Home ದಾವಣಗೆರೆ ಭದ್ರಾ ಡ್ಯಾಂನಿಂದ ಚಿತ್ರದುರ್ಗಕ್ಕೆ ನೀರು: ಜಲಾಶಯದ ಇಂದಿನ ನೀರಿನ ಮಟ್ಟ, ಒಳಹರಿವು ಎಷ್ಟಿದೆ?
ದಾವಣಗೆರೆಬೆಂಗಳೂರು

ಭದ್ರಾ ಡ್ಯಾಂನಿಂದ ಚಿತ್ರದುರ್ಗಕ್ಕೆ ನೀರು: ಜಲಾಶಯದ ಇಂದಿನ ನೀರಿನ ಮಟ್ಟ, ಒಳಹರಿವು ಎಷ್ಟಿದೆ?

Share
ಭದ್ರಾ ಡ್ಯಾಂ
Share

ದಾವಣಗೆರೆ: ಭದ್ರಾ ಜಲಾನಯನ ಮತ್ತು ಮಲೆನಾಡು ಭಾಗದಲ್ಲಿ ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಕುಂಠಿತಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗಕ್ಕೆ ಪ್ರಾಯೋಗಿಕವಾಗಿ ಕಾಲುವೆಗಳ ಮೂಲಕ ನೀರು ಹರಿಸುತ್ತಿರುವುದರಿಂದ ಡ್ಯಾಂ ನೀರಿನ ಮಟ್ಟ ಯಥಾಸ್ಥಿತಿ ಇದೆ. 

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ

ವರದಿ ಸಮಯ: ಬೆಳಿಗ್ಗೆ 6 ಗಂಟೆ

ಗರಿಷ್ಠ ಮಟ್ಟ : 186 ಅಡಿ

ಅಣೆಕಟ್ಟಿನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ (TMC)

ಪ್ರಸ್ತುತ ನೀರಿನ ಸ್ಥಿತಿಗತಿ:

ಇಂದಿನ ನೀರಿನ ಮಟ್ಟ: 178.8 ಅಡಿ

ಪ್ರಸ್ತುತ ನೀರಿನ ಸಂಗ್ರಹಣೆ: 62.604  ಟಿಎಂಸಿ (TMC)

ನೀರಿನ ಒಳಹರಿವು ಮತ್ತು ಹೊರಹರಿವಿನ ವಿವರ:

ಒಳಹರಿವು (Inflow): 2,836 ಕ್ಯೂಸೆಕ್ಸ್

ಒಟ್ಟು ಹೊರಹರಿವು : 1,713 ಕ್ಯೂಸೆಕ್ಸ್

ಬಲದಂಡೆ ನಾಲಾ (R.B.C): 1,500 ಕ್ಯೂಸೆಕ್ಸ್

ಎಡದಂಡೆ ನಾಲಾ (L.B.C): 0 ಕ್ಯೂಸೆಕ್ಸ್

ನದಿ ಸ್ಲೂಯಿಸ್ (River Sluice): 100 ಕ್ಯೂಸೆಕ್ಸ್

ಆವಿಯಾಗುವಿಕೆ (Evaporation): 113 ಕ್ಯೂಸೆಕ್ಸ್

ಹಿಂದಿನ ವರ್ಷದ ಇದೇ ದಿನದ (06.09.2025) ಹೋಲಿಕೆ:

ಕಳೆದ ವರ್ಷದ ನೀರಿನ ಮಟ್ಟ: 184 ಅಡಿ 4 ಇಂಚು

ಕಳೆದ ವರ್ಷದ ನೀರಿನ ಸಂಗ್ರಹ ಸಾಮರ್ಥ್ಯ: 69.450 ಟಿಎಂಸಿ (TMC)

ಕಳೆದ ವರ್ಷದ ಒಳಹರಿವು: 15,342 ಕ್ಯೂಸೆಕ್ಸ್

ಕಳೆದ ವರ್ಷದ ಹೊರಹರಿವು: 14,139 ಕ್ಯೂಸೆಕ್ಸ್

ದಾವಣಗೆರೆ ರೈತರಿಗೆ ಭದ್ರಾ ಡ್ಯಾಂ ನೀರು ಹರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದ್ದರೂ, ಹೋರಾಟ ಮಾಡಿದ್ದರೂ ನೀರು ಮಾತ್ರ ಬಿಡುಗಡೆಯಾಗಿಲ್ಲ. ಚನ್ನಗಿರಿ ಮತ್ತು ದಾವಣಗೆರೆಗೆ ಕುಡಿಯುವ ನೀರಿಗೆಂದು ಹರಿಸಲಾಗುತ್ತಿದ್ದ 1500 ಕ್ಯೂಸೆಕ್ಸ್ ನಿಲ್ಲಿಸಲಾಗಿದೆ. ಆದಷ್ಟು ಬೇಗ ಭದ್ರಾ ಡ್ಯಾಂನಿಂದ ದಾವಣಗೆರೆ ರೈತರಿಗೆ ನೀರು ಹರಿಸುವ ಮೂಲಕ ಭದ್ರಾ ಅಚ್ಚುಕಟ್ಟುದಾರರ ಹಿತ ಕಾಪಾಡುವಂತೆ ರೈತರು ಒತ್ತಾಯಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *