Home ದಾವಣಗೆರೆ ದಾವಣಗೆರೆ ನಗರಕ್ಕೆ ಒಲಿದ ರಾಜ್ಯಮಟ್ಟದ ‘ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025’ ಪ್ರಶಸ್ತಿ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ನಗರಕ್ಕೆ ಒಲಿದ ರಾಜ್ಯಮಟ್ಟದ ‘ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025’ ಪ್ರಶಸ್ತಿ!

Share
ದಾವಣಗೆರೆ
Share

ಬೆಂಗಳೂರು: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಘೋಷಿಸಿರುವ 2025-26 ನೇ ಸಾಲಿನ “ಸ್ವಚ್ಛ ವಾರ್ಡ್ ವಾಯು ಸರ್ವೇಕ್ಷಣೆ 2025” ಮೌಲ್ಯಮಾಪನದಲ್ಲಿ ದಾವಣಗೆರೆ ನಗರವು ಎರಡು ಪ್ರಮುಖ ರಾಜ್ಯಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ಅಡಿಯಲ್ಲಿ ಬರುವ ದಾವಣಗೆರೆ ನಗರವು, ಜನಸಂಖ್ಯೆ ಆಧಾರಿತ ವರ್ಗೀಕರಣದಲ್ಲಿ ಅತ್ಯುತ್ತಮ ಸಾಧನೆ ತೋರಿದೆ. ನಗರದ ಎಸ್‌ಎಸ್‌ ಬಡಾವಣೆ – ಬಿ ಬ್ಲಾಕ್ (ಜನಸಂಖ್ಯೆ ವರ್ಗ 2) ಹಾಗೂ ಡಿಸಿಎಂ ಟೌನ್‌ಶಿಪ್ (ಜನಸಂಖ್ಯೆ ವರ್ಗ 3) ವಾರ್ಡ್‌ಗಳು ಈ ವಿಶೇಷ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದಿವೆ.

ಈ ಗೌರವದೊಂದಿಗೆ ದಾವಣಗೆರೆ ನಗರಕ್ಕೆ ಒಟ್ಟು ರೂ. 25.00 ಲಕ್ಷಗಳು ನಗದು ಬಹುಮಾನವಾಗಿ ಲಭಿಸಿದೆ. ವಾಯು ಮಾಲಿನ್ಯ ನಿಯಂತ್ರಣ, ಪರಿಸರ ಜಾಗೃತಿ ಹಾಗೂ ಉತ್ತಮ ನೈರ್ಮಲ್ಯ ನಿರ್ವಹಣೆಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಮಹಾನಗರ ಪಾಲಿಕೆಯ ಸತತ ಪ್ರಯತ್ನ ಹಾಗೂ ಶ್ರಮಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ದಾವಣಗೆರೆಯ ನಾಗರಿಕರು ತೋರಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಬದ್ಧರಾಗಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles