Home ಉದ್ಯೋಗ ವಾರ್ತೆ ಬೆಂಗ‌ಳೂರಿನ CSIR-NAL ಸಂಸ್ಥೆಯಲ್ಲಿ 89 ಹುದ್ದೆಗಳ ಭರ್ತಿ: ಆಗಸ್ಟ್ 10 ರಿಂದ ವಾಕ್-ಇನ್ ಇಂಟರ್ವ್ಯೂ ಆರಂಭ
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ಬೆಂಗ‌ಳೂರಿನ CSIR-NAL ಸಂಸ್ಥೆಯಲ್ಲಿ 89 ಹುದ್ದೆಗಳ ಭರ್ತಿ: ಆಗಸ್ಟ್ 10 ರಿಂದ ವಾಕ್-ಇನ್ ಇಂಟರ್ವ್ಯೂ ಆರಂಭ

Share
ಹುದ್ದೆ
Share

ಬೆಂಗಳೂರು: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಪ್ರಸಿದ್ಧ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ – ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್ (CSIR-NAL) 2026ನೇ ಸಾಲಿನ ವಿವಿಧ ಪ್ರಾಜೆಕ್ಟ್ ಸ್ಟಾಫ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Advt No. 13/2026/PS) ಹೊರಡಿಸಿದೆ.

ಒಟ್ಟು 89 ಪ್ರೊಜೆಕ್ಟ್ ಅಸಿಸ್ಟೆಂಟ್, ಪ್ರೊಜೆಕ್ಟ್ ಅಸೋಸಿಯೇಟ್ ಸೇರಿದಂತೆ ಹಲವು ಖಾಲಿ ಹುದ್ದೆಗಳಿಗೆ ನೇರ ಸಂದರ್ಶನದ (Walk-in-Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ:

ಪ್ರೊಜೆಕ್ಟ್ ಅಸಿಸ್ಟೆಂಟ್-I (PA-I): ₹18,000 + HRA

ಪ್ರೊಜೆಕ್ಟ್ ಅಸಿಸ್ಟೆಂಟ್-II (PA-II): ₹20,000 + HRA

ಪ್ರೊಜೆಕ್ಟ್ ಅಸೋಸಿಯೇಟ್-I (PAT-I): ₹25,000 – ₹31,000 + HRA

ಪ್ರೊಜೆಕ್ಟ್ ಅಸೋಸಿಯೇಟ್-II (PAT-II): ₹28,000 – ₹35,000 + HRA

ಸೀನಿಯರ್ PAT: ₹42,000 + HRA

ಶೈಕ್ಷಣಿಕ ಅರ್ಹತೆ:

ಸಂಬಂಧಪಟ್ಟ ವಿಭಾಗಗಳಲ್ಲಿ SSC/ITI (ಫಿಟ್ಟರ್, ಟರ್ನರ್, ಮಷಿನಿಸ್ಟ್), ಇಂಜಿನಿಯರಿಂಗ್ ಡಿಪ್ಲೊಮಾ, B.Sc, B.E/B.Tech, M.E/M.Tech ಅಥವಾ M.Sc ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ.

ವಯೋಮಿತಿ:

ಎಲ್ಲಾ ಹುದ್ದೆಗಳಿಗೂ ಗರಿಷ್ಠ ವಯೋಮಿತಿ 35 ವರ್ಷಗಳು. ನಿಯಮಾನುಸಾರ SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಲಿಕೆ ಇರಲಿದೆ.

ಸಂದರ್ಶನದ ವಿವರ:

ದಿನಾಂಕ: 2026ರ ಆಗಸ್ಟ್ 10 ರಿಂದ ಆಗಸ್ಟ್ 25 ರವರೆಗೆ (ವಿಷಯ/ವಿಭಾಗಕ್ಕೆ ಅನುಗುಣವಾಗಿ ಪ್ರತ್ಯೇಕ ದಿನಾಂಕಗಳು).

ನೋಂದಣಿ ಸಮಯ: ಬೆಳಿಗ್ಗೆ 9:00 ರಿಂದ 9:45 ರವರೆಗೆ ಮಾತ್ರ.

ಸ್ಥಳ: RAB ಮೀಟಿಂಗ್ ಕಾಂಪ್ಲೆಕ್ಸ್, CSIR-NAL (SBI NAL ಶಾಖೆಯ ಹತ್ತಿರ), ಕೋಡಿಹಳ್ಳಿ, ಬೆಂಗಳೂರು – 560017.

ಯಾವುದೇ ಆನ್‌ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ nal.res.in ನಿಂದ ಡೌನ್‌ಲೋಡ್ ಮಾಡಿಕೊಂಡು, ಮೂಲ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು.
Share

Leave a comment

Leave a Reply

Your email address will not be published. Required fields are marked *