ಮುಂಬೈ: ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಕಮಿಷನರ್ ತುಕಾರಾಂ ಮುಂಧೆ ಅವರ ಕಟ್ಟುನಿಟ್ಟಿನ ಆಡಳಿತ ವೈಖರಿಗೆ ದೇಶದ ಉನ್ನತ ಆಹಾರ ನಿಯಂತ್ರಣ ಸಂಸ್ಥೆಯಾದ ಎಫ್ಎಸ್ಎಸ್ಎಐ ಬೆಂಬಲ ಸೂಚಿಸಿದೆ.
ಆಹಾರ ಸುರಕ್ಷತಾ ಇಲಾಖೆಗೆ ವರ್ಗಾವಣೆ ಮಾಡುವುದನ್ನು ‘ಶಿಕ್ಷೆಯ ಪೋಸ್ಟಿಂಗ್’ (Punishment Posting) ಎಂದು ಭಾವಿಸುವ ಅಭಿಪ್ರಾಯವನ್ನು ಎಫ್ಎಸ್ಎಸ್ಎಐ ಮುಖ್ಯಸ್ಥ ಜಿ. ಕಮಲವರ್ಧನ ರಾವ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ತುಕಾರಾಂ ಮುಂಧೆ ಅವರು ಆಹಾರ ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿರುವ ರೀತಿಯು, ಈ ವಿಭಾಗದ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿದೆ ಎಂದು ಅವರು ಪ್ರಶಂಸಿದ್ದಾರೆ.
ಜನರ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ಆದ್ಯತೆ ನೀಡುವಲ್ಲಿ ಮುಂಧೆ ಅವರ ಶ್ರಮ ಮಾದರಿಯಾಗಿದೆ ಎಂದು ಕಮಲವರ್ಧನ ರಾವ್ ತಿಳಿಸಿದ್ದಾರೆ.





Leave a comment