Home ಕ್ರೈಂ ನ್ಯೂಸ್ ನೀಟ್ ಪರೀಕ್ಷೆಯಲ್ಲಿ ಬಹುದೊಡ್ಡ ವಂಚನೆ: 18 ಬಯೋಮೆಟ್ರಿಕ್ ಸಿಬ್ಬಂದಿ ಸೇರಿ 30 ಜನರ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನೀಟ್ ಪರೀಕ್ಷೆಯಲ್ಲಿ ಬಹುದೊಡ್ಡ ವಂಚನೆ: 18 ಬಯೋಮೆಟ್ರಿಕ್ ಸಿಬ್ಬಂದಿ ಸೇರಿ 30 ಜನರ ಬಂಧನ!

Share
ನೀಟ್
Share

ನವದೆಹಲಿ: ನೀಟ್-ಯುಜಿ (NEET-UG) ಮರು ಪರೀಕ್ಷೆಯಲ್ಲೂ ನಕಲಿ ಅಭ್ಯರ್ಥಿಗಳ (Dummy Candidates) ದಂಡು ಪ್ರತ್ಯಕ್ಷವಾಗಿದ್ದು, ಅಭ್ಯರ್ಥಿಗಳ ಗುರುತು ಪರಿಶೀಲಿಸಬೇಕಾಗಿದ್ದ ಬಯೋಮೆಟ್ರಿಕ್ ಸಿಬ್ಬಂದಿಯೇ ಈ ಜಾಲದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಿಹಾರ ಪೊಲೀಸರು ಲಖಿಸರಾಯ್ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ದಾಳಿ ನಡೆಸಿ, 18 ಬಯೋಮೆಟ್ರಿಕ್ ಸಿಬ್ಬಂದಿ ಹಾಗೂ 9 ನಕಲಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 30 ಜನರನ್ನು ಬಂಧಿಸಿದ್ದಾರೆ.

ಏಜೆನ್ಸಿಗಳ ನೇರ ಹೊಣೆ ಹೊತ್ತುಕೊಳ್ಳದ NTA

ಈ ಘಟನೆಯ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೇಳಲಾದ ಪ್ರಶ್ನೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿರುವ ಉತ್ತರ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಬಯೋಮೆಟ್ರಿಕ್ ಪರಿಶೀಲನಾ ಸಿಬ್ಬಂದಿಯನ್ನು ಎನ್‌ಟಿಎ ನೇರವಾಗಿ ನೇಮಕ ಮಾಡಿಕೊಳ್ಳುವುದಿಲ್ಲ.

ಈ ಹೊಣೆಯನ್ನು ಕೇಂದ್ರ ಸರ್ಕಾರದ EdCIL (India) Limited ಸಂಸ್ಥೆಗೆ ನೀಡಲಾಗಿತ್ತು.

ಹೀಗಾಗಿ ತೃತೀಯ ಪಕ್ಷದ (Third-party) ಏಜೆನ್ಸಿಗಳ ಹಿನ್ನೆಲೆ ಅಥವಾ ಸಿಬ್ಬಂದಿಯ ಕ್ರೆಡೆನ್ಷಿಯಲ್‌ಗಳನ್ನು ಎನ್‌ಟಿಎ ನೇರವಾಗಿ ಪರಿಶೀಲಿಸುವುದಿಲ್ಲ ಎಂದು ತಿಳಿಸಿದೆ.

ಫೋರ್ಜರಿ ಆಧಾರ್ ಕಾರ್ಡ್ ಬಳಸಿ ವಂಚನೆ

ಬಂಧಿತ ನಕಲಿ ಅಭ್ಯರ್ಥಿಗಳಲ್ಲಿ ಎಂ.ಬಿ.ಬಿ.ಎಸ್ (MBBS) ವ್ಯಾಸಂಗ ಮಾಡುತ್ತಿರುವ ಹಿರಿಯ ವಿದ್ಯಾರ್ಥಿಗಳೇ ಇದ್ದು, ಇವರು ನಕಲಿ ದಾಖಲೆ ಹಾಗೂ ಫೋರ್ಜರಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷಾ ಕೇಂದ್ರದ ಬಯೋಮೆಟ್ರಿಕ್ ಸಿಬ್ಬಂದಿಯೇ ಈ ಜಾಲದೊಂದಿಗೆ ಕೈಜೋಡಿಸಿದ್ದರಿಂದ ನಕಲಿ ಅಭ್ಯರ್ಥಿಗಳು ಸುಲಭವಾಗಿ ಒಳಗೆ ಪ್ರವೇಶಿಸಲು ಸಾಧ್ಯವಾಗಿದೆ.

ಎನ್‍ಟಿಎ ತನಿಖೆ ಆರಂಭ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಟಿಎ ಪ್ರಸ್ತುತ ಆಂತರಿಕ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಆದರೆ, ಪರೀಕ್ಷಾ ಒಪ್ಪಂದ ನೀಡುವ ಸಮಯದಲ್ಲಿ ಯಾವುದೇ ಬಯೋಮೆಟ್ರಿಕ್ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿರಲಿಲ್ಲ ಹಾಗೂ ಪ್ರಸ್ತುತ ಯಾವುದೇ ಸಂಸ್ಥೆಯ ವಿರುದ್ಧ ದಂಡ ವಿಧಿಸಿಲ್ಲ ಎಂದು ಆರ್‌ಟಿಐ ಉತ್ತರದಲ್ಲಿ ಸ್ಪಷ್ಟಪಡಿಸಿದೆ.

Share

Leave a comment

Leave a Reply

Your email address will not be published. Required fields are marked *