸಿ 4 ತಿಂಗಳ ಬಳಿಕ ಭಾರತಕ್ಕೆ ವಾಪಸ್ ಆದ ವ್ಯಕ್ತಿ ನೋವಿನ ಮಾತು!

Share
ಆಫ್ರಿಕಾ
Share

ಪಟ್ನಾ: ಆಫ್ರಿಕಾದ ಸೆನೆಗಲ್ ದೇಶದಲ್ಲಿ ಉತ್ತಮ ಕೆಲಸ ಮತ್ತು ಅಧಿಕ ಶಂಬಳದ ಆಸೆಗೆ ಬಿದ್ದು ಸಿಲುಕಿಕೊಂಡಿದ್ದ ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯ ಉಮಾಶಂಕರ್ ಕುಮಾರ್ ಕೊನೆಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ನಾಲ್ಕು ತಿಂಗಳ ಸುದೀರ್ಘ ಯಾತನೆಯ ನಂತರ ಭಾರತೀಯ ರಾಯಭಾರ ಕಚೇರಿ ಮತ್ತು ಜನಪ್ರತಿನಿಧಿಗಳ ಮಧ್ಯಸ್ಥಿಕೆಯಿಂದಾಗಿ ಅವರು ತಮ್ಮ ಸ್ವಂತ ಊರಿಗೆ ತಲುಪಿದ್ದಾರೆ.

ಮಗಳ ಮದುವೆಯ ವೆಚ್ಚಕ್ಕಾಗಿ ಹಣದ ಅಗತ್ಯದಲ್ಲಿದ್ದ ಉಮಾಶಂಕರ್‌ಗೆ, ಆಫ್ರಿಕಾದ ಸೆನೆಗಲ್ ರಾಜಧಾನಿ ಡಾಕಾರ್‌ನಲ್ಲಿ ತಿಂಗಳಿಗೆ 60,000 ರೂಪಾಯಿ ಸಂಬಳ ಕೊಡಿಸುವುದಾಗಿ ನಂಬಿಸಿ ಕರೆದೊಯ್ಯಲಾಗಿತ್ತು. ಆದರೆ ಮೇ 17ರಂದು ಅಲ್ಲಿಗೆ ತಲುಪಿದ ನಂತರ ಕಂಪನಿಯು ಕೇವಲ 30,000 ರೂಪಾಯಿ ಶಂಬಳದ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿತು. ಅಲ್ಲದೆ, ಅವರ ಪಾಸ್‌ಪೋರ್ಟ್ ಹಾಗೂ ವೀಸಾವನ್ನು ಮುಟ್ಟುಗೋಲು ಹಾಕಿಕೊಂಡು, ದಿನಕ್ಕೆ 12 ಗಂಟೆಗಳ ಕಾಲ ಸತತವಾಗಿ ದುಡಿಸಿಕೊಳ್ಳಲಾಯಿತು. ಕಳೆದ 3-4 ತಿಂಗಳಿಂದ ಯಾವುದೇ ವೇತನವನ್ನೂ ನೀಡದೆ, ಆಹಾರಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪರಿಸ್ಥಿತಿ ಕೈಮೀರಿದಾಗ ಉಮಾಶಂಕರ್ ಭಾರತೀಯ ರಾಯಭಾರ ಕಚೇರಿಯ ನೆರವು ಕೋರಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಅಧಿಕಾರಿಗಳು, ಕಂಪನಿಯ ಮಾಲೀಕನನ್ನು ಕಚೇರಿಗೆ ಕರೆಸಿ ಸತತ ನಾಲ್ಕು ಗಂಟೆಗಳ ಕಾಲ ಮಾತುಕತೆ ನಡೆಸಿ ಪಾಸ್‌ಪೋರ್ಟ್ ವಾಪಸ್ ಕೊಡಿಸಿ, ಭಾರತಕ್ಕೆ ಮರಳಲು ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟರು.

“ನಾನು ಮನೆಗೆ ಮರಳುವ ಭರವಸೆಯನ್ನೇ ಕಳೆದುಕೊಂಡಿದ್ದೆ, ಈಗ ಸ್ವದೇಶಕ್ಕೆ ಮರಳಿರುವುದು ಅತ್ಯಂತ ಸಂತಸ ತಂದಿದೆ” ಎಂದು ಉಮಾಶಂಕರ್ ಕಣ್ಣೀರಿಟ್ಟಿದ್ದಾರೆ. ಇನ್ಮುಂದೆ ಯಾವುದೇ ಕಾರಣಕ್ಕೂ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವುದಿಲ್ಲ, ಭಾರತದಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles