Home ಕ್ರೈಂ ನ್ಯೂಸ್ ಬೆಂಗಳೂರಿನ PG ನಿವಾಸಿಗಳಿಗೆ ಶಾಕಿಂಗ್ ನ್ಯೂಸ್: ಎಕ್ಸ್‌ಪೈರ್ಡ್ ಮೊಸರು, ಕೃತಕ ಬಣ್ಣ ಬಳಸಿ ಅಡುಗೆ – 23 ಪಿಜಿಗಳ ಮೇಲೆ ಕ್ರಮ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಬೆಂಗಳೂರಿನ PG ನಿವಾಸಿಗಳಿಗೆ ಶಾಕಿಂಗ್ ನ್ಯೂಸ್: ಎಕ್ಸ್‌ಪೈರ್ಡ್ ಮೊಸರು, ಕೃತಕ ಬಣ್ಣ ಬಳಸಿ ಅಡುಗೆ – 23 ಪಿಜಿಗಳ ಮೇಲೆ ಕ್ರಮ!

Share
PG
Share

ಬೆಂಗಳೂರು: ಆಹಾರದ ಕಳಪೆ ಗುಣಮಟ್ಟ ಮತ್ತು ನೈರ್ಮಲ್ಯ ಕೊರತೆ ದೂರುಗಳ ಹಿನ್ನೆಲೆಯಲ್ಲಿ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಬೆಂಗಳೂರು ಸುತ್ತಮುತ್ತಲಿನ 64 ಪೇಯಿಂಗ್ ಗೆಸ್ಟ್ (PG) ವಸತಿ ನಿಲಯಗಳ ಮೇಲೆ ದಿಢೀರ್ ಪರಿಶೀಲನಾ ದಾಳಿ ನಡೆಸಿದೆ. ನಿಯಮ ಉಲ್ಲಂಘಿಸಿದ 23 ಪಿಜಿಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಪರಿಶೀಲನೆ ವೇಳೆ ಅವಧಿ ಮೀರಿದ (Expired) ಮೊಸರು, ಅಕ್ಕಿ ಹಿಟ್ಟು, ಬಿಸಿಬೇಳೆ ಬಾತ್ ಪೌಡರ್, ಕೃತಕ ಬಣ್ಣಗಳು, ಕಾಳುಮೆಣಸು ಹಾಗೂ ನಿಯಮಬಾಹಿರವಾಗಿ ಮುದ್ರಿತವಾದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಊಟದ ಮೇಜಿನ ಮೇಲೆಯೇ ತಿಗಣೆ ಔಷಧ!

ಬೊಮ್ಮಸಂದ್ರದ ‘ನಂದನ ಎಲೈಟ್ PG’ಯಲ್ಲಿ ಊಟದ ಮೇಜಿನ ಮೇಲೆಯೇ ಆಹಾರ ಪದಾರ್ಥಗಳ ಜೊತೆಗೆ ತಿಗಣೆ ನಾಶಕ ಪೌಡರ್ ಇಟ್ಟಿರುವುದು ಕಂಡುಬಂದಿದೆ. ಈ ಗಂಭೀರ ನೈರ್ಮಲ್ಯ ಉಲ್ಲಂಘನೆಯನ್ನು ಕಂಡ ಅಧಿಕಾರಿಗಳು ತಕ್ಷಣವೇ ಆ PGಯ ಊಟದ ಕೊಠಡಿಯನ್ನು (Dining Area) ಸೀಲ್‌ಡೌನ್ ಮಾಡಿದ್ದಾರೆ.

ಮಾದರಿಗಳ ಸಂಗ್ರಹ ಹಾಗೂ ತನಿಖೆ:

ದಾಳಿ ನಡೆಸಿದ ತಂಡವು ಹೆಚ್ಚಿನ ಪ್ರಯೋಗಾಲಯ ತಪಾಸಣೆಗಾಗಿ ವಿವಿಧ ಪಿಜಿಗಳಿಂದ 12 ಆಹಾರ ಮಾದರಿಗಳನ್ನು (Food Samples) ಸಂಗ್ರಹಿಸಿದೆ. ಕಳೆದ ಎರಡು ತಿಂಗಳಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾರ್ಕ್ ಸ್ಟೋರ್‌ಗಳು ಮತ್ತು ಆಹಾರ ತಯಾರಿಕಾ ಘಟಕಗಳ ಮೇಲೆ ಸರಣಿ ದಾಳಿಗಳು ಮುಂದುವರಿದಿವೆ.

ಇತ್ತೀಚೆಗಷ್ಟೇ ಅಮೆಜಾನ್, ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್‌ನಂತಹ ಆನ್‌ಲೈನ್ ಸಂಸ್ಥೆಗಳಲ್ಲಿ ವಿಷಕಾರಿ ಉಮ್ಮತ್ತಿ ಗಿಡದ ಕಾಯಿ/ಬೀಜಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಆಹಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿತ್ತು. ಆಹಾರ ನೈರ್ಮಲ್ಯ ಕಾಪಾಡುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಹೋಟೆಲ್ ಮಾಲೀಕರ ಸಂಘದೊಂದಿಗೆ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles