Home ಕ್ರೈಂ ನ್ಯೂಸ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕನ ಪಿಸ್ತೂಲ್‌ನಿಂದ ಆಕಸ್ಮಿಕ ಫೈರಿಂಗ್: ವಾರಣಾಸಿ ಏರ್‌ಪೋರ್ಟ್‌ನಲ್ಲಿ ತಪ್ಪಿದ ಮಹಾದುರಂತ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಯಾಣಿಕನ ಪಿಸ್ತೂಲ್‌ನಿಂದ ಆಕಸ್ಮಿಕ ಫೈರಿಂಗ್: ವಾರಣಾಸಿ ಏರ್‌ಪೋರ್ಟ್‌ನಲ್ಲಿ ತಪ್ಪಿದ ಮಹಾದುರಂತ!

Share
ವಾರಣಾಸಿ
Share

ವಾರಣಾಸಿ: ಉತ್ತರ ಪ್ರದೇಶದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕನೊಬ್ಬನ ಲೈಸೆನ್ಸ್ಡ್ ಪಿಸ್ತೂಲ್ ಶಸ್ತ್ರಾಸ್ತ್ರ ತಪಾಸಣೆ (Weapons Check) ವೇಳೆ ಆಕಸ್ಮಿಕವಾಗಿ ಸಿಡಿದ ಪರಿಣಾಮ, ವಿಮಾನ ನಿಲ್ದಾಣದ ಇಬ್ಬರು ಸ್ಕ್ರೀನಿಂಗ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಘಟನೆಯ ವಿವರ:

ಉತ್ತರ ಪ್ರದೇಶದ ಅಜಂಘಡ್ ಮೂಲದ ಪ್ರಯಾಣಿಕನೊಬ್ಬ ತನ್ನ ಪತ್ನಿಯೊಂದಿಗೆ ವಾರಣಾಸಿಯಿಂದ ಮುಂಬೈಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ (ವಿಮಾನ ಸಂಖ್ಯೆ: IX-1810) ವಿಮಾನ ಏರಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ನಿಯಮದಂತೆ ಆತ ತಾನು ಹೊಂದಿದ್ದ ಪಿಸ್ತೂಲ್ ಹಾಗೂ ಮ್ಯಾಗಜೀನ್ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದ.

ಬೆಳಿಗ್ಗೆ ಸುಮಾರು 9:30 ರ ವೇಳೆಗೆ ಸೆಕ್ಯೂರಿಟಿ ಹೋಲ್ಡ್ ಏರಿಯಾದಲ್ಲಿ ಬಂದೂಕು ಮತ್ತು ಅದರ ದಾಖಲೆಗಳನ್ನು ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಪಿಸ್ತೂಲ್‌ನಿಂದ ಗುಂಡು ತುದಿಗೆ ಜಾರಿದ್ದು, ನೆಲಕ್ಕೆ ಅಪ್ಪಳಿಸಿ ಬಳಿಕ ಸಮೀಪದಲ್ಲೇ ನಿಂತಿದ್ದ AAICLAS (ವಿಮಾನ ನಿಲ್ದಾಣ ಸರಕು ರವಾಣೆ ಹಾಗೂ ಸೇವಾ ಸಂಸ್ಥೆ) ಸಿಬ್ಬಂದಿಗೆ ತಗಲಿದೆ.

ಸಿಬ್ಬಂದಿಗೆ ಗಾಯ, ಆಸ್ಪತ್ರೆಗೆ ದಾಖಲು:

ಈ ಆಕಸ್ಮಿಕ ಗುಂಡಿನೇಟಿನಿಂದಾಗಿ ಮಹಿಳಾ ಸಿಬ್ಬಂದಿಯ ತೊಡೆಗೆ ಹಾಗೂ ಪುರುಷ ಸಿಬ್ಬಂದಿಯ ಕೈಗೆ ಗಾಯಗಳಾಗಿವೆ. ತಕ್ಷಣವೇ ಇಬ್ಬರನ್ನೂ ಹತ್ತಿರದ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಇಬ್ಬರೂ ಸಿಬ್ಬಂದಿ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರಿಗೆ ಘಟನೆ ಕುರಿತು ಮಾಹಿತಿ ನೀಡಲಾಗಿದ್ದು, ಆಕಸ್ಮಿಕ ಫೈರಿಂಗ್ ಕುರಿತು ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *