Home ಕ್ರೈಂ ನ್ಯೂಸ್ ಮರಿ ಅಶೋಕ್ ‘ಗಣವೇಶ’ ಧರಿಸಿಲ್ಲ? ‘ಧರ್ಮರಕ್ಷಕ’ ಏಕೆ ಆಗಿಲ್ಲ? ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ?: ಆರ್. ಅಶೋಕ್ ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮರಿ ಅಶೋಕ್ ‘ಗಣವೇಶ’ ಧರಿಸಿಲ್ಲ? ‘ಧರ್ಮರಕ್ಷಕ’ ಏಕೆ ಆಗಿಲ್ಲ? ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ?: ಆರ್. ಅಶೋಕ್ ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ಮುಂದುವರಿದಿದೆ. ಕೆಪಿಎಸ್ ಸಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಅಶೋಕ್ ಅಣ್ಣಾ, RSS ಕುರಿತು ಮರಿ ಖರ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬಾ ಚಿಂತೆಗೀಡಾಗಿದ್ದೀರಿ..! ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಆದರೆ, ನೀವು ಉತ್ತರಿಸಬೇಕಾದ ನಿಜವಾದ ಪ್ರಶ್ನೆಗಳಿವೆ. ಮರಿ ಅಶೋಕ್ ಏಕೆ ‘ಗಣವೇಶ’ ಧರಿಸಿಲ್ಲ? ಮರಿ ಅಶೋಕ್ ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ? ಮರಿ ಅಶೋಕ್ ಇನ್ನೂ ‘ಧರ್ಮರಕ್ಷಕ’ನಾಗಿ ಏಕೆ ಆಗಿಲ್ಲ? ಹಿರಿ
ಅಶೋಕ್ ಅವರು ಈ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಬಹಳ ಮುಖ್ಯವಾಗಿ, ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಯಾವಾಗ ಮಾತನಾಡುತ್ತೀರಿ? ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ? ಕೆಪಿಎಸ್‌ಸಿ (KPSC) ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ನಾಯಕರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಯಾವಾಗ ಮಾತನಾಡುತ್ತೀರಿ? ನಿಮ್ಮ ಪಕ್ಷಕ್ಕೆ ಸೇರಿದವರ ಚಿತ್ರಗಳ ಬಗ್ಗೆ ನೀವು ಯಾವಾಗ ಮಾತನಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *