Home ಕ್ರೈಂ ನ್ಯೂಸ್ JPSC-JSSC ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ: AISA ಅಧ್ಯಕ್ಷೆ ನೇಹಾ ಬೋರಾ ಮೇಲೆ ಮಸಿ ದಾಳಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

JPSC-JSSC ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ: AISA ಅಧ್ಯಕ್ಷೆ ನೇಹಾ ಬೋರಾ ಮೇಲೆ ಮಸಿ ದಾಳಿ!

Share
ಪ್ರಶ್ನೆಪತ್ರಿಕೆ
Share

ರಾಂಚಿ: ಜಾರ್ಖಂಡ್‌ನಲ್ಲಿ JPSC ಮತ್ತು JSSC CGL ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆಯುತ್ತಿರುವ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ವೇಳೆ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರ ಮೇಲೆ ವ್ಯಕ್ತಿಯೊಬ್ಬ ಮಸಿ ಎರಚಿರುವ ಘಟನೆ ಶುಕ್ರವಾರ ನಡೆದಿದೆ.

ರಾಂಚಿಯ ಬಿರ್ಸಾ ಚೌಕ್ ಬಳಿ ವಿದ್ಯಾರ್ಥಿ ಸಂಘಟನೆಗಳು ಜಾರ್ಖಂಡ್ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ. ಮಸಿ ಎರಚಿದ ವ್ಯಕ್ತಿಯು ನೇಹಾ ಬೋರಾ ಅವರನ್ನು “ದೇಶದ್ರೋಹಿ” ಹಾಗೂ ಉಮರ್ ಖಾಲಿದ್ ಬೆಂಬಲಿಗಿ ಎಂದು ಆರೋಪಿಸಿದ್ದು, ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಎಐಎಸ್‌ಎ ನಾಯಕರು ಈ ದಾಳಿಯ ಹಿಂದೆ ಆಡಳಿತಾರೂಢ ಹಾಗೂ ಆರ್‌ಎಸ್‌ಎಸ್-ಬಿಜೆಪಿ ಬೆಂಬಲಿತ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ದಾಳಿಯ ನಂತರ ಮಾತನಾಡಿದ ನೇಹಾ ಬೋರಾ, “ದೆಹಲಿ ಪ್ರತಿಭಟನೆ ವೇಳೆ ಲಾಠಿಚಾರ್ಜ್ ಹಾಗೂ ಪೆಲೆಟ್ ಗನ್ ಎದುರಿಸಿದ ನನಗೆ ಈ ಮಸಿ ದಾಳಿ ಬೆದರಿಕೆ ಅಲ್ಲ. ಇಂತಹ ಕೃತ್ಯಗಳಿಂದ ದೇಶದ ವಿದ್ಯಾರ್ಥಿಗಳ ಆಕ್ರೋಶವನ್ನು ಹತೋಟಿಗೆ ತರಲು ಸಾಧ್ಯವಿಲ್ಲ. ನಾವು ಭವಿಷ್ಯವನ್ನು ಇದೇ ಮಸಿಯಿಂದ ಬರೆಯುತ್ತೇವೆ” ಎಂದು ಸವಾಲು ಹಾಕಿದ್ದಾರೆ.

JPSC-JSSC ಪರೀಕ್ಷೆಗಳನ್ನು ತಕ್ಷಣವೇ ರದ್ದುಗೊಳಿಸಿ, ಮರುಪರೀಕ್ಷೆ ವೇಳಾಪಟ್ಟಿ ಪ್ರಕಟಿಸಬೇಕು ಹಾಗೂ ಪರೀಕ್ಷಾ ಅಕ್ರಮ ನಡೆಸಿದ ಖಾಸಗಿ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಕಳೆದ 14 ದಿನಗಳಿಂದ ವಿದ್ಯಾರ್ಥಿಗಳು ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಧರಣಿ ನಡೆಸುತ್ತಿದ್ದಾರೆ. ಪ್ರಸ್ತುತ ಆರು ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ

Share

Leave a comment

Leave a Reply

Your email address will not be published. Required fields are marked *

Related Articles