ಚೆನ್ನೈ: ರಾಜಕೀಯ ನಾಯಕರು ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಮಾತನಾಡುವಾಗ ಧರ್ಮದ ಗಡಿಗಳನ್ನು ಮೀರಬೇಕೇ ಎನ್ನುವ ಸಾರ್ವಜನಿಕ ಚರ್ಚೆ ಜೋರಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚೆನ್ನೈನ ಮುಸ್ಲಿಂ ಯುವತಿಯೊಬ್ಬರ ಪ್ರಶ್ನೆಯು ಈ ವಿಚಾರಕ್ಕೆ ಪ್ರಮುಖ ವೇದಿಕೆ ಒದಗಿಸಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮುಸ್ಲಿಂ ಮಹಿಳೆಯೊಬ್ಬರು ಕೇಳಿರುವ ಪ್ರಶ್ನೆಯು ಚರ್ಚೆಯನ್ನು ಹುಟ್ಟು ಹಾಕಿದೆ.
“ನೀವು ಸದಾ ಹಿಂದೂ ಮಹಿಳೆಯರ ಹಕ್ಕುಗಳ ಬಗ್ಗೆ ಧ್ವನಿ ಎತ್ತುತ್ತೀರಿ, ಆದರೆ ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯದ ವಿಷಯ ಬಂದಾಗ ನಿಮ್ಮ ಮೌನವೇಕೆ?” ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಆಕೆ ಪ್ರಸ್ತಾಪಿಸಿದ ಪ್ರಶ್ನೆಯು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಧಾರ್ಮಿಕ ಮುಖಂಡರು ಮಹಿಳೆಯರನ್ನು ಮನೆಯಲ್ಲೇ ಇರಬೇಕೆಂದು ಸೀಮಿತಗೊಳಿಸುವ ಹೇಳಿಕೆ ನೀಡಿದಾಗ, ಮಹಿಳಾ ಸಮಾನತೆಯನ್ನು ಪ್ರತಿಪಾದಿಸುವ ನಾಯಕರು ಯಾವುದೇ ತಾರತಮ್ಯವಿಲ್ಲದೆ ಖಂಡಿಸಬೇಕು ಎನ್ನುವುದು ಈ ಯುವತಿಯ ಮುಖ್ಯ ವಾದವಾಗಿದೆ.
ಮಹಿಳೆಯ ಶಿಕ್ಷಣ, ಉದ್ಯೋಗ, ವಿವಾಹ ಮತ್ತು ಭವಿಷ್ಯವನ್ನು ನಿರ್ಧರಿಸುವ ಸ್ವಾತಂತ್ರ್ಯ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿರದೆ, ಸಮಾನತೆಯ ತತ್ವವನ್ನು ಆಧರಿಸಿರಬೇಕು. ನೈಜ ರಾಜಕೀಯ ನಾಯಕತ್ವ ಎಂದರೆ ಕೇವಲ ತಮ್ಮ ಬೆಂಬಲಿಗರಿಗಷ್ಟೇ ಅಲ್ಲದೆ, ಪ್ರತಿಯೊಬ್ಬ ಮಹಿಳೆಯ ಹಕ್ಕುಗಳಿಗೂ ನಿಷ್ಪಕ್ಷಪಾತವಾಗಿ ಧ್ವನಿಯಾಗುವುದಾಗಿದೆ.





Leave a comment