Home ಕ್ರೈಂ ನ್ಯೂಸ್ 10 ಕೋಟಿ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್: 5,430ಕ್ಕೂ ಹೆಚ್ಚು ಖಾತೆ ಬಳಸಿ ಸಿಕ್ಕಿಬಿದ್ದ ಪ್ರಸಿದ್ಧ ‘ರೀಲ್ಸ್ ಸ್ಟಾರ್’!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

10 ಕೋಟಿ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್: 5,430ಕ್ಕೂ ಹೆಚ್ಚು ಖಾತೆ ಬಳಸಿ ಸಿಕ್ಕಿಬಿದ್ದ ಪ್ರಸಿದ್ಧ ‘ರೀಲ್ಸ್ ಸ್ಟಾರ್’!

Share
ರೀಲ್ಸ್ ಸ್ಟಾರ್
Share

ಪುಣೆ: ವೃದ್ಧರೊಬ್ಬರನ್ನು ಹೆದರಿಸಿ ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬರೋಬ್ಬರಿ ₹10.74 ಕೋಟಿ ಹಣ ದೋಚಿದ್ದ ಪ್ರಮುಖ ಆರೋಪಿ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (ರೀಲ್ಸ್ ಸ್ಟಾರ್) ರೋಹನ್ ಜಾದವ್‌ನನ್ನು ಪುಣೆ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಬ್ಯಾಂಕ್ ಖಾತೆ ಹಾಗೂ ಹಣಕಾಸಿನ ಮೂಲಗಳನ್ನು ಜಪ್ತಿ ಮಾಡಿದ ಬೆನ್ನಲ್ಲೇ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.

ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚನೆ:

ಕಳೆದ ಜನವರಿಯಲ್ಲಿ ವೃದ್ಧರೊಬ್ಬರನ್ನು ಸಂಪರ್ಕಿಸಿದ್ದ ಸೈಬರ್ ವಂಚಕರ ತಂಡ, ತಾವೇ ಸಿಬಿಐ (CBI) ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ವೃದ್ಧರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ₹10.74 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದರು. ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೆಟ್ಟಿಲೇರಿದ್ದರು.

5,435 ಬ್ಯಾಂಕ್ ಖಾತೆಗಳು & ಹಾಂಗ್‌ಕಾಂಗ್ ಲಿಂಕ್:

ತನಿಖೆ ಕೈಗೆತ್ತಿಕೊಂಡ ಪೊಲೀಸರು ಹಣ ಹಿಂಪಡೆದ ಎಟಿಎಂ ಸಿಸಿಟಿವಿ ಆಧರಿಸಿ ಹರ್ಷದ್ ಧಂತೋಲೆ, ಸಮರ್ಥ್ ದೇಶಮುಖ್ ಮತ್ತು ಅಮರ್ ಅಟ್ಟರ್ಗಿ ಎಂಬ ಮೂವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಹಣವನ್ನು ರೋಹನ್ ಜಾದವ್‌ಗೆ ನೀಡಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದರು.

ವಂಚಿಸಿದ ಹಣವನ್ನು ಪತ್ತೆ ಹಚ್ಚದಂತೆ ಮಾಡಲು ರೋಹನ್ ಬರೋಬ್ಬರಿ 5,435 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದ. ಟೆಲಿಗ್ರಾಂ ಆಪ್ ಮೂಲಕ ಹಾಂಗ್‌ಕಾಂಗ್‌ನ ವಂಚಕರ ಜೊತೆ ವಿಡಿಯೋ ಕಾಲ್‌ನಲ್ಲಿ ಸಂಪರ್ಕದಲ್ಲಿದ್ದ ಈತ, ಕ್ರಿಪ್ಟೋಕರೆನ್ಸಿ (Cryptocurrency) ಬಳಸಿ ಹಣವನ್ನು ವಿದೇಶಕ್ಕೆ ವರ್ಗಾಯಿಸಿ ಭಾರಿ ಕಮಿಷನ್ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles