ಮುಂಬೈ: ಬಾಲಿವುಡ್‌ನ ಹಿರಿಯ ನಟ ಗೋವಿಂದಾ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ 39 ವರ್ಷಗಳ ದಾಂಪತ್ಯ ಜೀವನ ಇತ್ತೀಚೆಗೆ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ. 1987ರಲ್ಲಿ ರಹಸ್ಯವಾಗಿ ವಿವಾಹವಾಗಿದ್ದ ಈ ಜೋಡಿಯ ಖಾಸಗಿ ಜೀವನದಲ್ಲಿ ಕಳೆದ ಕೆಲವು ವರ್ಷಗಳಿಂದ ಏರಿಳಿತಗಳು ಕಂಡುಬಂದಿದ್ದವು.
ಸುನೀತಾ ಅವರು ಸಂದರ್ಶನಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಗೋವಿಂದಾ ಅವರ ಅಕ್ರಮ ಸಂಬಂಧಗಳ ಕುರಿತು ಬಹಿರಂಗವಾಗಿ ಮಾತನಾಡಿದ್ದು ದೊಡ್ಡ ಸಂಚಲನ ಮೂಡಿಸಿತ್ತು. ಇತ್ತೀಚೆಗೆ ಗೋವಿಂದಾ ತಮ್ಮ ಸಹನಟಿ ಕೋಮಲ್ ರಾಣಿ ಜೊತೆ ಕಾಣಿಸಿಕೊಂಡಾಗ ಸುನೀತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಗೋವಿಂದಾ ಕೂಡ ವೀಡಿಯೊ ಮೂಲಕ ಸುನೀತಾ ಹೇಳಿಕೆಗಳಿಗೆ ತಿರುಗೇಟು ನೀಡಿದ್ದರು.
ಆದರೆ, ಆಗಸ್ಟ್ 19, 2026 ರಂದು ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ ಸುನೀತಾ ಅಹುಜಾ, ತಮಗೂ ಹಾಗೂ ಗೋವಿಂದಾ ಅವರಿಗೂ ಇದ್ದ ವಿಚ್ಛೇದನ ಅರ್ಜಿಯನ್ನು ಅಧಿಕೃತವಾಗಿ ವಾಪಸ್ ಪಡೆದಿದ್ದಾರೆ. ಈ ಮೂಲಕ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ದಾಂಪತ್ಯ ಕಲಹಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.





Leave a comment