ಮಹಾರಾಷ್ಟ್ರ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಬಿಪಿಒ ಯೂನಿಟ್ನ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯ ಆರೋಪಿ ನಿಫಾ ಖಾನ್ಗೆ ಆಶ್ರಯ ನೀಡಿದ್ದ ಎಐಎಂಐಎಂ (AIMIM) ಕಾರ್ಪೊರೇಟರ್ ಮಟೀನ್ ಪಟೇಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಲಯ ನೀಡಿದ್ದ ಸಮನ್ಸ್ ಹಾಗೂ ವಾರಂಟ್ಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ನಾಸಿಕ್ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ (ಔರಂಗಾಬಾದ್) ಮಟೀನ್ ಪಟೇಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ, ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಮುನ್ಸಿಪಲ್ ಕಾರ್ಪೊರೇಷನ್ ಪಟೇಲ್ ಅವರ ಅಕ್ರಮ ನಿವಾಸ ಹಾಗೂ ಕಚೇರಿಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿತ್ತು.
ಪ್ರಕರಣದ ಹಿನ್ನೆಲೆ ಹಾಗೂ ಸದ್ಯದ ಬೆಳವಣಿಗೆ:
ಮಾರ್ಚ್ 2026 ಪ್ರಕರಣ: ನಾಸಿಕ್ನ ಟಿಸಿಎಸ್ ಬಿಪಿಒ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ಶೋಷಣೆ, ಬೆದರಿಕೆ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ನಿಫಾ ಖಾನ್ಗೆ ಜಾಮೀನು: ಪ್ರಕರಣದಲ್ಲಿ ಬಂಧಿತಳಾಗಿದ್ದ ಕಿರಿಯ ಉದ್ಯೋಗಿ ನಿಫಾ ಖಾನ್ ಐದು ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ, ಮಗುವಿನ ಹಿತದೃಷ್ಟಿಯಿಂದ ಜುಲೈನಲ್ಲಿ ಹೆಚ್ಚುವರಿ ಸತ್ರ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಇತರ ಆರೋಪಿಗಳಿಗೆ ಜಾಮೀನು: ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣೆ ಪಟ್ಟಿ (Chargesheet) ಸಲ್ಲಿಕೆಯಾಗಿದ್ದು, ತನಿಖೆ ಬಹುತೇಕ ಪೂರ್ಣಗೊಂಡಿರುವುದರಿಂದ ಜುಲೈ 30 ರಂದು ರಜಾ ರಫೀಕ್ ಮೆಮನ್, ಆಸಿಫ್ ಅಫ್ತಾಬ್ ಅನ್ಸಾರಿ ಸೇರಿದಂತೆ ಐವರು ಇತರ ಆರೋಪಿಗಳಿಗೂ ಕೋರ್ಟ್ ಜಾಮೀನು ನೀಡಿದೆ.
ಪ್ರಸ್ತುತ ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಎಫ್ಐಆರ್ಗಳು ದಾಖಲಾಗಿದ್ದು, ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸುತ್ತಿದೆ. ಘಟನೆಯಲ್ಲಿ ಭಾಗಿಯಾದ ಉದ್ಯೋಗಿಗಳನ್ನು ಟಿಸಿಎಸ್ ಸಂಸ್ಥೆಯು ಅಮಾನತುಗೊಳಿಸಿದೆ.
- AIMIM corporator Matin Patel arrested
- Maharashtra Crime News
- Matin Patel Chhatrapati Sambhajinagar
- Nashik TCS harassment news
- Nida Khan TCS
- SIT TCS investigation
- TCS BPO conversion case
- TCS Conversion Case
- TCS conversion case Kannada news
- ಎಐಎಂಐಎಂ ಕಾರ್ಪೊರೇಟರ್
- ಎಸ್ಐಟಿ ತನಿಖೆ
- ಟಿಸಿಎಸ್ ಮತಾಂತರ ಪ್ರಕರಣ
- ಧಾರ್ಮಿಕ ಮತಾಂತರ
- ನಾಸಿಕ್ ಟಿಸಿಎಸ್ ಸುದ್ದಿ
- ನಿಫಾ ಖಾನ್
- ಮಟೀನ್ ಪಟೇಲ್ ಬಂಧನ
- ಮಹಾರಾಷ್ಟ್ರ ಕ್ರೈಮ್ ನ್ಯೂಸ್.
- ಲೈಂಗಿಕ ಕಿರುಕುಳ ಪ್ರಕರಣ





Leave a comment