ಫ್ಲೋರಿಡಾ: ಗೃಹ ಜಗಳವೊಂದರ ತನಿಖೆಗೆ ತೆರಳಿದ್ದ ಅಮೆರಿಕದ ಫ್ಲೋರಿಡಾ ಪೊಲೀಸರಿಗೆ ಬೆಚ್ಚಿಬೀಳಿಸುವ ಅಕ್ರಮ ಸಂಬಂಧವೊಂದು ಬಯಲಾಗಿದೆ. 46 ವರ್ಷದ ತಾಯಿ ಕ್ರಿಸ್ಟಿನಾ ಕ್ಲೆಮೆಂಟ್ಸ್ ಮತ್ತು ಆಕೆಯ 22 ವರ್ಷದ ಮಗ ಶೇನ್ ಕ್ಲೆಮೆಂಟ್ಸ್ ಎಂಬಿಬ್ಬರನ್ನು ಅನೈತಿಕ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಅಮೆರಿಕದ ಫ್ಲೋರಿಡಾದ ಲೇಕ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದೆ. ತಾಯಿ ಕ್ರಿಸ್ಟಿನಾ ತನ್ನ ಮಗ ಶೇನ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಳು. ಸ್ಥಳಕ್ಕೆ ಆಗಮಿಸಿದ ಪೋಲ್ಕ್ ಕೌಂಟಿ ಪೊಲೀಸರು ಮಗನನ್ನು ಬಂಧಿಸಲು ಮುಂದಾದಾಗ, ಕೋಪಗೊಂಡ ಆತ ಪೊಲೀಸರ ಬಳಿ “ನನಗೆ 18 ವರ್ಷ ತುಂಬಿದಾಗಿನಿಂದ ನನ್ನ ತಾಯಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದೇನೆ” ಎಂದು ಹೇಳಿಕೆ ನೀಡಿದ್ದಾನೆ.
100ಕ್ಕೂ ಹೆಚ್ಚು ಬಾರಿ ಸಂಪರ್ಕ:
ಮಗನ ಮಾತಿನಿಂದ ಆಘಾತಕ್ಕೊಳಗಾದ ಪೊಲೀಸರು ತಾಯಿ ಕ್ರಿಸ್ಟಿನಾಳನ್ನು ವಿಚಾರಣೆಗೊಳಪಡಿಸಿದಾಗ, ಆಕೆಯು ಇದನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೆ “ನಾವು ಸುಮಾರು 100 ಬಾರಿ ಮಾತ್ರ ಸಂಪರ್ಕ ಬೆಳೆಸಿದ್ದೇವೆ” ಎಂದು ಹೇಳಿಕೆ ನೀಡಿದ್ದಾಳೆ.
ಗಂಡನಿಗೆ ತಿಳಿಯದ ರಹಸ್ಯ:
ಕ್ರಿಸ್ಟಿನಾಳ ಪತಿಯನ್ನು ವಿಚಾರಿಸಿದಾಗ, ತನಗೆ ಈ ವಿಷಯ ತಿಳಿದಿರಲಿಲ್ಲ ಆದರೆ ಅವರಿಬ್ಬರೂ ಮಾಸ್ಟರ್ ಬೆಡ್‌ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದಾಗ ಅನುಮಾನವಿತ್ತು ಎಂದು ತಿಳಿಸಿದ್ದಾರೆ. ಪ್ರಸ್ತುತ ಪೋಲ್ಕ್ ಕೌಂಟಿ ಶೆರಿಫ್ ಆಫೀಸ್ ಇಬ್ಬರ ಮೇಲೆಯೂ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದು, ಮಗ ಶೇನ್ ಜೈಲಿನಲ್ಲಿದ್ದರೆ, ತಾಯಿಗೆ ಜಾಮೀನು ಮಂಜೂರಾಗಿದೆ.





Leave a comment