Home ಉದ್ಯೋಗ ವಾರ್ತೆ IBPS RRB Recruitment 2026: ಬ್ಯಾಂಕಿಂಗ್‌ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ; ಅರ್ಜಿ ಸಲ್ಲಿಕೆ ಅವಧಿ ಸೆಪ್ಟೆಂಬರ್ 27ರವರೆಗೆ ವಿಸ್ತರಣೆ!
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

IBPS RRB Recruitment 2026: ಬ್ಯಾಂಕಿಂಗ್‌ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ; ಅರ್ಜಿ ಸಲ್ಲಿಕೆ ಅವಧಿ ಸೆಪ್ಟೆಂಬರ್ 27ರವರೆಗೆ ವಿಸ್ತರಣೆ!

Share
RRB
Share

ಬೆಂಗಳೂರು: ದೇಶಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ (RRB) ಖಾಲಿ ಇರುವ ಬೃಹತ್ ಪ್ರಮಾಣದ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ವಿಸ್ತರಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗ ಸೆಪ್ಟೆಂಬರ್ 27, 2026ರವರೆಗೆ ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸಿಆರ್‌ಪಿ ಆರ್‌ಆರ್‌ಬಿ-XV (CRP RRBs-XV) ಸರಣಿಯಡಿಯಲ್ಲಿ ಒಟ್ಟು 13,706 ಗ್ರೂಪ್ ‘ಎ’ ಆಫೀಸರ್ (ಸ್ಕೇಲ್-I, II, III) ಹಾಗೂ ಗ್ರೂಪ್ ‘ಬಿ’ ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಪ್ರಮುಖ ವಿವರಗಳು:
  • ಸಂಸ್ಥೆ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS)

  • ಒಟ್ಟು ಹುದ್ದೆಗಳು: 13,706 (ಸೂಚನಾತ್ಮಕ)

    ಹುದ್ದೆಗಳ ಹೆಸರು:

  • ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್), ಆಫೀಸರ್ ಸ್ಕೇಲ್-I (PO), ಸ್ಕೇಲ್-II ಮತ್ತು III

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಸೆಪ್ಟೆಂಬರ್ 2026

    ಅಧಿಕೃತ ವೆಬ್‌ಸೈಟ್: www.ibps.in

    ಹುದ್ದೆಗಳ ವಿವರ:
  1. ಆಫೀಸ್ ಅಸಿಸ್ಟೆಂಟ್ (Multipurpose): 8,183 ಹುದ್ದೆಗಳು

  2. ಆಫೀಸರ್ ಸ್ಕೇಲ್-I (Assistant Manager): 4,256 ಹುದ್ದೆಗಳು

  3. ಆಫೀಸರ್ ಸ್ಕೇಲ್-II (ವಿವಿಧ ವಿಭಾಗಗಳು): 1,047 ಹುದ್ದೆಗಳು

    ಆಫೀಸರ್ ಸ್ಕೇಲ್-III (Senior Manager): 220 ಹುದ್ದೆಗಳು

ವಯೋಮಿತಿ ಹಾಗೂ ವಿದ್ಯಾರ್ಹತೆ:

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪಡೆದ ಅಭ್ಯರ್ಥಿಗಳು ಆಫೀಸ್ ಅಸಿಸ್ಟೆಂಟ್ ಹಾಗೂ ಸ್ಕೇಲ್-I ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಸ್ಕೇಲ್-II ಮತ್ತು III ಹುದ್ದೆಗಳಿಗೆ ಸಂಬಂಧಿತ ವಿಷಯದಲ್ಲಿ ಪದವಿ ಹಾಗೂ ಅನುಭವ ಅಗತ್ಯವಿದೆ.

  • ವಯೋಮಿತಿ:

    • ಆಫೀಸ್ ಅಸಿಸ್ಟೆಂಟ್: 18 ರಿಂದ 28 ವರ್ಷಗಳು

    • ಆಫೀಸರ್ ಸ್ಕೇಲ್-I: 18 ರಿಂದ 30 ವರ್ಷಗಳು

    • ಆಫೀಸರ್ ಸ್ಕೇಲ್-II: 21 ರಿಂದ 32 ವರ್ಷಗಳು

    • ಆಫೀಸರ್ ಸ್ಕೇಲ್-III: 21 ರಿಂದ 40 ವರ್ಷಗಳು (ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).

ಅರ್ಜಿ ಶುಲ್ಕ:

  • SC/ST/PwBD ಅಭ್ಯರ್ಥಿಗಳಿಗೆ: ₹175

  • ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ₹850

ಅರ್ಜಿ ಸಲ್ಲಿಸುವುದು ಹೇಗೆ?

  1. IBPS ನ ಅಧಿಕೃತ ವೆಬ್‌ಸೈಟ್ www.ibps.in ಗೆ ಭೇಟಿ ನೀಡಿ.

    ಮುಖಪುಟದಲ್ಲಿ “CRP for RRBs” ಲಿಂಕ್ ಕ್ಲಿಕ್ ಮಾಡಿ.

  2. “Click Here for New Registration” ಆಯ್ಕೆ ಮಾಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ನೊಂದಾಯಿಸಿ.

  3. ಫೋಟೋ, ಸಹಿ, ಎಡಗೈ ಹೆಬ್ಬೆರಳ ಗುರುತು ಮತ್ತು ಸ್ವಯಂ ಘೋಷಣಾಪತ್ರವನ್ನು ಅಪ್‌ಲೋಡ್ ಮಾಡಿ.

  4. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Share

Leave a comment

Leave a Reply

Your email address will not be published. Required fields are marked *