Home ಕ್ರೈಂ ನ್ಯೂಸ್ ಇರಾನ್ ಮದುವೆ ಸಮಾರಂಭದ ಮೇಲೆ ಯುಎಸ್ ಏರ್‌ಸ್ಟ್ರೈಕ್: ಮಗು ಸೇರಿ 5 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಇರಾನ್ ಮದುವೆ ಸಮಾರಂಭದ ಮೇಲೆ ಯುಎಸ್ ಏರ್‌ಸ್ಟ್ರೈಕ್: ಮಗು ಸೇರಿ 5 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ!

Share
ಇರಾನ್
Share

ತೆಹ್ರಾನ್: ದಕ್ಷಿಣ ಇರಾನ್‌ನ ಹೊರ್ಮೋಜ್ಗಾನ್ ಪ್ರಾಂತ್ಯದ ಸಿರಿಕ್ ಕೌಂಟಿಯ ಕೊಹೆಸ್ಟಾಕ್‌ನಲ್ಲಿರುವ ವಸತಿ ಗೃಹವೊಂದರ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 5 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಗೊಳಗಾದ ಮನೆಯಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು ಎಂದು ಇರಾನ್ ಅಧಿಕಾರಿಗಳು ಧೃಡಪಡಿಸಿದ್ದಾರೆ. ಮೃತರ ಪೈಕಿ 4 ವರ್ಷದ ಬಾಲಕಿಯೂ ಸೇರಿದ್ದಾಳೆ.

ಉದ್ವಿಗ್ನತೆ ಹೆಚ್ಚಿಸಿದ ದಾಳಿ

ಕಳೆದ ಕೆಲವು ವಾರಗಳಿಂದ ಕಾಯ್ದುಕೊಂಡಿದ್ದ ಶಾಂತಿಯ ವಾತಾವರಣದ ನಂತರ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಭೀಕರ ಯುದ್ಧ ವಾತಾವರಣ ನಿರ್ಮಾಣವಾಗಿದೆ. ಇರಾನ್‌ನ ವಿದೇಶಾಂಗ ಸಚಿವಾಲಯ ಈ ದಾಳಿಯನ್ನು ಕಠಿಣವಾಗಿ ಖಂಡಿಸಿದ್ದು, “ಅಮೆರಿಕದ ನಿರಂತರ ದೌರ್ಜನ್ಯದ ಭಾಗ ಇದಾಗಿದೆ” ಎಂದು ಕಿಡಿಕಾರಿದೆ.

ಅಮೆರಿಕ ಮತ್ತು ಇರಾನ್ ಪ್ರತ್ಯಾರೋಪ

ಅಮೆರಿಕದ ಸೆಂಟ್ರಲ್ ಕಮಾಂಡ್ (US CENTCOM) ಇರಾನ್‌ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕೋರ್ಪ್ಸ್ (IRGC) ನ ರೇಡಾರ್, ವಾಯು ರಕ್ಷಣೆ ಮತ್ತು ನೌಕಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ, ಇರಾನ್ ಪಡೆಗಳು ಇರಾಕ್ ಮತ್ತು ಜೋರ್ಡಾನ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿವೆ.

ಜಾಗತಿಕ ತೈಲ ಮಾರುಕಟ್ಟೆ ಮೇಲೆ ಪರಿಣಾಮ

ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ ಪ್ರದೇಶದಲ್ಲಿ ದಾಳಿ ನಡೆದಿರುವುದರಿಂದ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಲಕ್ಷಣಗಳು ಕಂಡುಬಂದಿವೆ.

The Guardian
Share

Leave a comment

Leave a Reply

Your email address will not be published. Required fields are marked *