Home ದಾವಣಗೆರೆ ‘ಸಿನಿಮಾ ಇಷ್ಟವಾಗದಿದ್ದರೆ ನಡುರಸ್ತೆಯಲ್ಲೇ ತಲೆ ಬೋಳಿಸಿಕೊಳ್ತೀನಿ’: ನಟಿ ಶ್ವೇತಾ ಲಕ್ಷ್ಮಣ್ ಓಪನ್ ಚಾಲೆಂಜ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

‘ಸಿನಿಮಾ ಇಷ್ಟವಾಗದಿದ್ದರೆ ನಡುರಸ್ತೆಯಲ್ಲೇ ತಲೆ ಬೋಳಿಸಿಕೊಳ್ತೀನಿ’: ನಟಿ ಶ್ವೇತಾ ಲಕ್ಷ್ಮಣ್ ಓಪನ್ ಚಾಲೆಂಜ್!

Share
ಸಿನಿಮಾ
Share

ಹೈದರಾಬಾದ್: ಸಿನಿಮಾ ಗೆಲ್ಲಲು ದೊಡ್ಡ ಸ್ಟಾರ್‌ಗಳು, ಕೋಟಿ ಕೋಟಿ ಬಜೆಟ್ ಅಥವಾ ಗ್ಲಾಮರ್ ಹಾಡುಗಳೇ ಬೇಕು ಎಂಬ ಕಾಲ ಈಗ ಬದಲಾಗಿದೆ. ಕಥೆ ಮತ್ತು ಕಂಟೆಂಟ್ ಚೆನ್ನಾಗಿದ್ದರೆ ಸಣ್ಣ ಸಿನಿಮಾಗಳು ಕೂಡ ಪ್ರೇಕ್ಷಕರ ಮನ ಗೆಲ್ಲಬಲ್ಲವು. ಇದೇ ನಂಬಿಕೆಯೊಂದಿಗೆ ‘ಸಹ: ಲೈಫ್ ಆಫ್ ಸಂಜು’ ಸಿನಿಮಾದ ನಾಯಕಿ ಶ್ವೇತಾ ಲಕ್ಷ್ಮಣ್ ಪ್ರೇಕ್ಷಕರಿಗೆ ಬಹಿರಂಗ ಸವಾಲೊಂದನ್ನು ಹಾಕಿದ್ದಾರೆ.

ಸೆಪ್ಟೆಂಬರ್ 4ರಂದು ತೆರೆಗೆ ಬರಲು ಸಜ್ಜಾಗಿರುವ ‘ಸಹ: ಲೈಫ್ ಆಫ್ ಸಂಜು’ ಚಿತ್ರದ ಟ್ರೇಲರ್ ಲಾಂಚ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ವೇತಾ, “ಸಿನಿಮಾ ನೋಡಿ ಪ್ರೇಕ್ಷಕರು ನಿರಾಶೆಗೊಂಡರೆ (ಡಿಸಪ್ಪಾಯಿಂಟ್ ಆದರೆ) ನಾನು ನಡುರಸ್ತೆಯಲ್ಲಿ ನಿಂತು ತಲೆ ಬೋಳಿಸಿಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

“ನಮ್ಮ ಬಳಿ ದೊಡ್ಡ ಬಜೆಟ್ ಅಥವಾ ಬಿಗ್ ಸ್ಟಾರ್‌ಗಳು ಇರಲಿಲ್ಲದಿರಬಹುದು, ಆದರೆ ಕಂಟೆಂಟ್ ಮೇಲೆ ಅಪಾರ ನಂಬಿಕೆ ಇದೆ. ಇದು ಕೇವಲ ರೊಮ್ಯಾಂಟಿಕ್ ಹಾಡುಗಳಿರುವ ಸಾಂಪ್ರದಾಯಿಕ ಪ್ರೇಮಕಥೆಯಲ್ಲ. ಮಾನವ ಜೀವನದ ನೋವು, ತ್ಯಾಗ ಮತ್ತು ಸಣ್ಣ ನಿರ್ಧಾರಗಳು ತರುವ ದೊಡ್ಡ ಬದಲಾವಣೆಗಳನ್ನು ಪ್ರತಿಬಿಂಬಿಸುವ ಭಾವನಾತ್ಮಕ ಚಿತ್ರ” ಎಂದು ಅವರು ವಿವರಿಸಿದ್ದಾರೆ.

ಇದು ಕೇವಲ ಒಂದು ಸಿನಿಮಾವಲ್ಲ, ಸುಮಾರು 50ರಿಂದ 60 ಹೊಸ ಪ್ರತಿಭೆಗಳ ಪರಿಶ್ರಮ ಹಾಗೂ ಕನಸುಗಳ ಫಲ ಎಂದು ಶ್ವೇತಾ ಹೇಳಿದ್ದಾರೆ. ನಿಶಾಂತ್ ದೋತಿ ನಿರ್ದೇಶನ ಹಾಗೂ ಶೇಖರ್ ಚಂದ್ರ ಸಂಗೀತ ನೀಡಿರುವ ಈ ಚಿತ್ರವನ್ನು ತೇಜ ವೆಲ್ಪುಚರ್ಲ ನಿರ್ಮಿಸಿದ್ದು, ಕುಮಾರ್ ಕಾಸರಂ ನಾಯಕನಾಗಿ ನಟಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles