Home ದಾವಣಗೆರೆ ಬಸ್ಸಿನಲ್ಲೇ ಟಿವಿ, ವೈ-ಫೈ, ಪ್ಯಾಂಟ್ರಿ ಮತ್ತು ಟಾಯ್ಲೆಟ್: ಕೇವಲ ₹505 ಕೊಟ್ಟರೆ ವಿಮಾನದಲ್ಲಿ ಪ್ರಯಾಣಿಸಿದಂಥ ಅನುಭವ, ‘ಬಿಸಿನೆಸ್ ಕ್ಲಾಸ್’ ಬಸ್ ಸ್ಪೆಷಲ್ ಇದು!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಬಸ್ಸಿನಲ್ಲೇ ಟಿವಿ, ವೈ-ಫೈ, ಪ್ಯಾಂಟ್ರಿ ಮತ್ತು ಟಾಯ್ಲೆಟ್: ಕೇವಲ ₹505 ಕೊಟ್ಟರೆ ವಿಮಾನದಲ್ಲಿ ಪ್ರಯಾಣಿಸಿದಂಥ ಅನುಭವ, ‘ಬಿಸಿನೆಸ್ ಕ್ಲಾಸ್’ ಬಸ್ ಸ್ಪೆಷಲ್ ಇದು!

Share
ವಿಮಾನ
Share

ತಿರುವನಂತಪುರಂ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ತಿರುವನಂತಪುರಂ ಮತ್ತು ಎರ್ನಾಕುಲಂ (ಕೊಚ್ಚಿ) ನಡುವೆ ವಿಮಾನ ಮಾದರಿಯ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ‘ಬಿಸಿನೆಸ್ ಕ್ಲಾಸ್’ ವೋಲ್ವೋ ಎಸಿ ಬಸ್ ಸೇವೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಉದ್ಯಮಿ ಹರ್ಷ್ ಗೋಯೆಂಕಾ ಅವರು ಈ ಬಸ್ಸಿನ ವೀಡಿಯೊವನ್ನು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ನಂತರ ಈ ಸುದ್ದಿ ವೈರಲ್ ಆಗಿದೆ. ಕೇವಲ ₹505 ದರದಲ್ಲಿ ಏರ್‌ಲೈನ್ಸ್‌ ಮಾದರಿಯ ಅನುಭವ ನೀಡುತ್ತಿರುವುದಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಸ್ಸಿನಲ್ಲಿರುವ ಪ್ರಮುಖ ಐಷಾರಾಮಿ ಸೌಲಭ್ಯಗಳು:

ವೈಯಕ್ತಿಕ ಮನರಂಜನೆ: ಬಸ್ಸಿನ ಪ್ರತಿಯೊಂದು ಆಸನದ ಹಿಂಭಾಗದಲ್ಲಿ ‘ಪರ್ಸನಲ್ ಟಿವಿ ಸ್ಕ್ರೀನ್’ ಮತ್ತು ಯುಎಸ್‌ಬಿ  ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಉಚಿತ ವೈ-ಫೈ ಹಾಗೂ ಲೆಗ್‌ರೂಮ್: ಪ್ರಯಾಣಿಕರಿಗೆ ಇಡೀ ಪ್ರಯಾಣದುದ್ದಕ್ಕೂ ಹೈ-ಸ್ಪೀಡ್ Wi-Fi ಸೌಲಭ್ಯ ಲಭ್ಯವಿದ್ದು, 36 ಪುಶ್‌ಬ್ಯಾಕ್ ಸೀಟುಗಳೊಂದಿಗೆ ಹೆಚ್ಚಿನ ಲೆಗ್‌ರೂಮ್ ನೀಡಲಾಗಿದೆ.

ಆನ್‌ಬೋರ್ಡ್ ಪ್ಯಾಂಟ್ರಿ: ಪ್ರಯಾಣಿಕರಿಗೆ ಚಹಾ, ಕಾಫಿ ಮತ್ತು ತಂಪಾದ ಪಾನೀಯಗಳನ್ನು ನೀಡಲು ಸಣ್ಣ ಫ್ರಿಡ್ಜ್ ಒಳಗೊಂಡ ಪ್ಯಾಂಟ್ರಿ ವ್ಯವಸ್ಥೆ ಇದೆ.

ಶೌಚಾಲಯ ವ್ಯವಸ್ಥೆ: ಸುದೀರ್ಘ ಪ್ರಯಾಣಕ್ಕೆ ಅನುಕೂಲವಾಗುವಂತೆ ಬಸ್ಸಿನ ಒಳಗಡೆಯೇ ಬಯೋ-ಟಾಯ್ಲೆಟ್ (Toilet) ನಿರ್ಮಿಸಲಾಗಿದೆ.

ಸಮಯ ಮತ್ತು ಮಾರ್ಗ:

ಈ ಬಸ್ ಸೇವೆ ಸೋಮವಾರದಿಂದ ಶುಕ್ರವಾರದವರೆಗೆ ಲಭ್ಯವಿರುತ್ತದೆ.

ಬೆಳಗಿನ ಪ್ರಯಾಣ: ತಿರುವನಂತಪುರಂನಿಂದ ಬೆಳಿಗ್ಗೆ 5:30ಕ್ಕೆ ಹೊರಟು ಕೊಲ್ಲಂ, ಅಲಪ್ಪುಳ ಮಾರ್ಗವಾಗಿ ಬೆಳಿಗ್ಗೆ 9:30ಕ್ಕೆ ಎರ್ನಾಕುಲಂ ತಲುಪುತ್ತದೆ.

ಸಂಜೆಯ ಪ್ರಯಾಣ: ಎರ್ನಾಕುಲಂನಿಂದ ಸಂಜೆ 5:30ಕ್ಕೆ ಹೊರಟು ರಾತ್ರಿ 9:30ಕ್ಕೆ ತಿರುವನಂತಪುರಂ ತಲುಪುತ್ತದೆ.

Share

Leave a comment

Leave a Reply

Your email address will not be published. Required fields are marked *