Home ದಾವಣಗೆರೆ ಮುಂಗಾರು ಬೆಳೆಗೆ ಭದ್ರಾ ಡ್ಯಾಂ ನೀರು ಬಿಡದಿದ್ದರೆ ಆಗಸ್ಟ್ 16ರಿಂದ ಹೋರಾಟ ತೀವ್ರ: ದಾವಣಗೆರೆಯಲ್ಲಿ ರೈತರ ಎಚ್ಚರಿಕೆ!
ದಾವಣಗೆರೆನವದೆಹಲಿಬೆಂಗಳೂರು

ಮುಂಗಾರು ಬೆಳೆಗೆ ಭದ್ರಾ ಡ್ಯಾಂ ನೀರು ಬಿಡದಿದ್ದರೆ ಆಗಸ್ಟ್ 16ರಿಂದ ಹೋರಾಟ ತೀವ್ರ: ದಾವಣಗೆರೆಯಲ್ಲಿ ರೈತರ ಎಚ್ಚರಿಕೆ!

Share
ಭದ್ರಾ ಡ್ಯಾಂ
Share

ದಾವಣಗೆರೆ: ಭದ್ರಾ ಡ್ಯಾಂನಿಂದ ಮುಂಗಾರು ಭತ್ತದ ಬೆಳೆಗೆ ತಕ್ಷಣವೇ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಾಗೂ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತೀಯ ರೈತ ಒಕ್ಕೂಟ, ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಎದುರುಗಡೆ ಇರುವ ಸರ್ಕ್ಯೂಟ್ ಹೌಸ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ನೀರಾವರಿ ತಜ್ಞರಾದ ಪ್ರೊ. ನರಸಿಂಹಪ್ಪ ಸೇರಿದಂತೆ ಜಿಲ್ಲೆಯ ಹಲವಾರು ಪ್ರಮುಖ ರೈತ ನಾಯಕರು ಹಾಗೂ ನೂರಾರು ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರು.

ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮುಂಗಾರು ಭತ್ತದ ಬೆಳೆ ಉಳಿಸಿಕೊಳ್ಳಲು ಭದ್ರಾ ಜಲಾಶಯದಿಂದ ತಕ್ಷಣ ನೀರು ಹರಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರ ನೀರಿನ ಹಕ್ಕು ಮತ್ತು ಕೃಷಿ ಸುಸ್ಥಿರತೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ರೈತ ನಾಯಕರು ಎಚ್ಚರಿಸಿದ್ದು, ಭದ್ರಾ ಡ್ಯಾಂ ನೀರಿನ ಮಟ್ಟ ಈಗಾಗಲೇ 170.4 ಅಡಿ ತಲುಪಿದೆ. ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ. ಒಳಹರಿವು ಕೂಡ ಇದೆ. ಹಾಗಾಗಿ, ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಭದ್ರಾ ಜಲಾಶಯದ ನೀರೇ ಆಧಾರ. ದಾವಣಗೆರೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ನೀರನ್ನು ಆಧರಿಸಿ ಭತ್ತ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದಕಾರಣ ರೈತರ ಹಿತ ಗಮನದಲ್ಲಿಟ್ಟುಕೊಂಡು ಕೂಡಲೇ ಕಾಡಾ ಸಭೆ ಕರೆದು ಭದ್ರಾ ನಾಲೆಗಳಲ್ಲಿ ನೀರು ಹರಿಸಿ ರೈತರ ಬದುಕು ಹಸನಾಗುವಂತೆ ಮಾಡಬೇಕು. ಬೆಳೆಗಳನ್ನು ಬೆಳೆಯಲು ನೀರು ನೀಡಬೇಕು. ಅಡಿಕೆ ಗಿಡಗಳು ಕೆಲವೆಡೆ ಒಣಗುತ್ತಿದ್ದು, ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್. ಆರ್. ಲಿಂಗರಾಜ್, ಕಾರ್ಯದರ್ಶಿ ಎಂ. ಎಂ. ಮಂಜುನಾಥ, ರೈತ ಮುಖಂಡರಾದ ಕೊಳೇನಹಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ದಾವಣಗೆರೆ ಜಿಲ್ಲೆಯ ರೈತ ಮುಖಂಡರು, ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles