ಭಾರತೀಯ ಅಂಚೆ ಇಲಾಖೆಯು (India Post) ಗ್ರಾಮೀಣ ಡಾಕ್ ಸೇವಕ್ (GDS) ನೇಮಕಾತಿ 2026ರ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ಒಟ್ಟು 23,757 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಕರ್ನಾಟಕ ಅಂಚೆ ವೃತ್ತದಲ್ಲಿ (Karnataka Circle) 1,116 ಹುದ್ದೆಗಳು ಲಭ್ಯವಿದ್ದು, ಬ್ರಾಂಚ್ ಪೋಸ್ಟ್ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ABPM) ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ವಿವರಗಳು:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ (SSLC) ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ತೇರ್ಗಡೆಯಾಗಿರಬೇಕು. ಸ್ಥಳೀಯ ಭಾಷೆ (ಕನ್ನಡ) ಜ್ಞಾನ ಕಡ್ಡಾಯ.
ವಯೋಮಿತಿ: 18 ರಿಂದ 40 ವರ್ಷಗಳು (ನಿಯಮಾನುಸಾರ SC/ST ಗೆ 5 ವರ್ಷ ಹಾಗೂ OBC ಗೆ 3 ವರ್ಷ ವಿನಾಯಿತಿ ಇದೆ).
ಆಯ್ಕೆ ಪ್ರಕ್ರಿಯೆ: ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ (Merit List) ತಯಾರಿಸಿ ನೇರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ₹100/- (ಮಹಿಳೆಯರು, SC, ST, PwBD ಮತ್ತು ಟ್ರಾನ್ಸ್ವುಮೆನ್ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ).
ಪ್ರಮುಖ ದಿನಾಂಕಗಳು:
ಒನ್ಟೈಮ್ ರಿಜಿಸ್ಟ್ರೇಶನ್ (OTR): 31 ಆಗಸ್ಟ್ 2026 ರಿಂದ 19 ಸೆಪ್ಟೆಂಬರ್ 2026 (ಸಂಜೆ 5:00 ರವರೆಗೆ).
ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ: 02 ಸೆಪ್ಟೆಂಬರ್ 2026 ರಿಂದ 21 ಸೆಪ್ಟೆಂಬರ್ 2026 (ಸಂಜೆ 5:00 ರವರೆಗೆ).
ಅರ್ಜಿ ತಿದ್ದುಪಡಿ (Correction Window): 23 ಸೆಪ್ಟೆಂಬರ್ 2026 ರಿಂದ 24 ಸೆಪ್ಟೆಂಬರ್ 2026.
- ಅಧಿಕೃತ ವೆಬ್ ಸೈಟ್: https://ibpsreg.ibps.in/rrboaxvaug26/





Leave a comment