Home ಕ್ರೈಂ ನ್ಯೂಸ್ ‘ನನ್ನ ಮೂಡ್ ಹಾಳು ಮಾಡಿದೆ’: ಹನಿಮೂನ್ ಗೆ ಹೋಗಿದ್ದ ವೇಳೆ ಮುಟ್ಟಿನ ನೋವಿನಲ್ಲಿದ್ದ ಪತ್ನಿ ಚಚ್ಚಿ ಕೊಂದಷ್ಟು ಹಿಂಸಿಸಿದ ಪಾಪಿ ಪತಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ನನ್ನ ಮೂಡ್ ಹಾಳು ಮಾಡಿದೆ’: ಹನಿಮೂನ್ ಗೆ ಹೋಗಿದ್ದ ವೇಳೆ ಮುಟ್ಟಿನ ನೋವಿನಲ್ಲಿದ್ದ ಪತ್ನಿ ಚಚ್ಚಿ ಕೊಂದಷ್ಟು ಹಿಂಸಿಸಿದ ಪಾಪಿ ಪತಿ!

Share
ಹನಿಮೂನ್
Share

ಗೋರಖ್‌ಪುರ: ಹನಿಮೂನ್ ಪ್ರವಾಸದ ವೇಳೆ ಪತ್ನಿಗೆ ಮುಟ್ಟಾಗಿದ್ದಕ್ಕೆ (ಋತುಮತಿಯಾಗಿದ್ದಕ್ಕೆ) ಆಕೆಯ ಮೇಲೆಯೇ ಪತಿಯೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿ, ಗಂಟಲು ಹಿಸುಕಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗೋರಖ್‌ಪುರದ ಯುವತಿಯೊಬ್ಬಳು ತನ್ನ ಪತಿ ದೆಹಲಿ ಮೂಲದ ನಿಖಿಲ್ ಮಿಶ್ರಾ ಹಾಗೂ ಆತನ ಕುಟುಂಬದ ವಿರುದ್ಧ ಈ ದೂರು ನೀಡಿದ್ದಾಳೆ.

ಘಟನೆಯ ವಿವರ:

ಮೇ 30, 2023 ರಂದು ದೆಹಲಿಯಲ್ಲಿ ಇವರ ವಿವಾಹ ನಡೆದಿತ್ತು. ಮದುವೆ ವೇಳೆ ವಧುವಿನ ಕಡೆಯವರು ಸುಮಾರು ₹20 ಲಕ್ಷ ನಗದು, ಕಾರು ಸೇರಿದಂತೆ ₹40 ಲಕ್ಷ ಮೌಲ್ಯದ ವರದಕ್ಷಿಣೆ ನೀಡಿದ್ದರು. ಆದರೆ, ಮದುವೆಯಾದ ತಕ್ಷಣದಿಂದಲೇ ಅತ್ತೆ-ನಾStyle ವರದಕ್ಷಿಣೆ ವಿಚಾರವಾಗಿ ನವವಧುವಿಗೆ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದರು.

ಜುಲೈ 4, 2023 ರಂದು ದಂಪತಿ ಹನಿಮೂನ್‌ಗಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಯುವತಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಮುಟ್ಟಾಗಿದ್ದಳು. ಇದರಿಂದ ಆಕ್ರೋಶಗೊಂಡ ಪತಿ ನಿಖಿಲ್, “ನನ್ನ ಮೂಡ್ ಹಾಳು ಮಾಡಿದೆ” ಎಂದು ಕಿರುಚಾಡಿ ಪತ್ನಿಗೆ ಕಪಾಳಮೋಕ್ಷ ಮಾಡಿ, ಒದ್ದು, ಗಂಟಲು ಹಿಸುಕಲು ಯತ್ನಿಸಿದ್ದಾನೆ. ಹೋಟೆಲ್ ಸಿಬ್ಬಂದಿ ಯುವತಿಯ ಕಿರುಚಾಟ ಕೇಳಿ ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿದ್ದಾರೆ.

ಮನೆಯಿಂದ ಹೊರಹಾಕಿದ ಕುಟುಂಬ:

ಇದರ ಬೆನ್ನಲ್ಲೇ ಪತಿಯು ಮಾವನಿಗೆ ಕರೆ ಮಾಡಿ, “ನನಗೆ ನಿಮ್ಮ ಮಗಳು ಬೇಡ, ಕರೆದುಕೊಂಡು ಹೋಗಿ” ಎಂದು ಬೆದರಿಕೆ ಹಾಕಿದ್ದ. ದೆಹಲಿಗೆ ಹಿಂತಿರುಗಿದ ನಂತರವೂ ಅತ್ತೆ ಸಂಜು ಮಿಶ್ರಾ ಹಾಗೂ ನಾದಿನಿ ನೇಹಾ ಪಾಂಡೆ ಆಕೆಗೆ ಹಿಂಸೆ ನೀಡಿ, ಜುಲೈ 14, 2023 ರಂದು ಮನೆಯಿಂದ ಹೊರಹಾಕಿದ್ದಾರೆ.

ಸಂತ್ರಸ್ತೆ ಪೊಲೀಸ್ ಠಾಣೆಗೆ ಅಲೆದಾಡಿದರೂ ದೂರು ದಾಖಲಾಗಿರಲಿಲ್ಲ. ಅಂತಿಮವಾಗಿ ಗೋರಖ್‌ಪುರ ಎಸ್‌ಎಸ್‌ಪಿ ಡಾ. ಕೌಸ್ತುಭ್ ಅವರ ಮಧ್ಯಪ್ರವೇಶದ ನಂತರ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಐಆರ್‌ (FIR) ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles