Home ದಾವಣಗೆರೆ ‘ಋತುಚಕ್ರದ ತೀವ್ರ ನೋವು, ರಜೆ ಬೇಕು’: ಜೆನ್ ಜೀ ಉದ್ಯೋಗಿಯ ನೇರ ಇಮೇಲ್ ಹಂಚಿಕೊಂಡ ಗುರುಗ್ರಾಮ್ ಸಿಇಒ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

‘ಋತುಚಕ್ರದ ತೀವ್ರ ನೋವು, ರಜೆ ಬೇಕು’: ಜೆನ್ ಜೀ ಉದ್ಯೋಗಿಯ ನೇರ ಇಮೇಲ್ ಹಂಚಿಕೊಂಡ ಗುರುಗ್ರಾಮ್ ಸಿಇಒ!

Share
ಉದ್ಯೋಗಿ
Share

ನವದೆಹಲಿ / ಗುರುಗ್ರಾಮ್: ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳು ರಜೆ ತಗೆದುಕೊಳ್ಳುವಾಗ ಕಾರಣಗಳನ್ನು ಮುಚ್ಚಿಡುವ ಅಥವಾ ಸಾಂಪ್ರದಾಯಿಕ ಶೈಲಿಯಲ್ಲಿ ಇಮೇಲ್ ಕಳುಹಿಸುವ ಅಭ್ಯಾಸಕ್ಕೆ ಇಂದಿನ ‘ಜೆನ್ ಜೀ’ (Gen Z) ಪೀಳಿಗೆಯ ಯುವಜನತೆ ವಿದಾಯ ಹೇಳುತ್ತಿದ್ದಾರೆ.

ಇದಕ್ಕೆ ಉದಾಹರಣೆಯಾಗಿ, ಗುರುಗ್ರಾಮ್ ಮೂಲದ ‘ನಾಟ್ ಡೇಟಿಂಗ್’ (Knot Dating) ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಇಒ ಜಸ್ವೀರ್ ಸಿಂಗ್ ಅವರು ತಮ್ಮ ಕಂಪನಿಯ ಯುವ ಉದ್ಯೋಗಿಯೊಬ್ಬರು ಕಳುಹಿಸಿದ ಇಮೇಲ್ ಅನ್ನು ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಮೇಲ್‌ನಲ್ಲೇನಿತ್ತು?

ಸದರಿ ಮಹಿಳಾ ಉದ್ಯೋಗಿಯು, “ಹಲೋ ಸರ್, ತೀವ್ರವಾದ ಮುಟ್ಟಿನ ನೋವು (Menstrual Pain) ಹಾಗೂ ಸೆಳೆತದಿಂದಾಗಿ ನಾನು ಇಂದು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ. ಯಾವುದೇ ತುರ್ತು ಕೆಲಸವಿದ್ದಲ್ಲಿ ಇಮೇಲ್ ಅಥವಾ ಫೋನ್ ಮೂಲಕ ಲಭ್ಯವಿರುತ್ತೇನೆ” ಎಂದು ನೇರವಾಗಿ ಬರೆದಿದ್ದಾರೆ.

ಸಿಇಒ ಅಭಿಪ್ರಾಯ:

ಈ ಇಮೇಲ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡ ಸಿಇಒ ಜಸ್ವೀರ್ ಸಿಂಗ್, “ಜೆನ್ ಜೀ ಪೀಳಿಗೆಯು ಆಫೀಸ್‌ಗಳಲ್ಲಿ ಅನಗತ್ಯ ಮುಜುಗರದ ವಾತಾವರಣವನ್ನು ಇಲ್ಲವಾಗಿಸಿದೆ. ಅವರು ಪ್ರತಿಯೊಂದನ್ನೂ ಮುಕ್ತವಾಗಿ ಮತ್ತು ನೇರವಾಗಿ ಹೇಳುತ್ತಾರೆ. 10 ವರ್ಷಗಳ ಹಿಂದೆ ಮುಟ್ಟಿನ ನೋವಿನ ಕಾರಣವನ್ನು ಇಷ್ಟೊಂದು ನೇರವಾಗಿ ಇಮೇಲ್‌ನಲ್ಲಿ ತಿಳಿಸುವುದು ಅಪರೂಪವಾಗಿತ್ತು” ಎಂದು ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ:

ಈ ಪೋಸ್ಟ್ ನೆಟ್ಟಿಗರ ನಡುವೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಯುವತಿಯ ನೇರ ನುಡಿ ಹಾಗೂ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದರೆ, ಇನ್ನು ಕೆಲವರು ಇದು ಕೇವಲ ಒಂದು ಪೀಳಿಗೆಗೆ ಸೀಮಿತವಲ್ಲ; ಆಫೀಸ್ ಸಂಸ್ಕೃತಿಯಲ್ಲಿ (Workplace Culture) ಆಗುತ್ತಿರುವ ಧನಾತ್ಮಕ ಬದಲಾವಣೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Share

Leave a comment

Leave a Reply

Your email address will not be published. Required fields are marked *