Home ಕ್ರೈಂ ನ್ಯೂಸ್ ರ್ಯಾಪಿಡೋ ಬೈಕ್ ಚಾಲಕನಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ; ಚಾಲಕನನ್ನು ಖಾಯಂ ಆಗಿ ನಿಷೇಧಿಸಿದ ಸಂಸ್ಥೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರ್ಯಾಪಿಡೋ ಬೈಕ್ ಚಾಲಕನಿಂದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ; ಚಾಲಕನನ್ನು ಖಾಯಂ ಆಗಿ ನಿಷೇಧಿಸಿದ ಸಂಸ್ಥೆ

Share
ಬೈಕ್
Share

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ 17 ವರ್ಷದ ಅಪ್ರಾಪ್ತ ಬಾಲಕನಿಗೆ ಚಲಿಸುವ ಬೈಕ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದಾಗ ಚಾಲಕ ತನ್ನ ಕಾಲು ಮತ್ತು ತೊಡೆಗಳನ್ನು ಸ್ಪರ್ಶಿಸಲು ಯತ್ನಿಸಿದ್ದನ್ನು ಬಾಲಕ ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದನು.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸ್ಪಂದಿಸಿದ ರ್ಯಾಪಿಡೋ ಸಂಸ್ಥೆಯು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಿರುಕುಳ ನೀಡಿದ ಚಾಲಕನನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ಖಾಯಂ ಆಗಿ ತೆಗೆದುಹಾಕಿದೆ.

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಸಂಸ್ಥೆ ತಿಳಿಸಿದ್ದು, ಬಾಲಕನು ರ್ಯಾಪಿಡೋ ಸಂಸ್ಥೆಯ ತಕ್ಷಣದ ಕ್ರಮಕ್ಕೆ ಧನ್ಯವಾದ ತಿಳಿಸಿದ್ದಾನೆ

Share

Leave a comment

Leave a Reply

Your email address will not be published. Required fields are marked *

Related Articles