Home ಕ್ರೀಡೆ ಏಷ್ಯನ್ ಗೇಮ್ಸ್ ತಂಡದಿಂದ ಕೊನೆಯ ಕ್ಷಣದಲ್ಲಿ ಹೊರಕ್ಕೆ: ವುಶು ಕ್ರೀಡಾಪಟು ದಿವ್ಯಾಂಶಿ ಆತ್ಮಹತ್ಯೆ ಬೆದರಿಕೆ!
ಕ್ರೀಡೆನವದೆಹಲಿಬೆಂಗಳೂರು

ಏಷ್ಯನ್ ಗೇಮ್ಸ್ ತಂಡದಿಂದ ಕೊನೆಯ ಕ್ಷಣದಲ್ಲಿ ಹೊರಕ್ಕೆ: ವುಶು ಕ್ರೀಡಾಪಟು ದಿವ್ಯಾಂಶಿ ಆತ್ಮಹತ್ಯೆ ಬೆದರಿಕೆ!

Share
ಏಷ್ಯನ್ ಗೇಮ್ಸ್
Share

ನವದೆಹಲಿ: ಏಷ್ಯನ್ ಗೇಮ್ಸ್‌ಗೆ ಭಾರತೀಯ ವುಶು ತಂಡವನ್ನು ಜಪಾನ್‌ನ ನಗೋಯಾಗೆ ಕಳುಹಿಸಲು ಕೆಲವೇ ದಿನಗಳು ಬಾಕಿ ಇರುವಾಗ, 18 ವರ್ಷದ ಕ್ರೀಡಾಪಟು ದಿವ್ಯಾಂಶಿ ಚೌಧರಿ  ಅವರನ್ನು 60 ಕೆಜಿ ಸಾಂಡಾ ವಿಭಾಗದಿಂದ ಕೊನೆಯ ಕ್ಷಣದಲ್ಲಿ ಹೊರಗಿಡಲಾಗಿದೆ. ಈ ನಿರ್ಧಾರದ ನಂತರ ದಿವ್ಯಾಂಶಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ 9 ನಿಮಿಷಗಳ ವೀಡಿಯೊ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ದಿವ್ಯಾಂಶಿ ಚೌಧರಿ ವಿಡಿಯೋದಲ್ಲಿ ಹೇಳಿರೋದೇನು? 

ದಿವ್ಯಾಂಶಿ ಅವರ ಆರೋಪಗಳು:

ಮಾನಸಿಕ ಮತ್ತು ಶಾರೀರಿಕ ಕಿರುಕುಳ: ಜೂನ್-ಜುಲೈ ತಿಂಗಳಿನಿಂದ ಪಟಿಯಾಲ ರಾಷ್ಟ್ರೀಯ ಶಿಬಿರದಲ್ಲಿ ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ದಿವ್ಯಾಂಶಿ ಆರೋಪಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ: ಏಷ್ಯನ್ ಗೇಮ್ಸ್‌ಗಾಗಿ ನಡೆದ 5 ಪ್ರಮುಖ ಆಯ್ಕೆ ಟ್ರಯಲ್ಸ್‌ಗಳಲ್ಲಿ ತಾವೇ ಮೊದಲ ಸ್ಥಾನ ಗಳಿಸಿದ್ದಾಗಿಯೂ ಹಾಗೂ ಸೆಮಿಫೈನಲ್‌ನಲ್ಲಿ ರೋಶಿಬಿನಾ ದೇವಿ ಅವರನ್ನು ಸೋಲಿಸಿದ್ದಾಗಿಯೂ ದಿವ್ಯಾಂಶಿ ಮತ್ತು ಅವರ ಕೋಚ್ ಅಶೋಕ್ ಗೌತಮ್ ತಿಳಿಸಿದ್ದಾರೆ.

ಪೂರ್ವಯೋಜಿತ ಗಾಯದ ಆರೋಪ: ಶ್ರೀನಗರದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ರೋಶಿಬಿನಾ ದೇವಿ ತಮ್ಮ ಹೆಗಲಿಗೆ ಉದ್ದೇಶಪೂರ್ವಕವಾಗಿ ಗಾಯಗೊಳಿಸಿದ್ದರು ಎಂದು ದಿವ್ಯಾಂಶಿ ವೀಡಿಯೊದಲ್ಲಿ ಆರೋಪಿಸಿದ್ದಾರೆ.

ವುಶು ಫೆಡರೇಶನ್ ನೀಡಿದ ಸ್ಪಷ್ಟನೆ:

ವುಶು ಫೆಡರೇಶನ್ ಆಫ್ ಇಂಡಿಯಾ (WAI) ದಿವ್ಯಾಂಶಿ ಅವರಿಗೆ ಎಸಿಎಲ್ (ACL) ಮೊಣಕಾಲು ಗಾಯವಿದ್ದು, ವೈದ್ಯಕೀಯ ತಪಾಸಣೆಯಲ್ಲಿ ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂದು ಕಂಡುಬಂದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಆದರೆ, ಈ ಗಾಯ ಸಾಮಾನ್ಯವಾಗಿದ್ದು, ಟೇಪಿಂಗ್ ಹಚ್ಚಿಕೊಂಡು ಆಡಲು ವೈದ್ಯರು ಅನುಮತಿ ನೀಡಿದ್ದರು. ತಮಗೆ ವೈದ್ಯಕೀಯ ವರದಿಗಳನ್ನು ಸಲ್ಲಿಸಲು ಅಥವಾ ತಮ್ಮ ಕಡೆಯ ವಿವರಣೆ ನೀಡಲು ಅವಕಾಶ ನೀಡದೆ ಏಕಾಏಕಿ ತಂಡದಿಂದ ಕೈಬಿಡಲಾಗಿದೆ ಎಂದು ದಿವ್ಯಾಂಶಿ ದೂರಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles