Home ದಾವಣಗೆರೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಡಿಕೆ ಶಿವಕುಮಾರ್ ಸಂಪುಟ ಸೇರಿದ ಎಸ್. ಎಸ್. ಮಲ್ಲಿಕಾರ್ಜುನ್ ಜೀವನಗಾಥೆಯ ಫುಲ್ ಡೀಟೈಲ್ಸ್!
ದಾವಣಗೆರೆನವದೆಹಲಿಬೆಂಗಳೂರು

ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಡಿಕೆ ಶಿವಕುಮಾರ್ ಸಂಪುಟ ಸೇರಿದ ಎಸ್. ಎಸ್. ಮಲ್ಲಿಕಾರ್ಜುನ್ ಜೀವನಗಾಥೆಯ ಫುಲ್ ಡೀಟೈಲ್ಸ್!

Share
ದೇವರ
Share

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂಪುಟ ಸೇರಿದ್ದಾರೆ. ಕೊನೆ ಕ್ಷಣದಲ್ಲಿ ಬಂದ ಸಚಿವ ಸ್ಥಾನ ಹುದ್ದೆಯನ್ನು ಅಲಂಕರಿಸಿದ್ದಾರೆ. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಶಾಮನೂರು ಶಿವಶಂಕರಪ್ಪರ ಪುತ್ರ. 

ಸಂಸದೆ, ಪತ್ನಿ ಡಾ. ಮಲ್ಲಿಕಾರ್ಜುನ್, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಪುತ್ರ. ಹೆಂಡತಿ ಸಂಸದೆಯಾಗಿದ್ದರೆ, ಪುತ್ರ ಶಾಸಕರಾಗಿ ಜನಪರ ಕಾರ್ಯ ಮಾಡುತ್ತಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಿದ್ದರಾಮಯ್ಯರ ಸಚಿವ ಸಂಪುಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಎಸ್. ಎಸ್. ಮಲ್ಲಿಕಾರ್ಜುನ್ ಅವರ ಜೀವನಗಾಥೆಯ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ.

ಎಸ್.ಎಸ್. ಮಲ್ಲಿಕಾರ್ಜುನ್,  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು

ವೈಯಕ್ತಿಕವಿವರ

ಹೆಸರು: ಎಸ್.ಎಸ್.ಮಲ್ಲಿಕಾರ್ಜುನ್

ತಂದೆಯ ಹೆಸರು :ಡಾ. ಶಾಮನೂರು ಶಿವಶಂಕರಪ್ಪ

ಹುಟ್ಟಿದ ದಿನಾಂಕ: 22-09-1967

ಕುಟುಂಬದ ಸದಸ್ಯರು

ಪತ್ನಿ: ಪ್ರಭಾ ಮಲ್ಲಿಕಾರ್ಜುನ್

ಮಕ್ಕಳು: ಸಮರ್ಥ್ ಶಾಮನೂರು, ಶಿವ ಶಾಮನೂರು, ಡಾ. ಶ್ರೇಷ್ಠಾ.ಎಸ್.ಎಂ.

ಉದ್ಯೋಗ: ಸಾಧನೆ: ಸಾರ್ವಜನಿಕ ಸೇವೆಗಳು:-

1. ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರು- 1993-96 ರವರೆಗೆ

2 ಕುವೆಂಪುವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು- 1996-99

3 ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ 1997

4. ವಿಧಾನಸಭಾ ಸದಸ್ಯರು. ದಾವಣಗೆರೆ ಕ್ಷೇತ್ರ (ಉಪ-ಚುನಾವಣೆ) ಅತ್ಯಧಿಕ ಮತಗಳಿಂದ- 1998.

5. ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು- 1999.

6. ವಿಧಾನಸಭಾಸದಸ್ಯರು, ದಾವಣಗೆರೆ ಕ್ಷೇತ್ರ- 1999

7. ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರು-1999-2004

8. ಕರ್ನಾಟಕ ರಾಜ್ಯ ಪುಟ್ಬಾಲ್ ಅಸೋಷಿಯೇಷನ್ ಅಧ್ಯಕ್ಷರು- 2000.

9. ಕರ್ನಾಟಕರಾಜ್ಯಅಮೇಚೂರ್ ಕಬ್ಬಡ್ಡಿ ಸಂಸ್ಥೆಅಧ್ಯಕ್ಷರು,- 2000.

10. ಕರ್ನಾಟಕ ಸರ್ಕಾರದಲ್ಲಿ ಯುವಜನ ಸೇವೆ ಹಾಗೂಕ್ರೀಡಾ ಸಚಿವರಾಗಿ- 1999-2004

11. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ- 2004-2005

12. ವ್ಯವಸ್ಥಾಪಕ ನಿರ್ದೇಶಕರು, ಇಂಡಿಯನ್ಕೇನ್ಪವರ್ಲಿ, ಮುಧೋಳ್ – 2005

13. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ 2009-10

14 ವಿಧಾನಸಭಾ ಸದಸ್ಯರು, ದಾವಣಗೆರೆ ಉತ್ತರ ಕ್ಷೇತ್ರ- 2013

15 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ- 2014-15

16 ಎಪಿಎಂಸಿ, ತೋಟಗಾರಿಕೆ ಹಾಗೂ ಜಿಲ್ಲಾಉಸ್ತುವಾರಿ ಸಚಿವರು- 2016-2018

17 ವಿಧಾನಸಭಾ ಸದಸ್ಯರು, ದಾವಣಗೆರೆ ಉತ್ತರಕ್ಷೇತ್ರ- 2023

18 ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಸಚಿವರ ಹುದ್ದೆಯೊಂದಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು- 2023

19 ಜಂಟಿ ಕಾರ್ಯದರ್ಶಿಗಳು, ಬಾಪೂಜಿ ವಿದ್ಯಾಸಂಸ್ಥೆ, ದಾವಣಗೆರೆ

20 ಉಪಾಧ್ಯಕ್ಷರು, ಬಾಪೂಜಿ ಸಹಕಾರಿ ಬ್ಯಾಂಕ್, ದಾವಣಗೆರೆ

21 ಗೌರವ ಅಧ್ಯಕ್ಷರಾಗಿ ಹಲವಾರು ಸಂಘ-ಸಂಸ್ಥೆಗಳು ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ.

ರಾಜಕೀಯದ ವಿವರ:-

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಿ. ಕಾಂ., ಪದವೀಧರರಾಗಿದ್ದು. ತಮ್ಮ ತಂದೆಯವರ ಮಾರ್ಗದರ್ಶನದಂತೆ ವಿದ್ಯಾಭ್ಯಾಸದ ನಂತರ ವ್ಯಾಪಾರದಲ್ಲಿ ತಲ್ಲೀನರಾದರು. ಅದರ ಜೊತೆಯಲ್ಲಿಯೇ ಪ್ರಥಮವಾಗಿ ಸ್ವ-ಸಾಮರ್ಥ್ಯದಿಂದ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಾರಂಭ ಮಾಡಿ 1991ನೇ ಸಾಲಿನಲ್ಲಿ ಡಿಸ್ಟಿಲರೀ(ಬಾಟ್ಲಿಂಗ್) ಘಟಕವನ್ನುಪ್ರಾರಂಭಿಸಿದರು. ನಂತರ ವಿವಿಧ ದೇಶಗಳಿಗೆ ಭೇಟಿ ನೀಡಿ ಡಿಸ್ಟಿಲರಿಗಳ ಬಗ್ಗೆಅಧ್ಯಯನ ಮಾಡಿ 2004ನೇ ಸಾಲಿನಲ್ಲಿ ಸದರಿ ಡಿಸ್ಟಿಲರೀಯನ್ನು ಉನ್ನತೀಕರಿಸಿದರು.

ಪ್ರಾಥಮಿಕ ಘಟಕವನ್ನುಆರಂಭಿಸಿ ಸ್ಪಿರೀಟ್ ಉತ್ಪಾದಿಸಲು ಪ್ರಾರಂಭಿಸಿದರು. ಇನ್ನೂ ಹೆಚ್ಚಿನ ಅಧ್ಯಯನಗಳನ್ನು ದೇಶ- ವಿದೇಶಗಳಲ್ಲಿ ತಿಳಿದುಕೊಂಡು ಪೆಟ್ರೋಲಿನ ಜೊತೆಗೆ ಶೇ. 5ರ ಪ್ರಮಾಣದಲ್ಲಿ ಎಥನಾಲನ್ನು ಮಿಶ್ರಣ ಮಾಡುವ ಸಲುವಾಗಿ ತಮ್ಮ ಡಿಸ್ಟಿಲರಿ ಘಟಕದಲ್ಲಿ ಏಥನಾಲ್ ಉತ್ಪಾದನೆಯನ್ನು ಪ್ರಾರಂಭಿಸಿ, ವಿವಿಧ ತೈಲ ಕಂಪನಿಗಳಿಗೆ ಸರಬರಾಜು ಮಾಡಲು ಆರಂಭಿಸಿದರು.

ಸಾರ್ವಜನಿಕ ಉದ್ಯಮದಲ್ಲಿ ನಷ್ಟವನ್ನುಅನುಭವಿಸುತ್ತಿದ್ದ ದಾವಣಗೆರೆ ಸಕ್ಕರೆ ಕಾರ್ಖಾನೆಯನ್ನು 1996 ನೇ ಸಾಲಿನಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡು ಶಿಥಿಲಾವಸ್ಥೆಯಲ್ಲಿದ್ದ ಕಂಪನಿಯನ್ನು ಹಗಲು-ಇರುಳು ಎನ್ನದೇ ವಿವಿಧ ತಜ್ಞ ನೌಕರರ ಜೊತೆಯಲ್ಲಿ ಕಾರ್ಯನಿರ್ವಹಿಸಿ ಕಂಪನಿಯನ್ನು ಉನ್ನತೀಕರಿಸಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾದರು.

ನಂತರ ದುಗ್ಗಾವತಿಯಲ್ಲಿ ಶಾಮನೂರು ಶುಗರ್ಸ್ ಅನ್ನುಆರಂಭಿಸಲು ಪ್ರಮುಖ ಪಾತ್ರ ವಹಿಸಿದರು. ತದನಂತರ ಸಕ್ಕರೆ ಉದ್ಯಮವನ್ನು ಇನ್ನೂ ಉನ್ನತೀಕರಿಸಲು ದಾವಣಗೆರೆಯಿಂದ ಸುಮಾರು 300ರಿಂದ 400 ಕಿ.ಮೀ. ದೂರದಲ್ಲಿರುವ ಮುಧೋಳ ತಾಲೂಕಿನ ಉತ್ತೂರು ಗ್ರಾಮದಲ್ಲಿ ಅತ್ಯಾಧುನಿಕ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಯೋಚಿಸಿ ಹೆಚ್ಚಿನ ಅಧ್ಯಯನಕ್ಕಾಗಿ ಬ್ರೆಜಿಲ್ ದೇಶದ ಪ್ರವಾಸ ಕೈಗೊಂಡು ಅಲ್ಲಿನ ತಾಂತ್ರಿಕತೆಯನ್ನು ತಿಳಿದುಕೊಂಡು ಬಂದು ಮುಧೋಳನಲ್ಲಿ 5000ಮೆ.ಟನ್ ಸಾಮರ್ಥ್ಯದ ಸಕ್ಕರೆ ಕಾರ್ಖಾನೆಯನ್ನು ಸ್ವತಃ ತಾವೇ ತಜ್ಞರುಗಳ ಸಹಾಯದಿಂದ ಮೇಲುಸ್ತುವಾರಿ ವಹಿಸಿ ಯಶಸ್ವಿಯಾಗಿ ಕಂಪನಿಯನ್ನು ಪ್ರಾರಂಭಿಸಿದರು. ಸಕ್ಕರೆ ಉತ್ಪಾದನೆ ಜೊತೆಗೆ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿದರು. ಈಗ ಸದರಿ ಸಕ್ಕರೆ ಕಾರ್ಖಾನೆಯ ಕಬ್ಬು ಅರಿಯುವ ಸಾಮರ್ಥ್ಯವನ್ನು 24 ಸಾವಿರ ಮೆ.ಟನ್ಗಳಿಗೆ ಹೆಚ್ಚಿಸಿದ್ದು, ವಿದ್ಯುತ್ ಉತ್ಪಾದನೆಯನ್ನೂ ಸಹ 83 ಕಿ.ವ್ಯಾಗೆ ಹೆಚ್ಚಿಸಿದ್ದಾರೆ.

ಸಕ್ಕರೆ ಉದ್ಯಮದ ಜೊತೆಗೆ ಅಕ್ಕಿ, ‘ತೊಗರಿಬೇಳೆ ಇನ್ನಿತರ ಉದ್ಯಮಗಳನ್ನು ನಡೆಸುತ್ತಿರುವ ಅವರು ಇತ್ತೀಚಿನ ಬದಲಾದ ತಾಂತ್ರಿಕತೆಯನ್ನು ಅಧ್ಯಯನ ಮಾಡಲು ಚೀನಾ ಮತ್ತಿತರ ದೇಶಗಳಿಗೆ ಭೇಟಿ ಕೊಟ್ಟು ಬದಲಾದ ತಾಂತ್ರಿಕತೆಯನ್ನು ತಿಳಿದುಕೊಂಡುಬಂದು ನೂತನ ಮಾದರಿಯ ಭವ್ಯವಾದ ಅಕ್ಕಿಗಿರಣಿಯನ್ನು ತಮ್ಮ ಮೇಲುಸ್ತುವಾರಿಯಲ್ಲಿಯೇ ಪಾರಂಭಿಸಿದ್ದಾರೆ. ಹೊಸದಾಗಿ ಉದ್ಯಮಗಳನ್ನು ಪ್ರಾರಂಭಿಸಬೇಕೆಂದರೆ ತುಂಬಾ ಉತ್ಸುಕತೆ ಇರುತ್ತದೆ. ಮಲ್ಲಿಕಾರ್ಜುನ್ನ್ಅ ಅವರು ಉದ್ಯಮ ಅಷ್ಟೇ ಅಲ್ಲದೆ, ವಿದ್ಯಾಕ್ಷೇತ್ರ, ರಾಜಕೀಯ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಾಕಷ್ಟು ತೊಡಗಿಸಿಕೊಂಡಿರುತ್ತಾರೆ. ಜೊತೆಗೆಎಸ್ ಎಸ್ ಕೇರ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಗಳಾಗಿ ಕ್ಷೇತ್ರದಲ್ಲಿ ಜನರ ಆರೋಗ್ಯ ಸೇವೆ ಮಾಡುತ್ತಾ ಬಂದಿದ್ದಾರೆ.

ಕರ್ನಾಟಕ ರಾಜ್ಯದ ವಿಧಾನಸಭೆಗೆ 1998ನೇಸಾಲಿನಲ್ಲಿ ಆಯ್ಕೆಯಾಗಿ 3 ಬಾರಿವಿಧಾನಸಭಾ ಸದಸ್ಯರಾಗಿರುತ್ತಾರೆ. 1999 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸೇವೆ ಸಲ್ಲಿಸಿರುತ್ತಾರೆ. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿ ಕ್ರೀಡೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ ರಾಜ್ಯದ ಯುವಕರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ಮಾಡಿರುವುದಲ್ಲದೇ, ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗಳು, ಬಾಸ್ಕೆಟ್ ಬಾಲ್, ಟೆನಿಸ್, ವಾಲಿಬಾಲ್ ಟೂರ್ನಿಗಳನ್ನು ನಡೆಸಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿರುತ್ತಾರೆ.

ಎಸ್.ಎಸ್.ಮಲ್ಲಿಕಾರ್ಜುನ್ರವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದು, ಆ ಸಂದರ್ಭದಲ್ಲಿ ದಾವಣಗೆರೆ ಜನತೆಗೆ ಬಹುಜನೋಪಯೋಗಿ ಕಾರ್ಯಗಳನ್ನು ಮಾಡಿರುತ್ತಾರೆ. ಅಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕುಡಿಯುವ ನೀರಿನ ಹಾಹಾಕಾರವು ಬಹಳ ಇದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಇದನ್ನು ಮನಗಂಡು ಯಾರೂ ನಿರೀಕ್ಷಿಸದೇ ಇದ್ದ ಮತ್ತು ತುಂಬಿಕೊಂಡು ಗಿಡ-ಗಂಟೆಗಳು ಬೆಳೆದಿದ್ದ ಕುಂದುವಾಡ ಕೆರೆಯನ್ನು ಪತ್ತೆ ಮಾಡಿ ನಗರಸಭೆಯ ಅಭಿಯಂತರರೊಂದಿಗೆ ಸ್ವತ ತಾವೇ ಕುಂದುವಾಡಕೆರೆಯ ಜಾಗವನ್ನು ಪರಿಶೀಲಿಸಿ ನೂತನವಾಗಿ ಕೆರೆಯನ್ನು ನಿರ್ಮಿಸಲು ಅಂದಾಜುವೆಚ್ಚಗಳನ್ನು ಸಿದ್ದಪಡಿಸಿಕೊಂಡು ಅಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣಾರವರಿಂದ ಕೊಟ್ಟಾಂತರ ಹಣವನ್ನು ತಂದು ಕುಂದುವಾಡ ಕೆರೆಯನ್ನು ಪುನರ್ನಿರ್ಮಿಸಿ ಗುರುತ್ವಾಕರ್ಷಣಾ ಬಲದಿಂದ ಭದ್ರಾ ನಾಲೆಯಿಂದ ನೀರನ್ನು ಕುಂದುವಾಡ ಕೆರೆಗೆ ಹರಿಸಿ ದಾವಣಗೆರೆ ಜನರ ನೀರಿನ ಧಗೆಯನ್ನು ನಿವಾರಿಸಿ ದಾವಣಗೆರೆಯಲ್ಲಿಇತಿಹಾಸ ನಿರ್ಮಿಸಿದರು.

ಅಂದಿನ ಸಂದರ್ಭದಲ್ಲಿ ಹಮಾಲರು ಕೂಲಿ, ಕಾರ್ಮಿಕರು, ಇನ್ನೂ ಹಲವಾರು ಬಡವರ್ಗದವರು ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಗೆ ಹಣ ಕಟ್ಟಲಾಗದೆ ಜೀವನ ಮಾಡಲು ಪರದಾಡುತ್ತಿದ್ದರು. ಇದನ್ನು ಮನಗಂಡು ದಾವಣಗೆರೆಯ ವಿವಿಧ ಭಾಗಗಳಲ್ಲಿ ರೈತರುಗಳನ್ನು ಮನವೊಲಿಸಿ ಮತ್ತು ರೈತರುಗಳಿಂದ ಬಂದ ಹಲವಾರು ಪ್ರತಿರೋಧಗಳನ್ನು ತಮ್ಮ ಬುದ್ದಿಮತ್ತೆಯಿಂದ ಸುಲಭವಾಗಿ ಬಗೆಹರಿಸಿ ರೈತರ ಜಮೀನುಗಳನ್ನು ಕೊಂಡು ಬಡವರಿಗೆ ಒಟ್ಟು 15000 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿರುತ್ತಾರೆ.

ಶಾಸಕರಾಗುವುದಕ್ಕಿಂತ ಮುಂಚೆ ದಾವಣಗೆರೆ ನಗರದಲ್ಲಿ ಸುಸಜ್ಜಿತವಾದ ರಸ್ತೆಗಳಿಲ್ಲದೆ ಜನರು ಒಡಾಡಲು ಕಷ್ಟಪಡುತ್ತಿದ್ದರು. ಇದನ್ನು ಮನಗಂಡು ತಜ್ಞರುಗಳೊಂದಿಗೆಚರ್ಚಿಸಿ, ಡಾಂಬಾರ್ ರಸ್ತೆಗಳನ್ನು ಮಾಡುವುದರಿಂದ ಪ್ರತಿವರ್ಷವೂ ರಸ್ತೆಗಳು ಹಾಳಾಗಿ ಮತ್ತೆ- ಮತ್ತೆ ದುರಸ್ತಿ ಮಾಡಬೇಕಾಗುತ್ತದೆ. ಇದರ ಬದಲು ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡುವುದೇ ಸೂಕ್ತವೆಂದು ದಾವಣಗೆರೆ ನಗರದಲ್ಲಿ ಸುಂದರವಾದ ಸಿಮೆಂಟ್ ರಸ್ತೆಗಳನ್ನು ವಿವಿಧ ಮುಖ್ಯ ರಸ್ತೆಗಳಲ್ಲಿ ಮತ್ತು ಅತೀ ಹಿಂದುಳಿದ ಪ್ರದೇಶಗಳಲ್ಲಿ ನಿರ್ಮಿಸಿ ಜನಮೆಚ್ಚುಗೆಗೆ ಪಾತ್ರರಾದರು. 2004 ಮತ್ತು 2009ನೇಸಾಲಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಪಕ್ಷ ನಿಷ್ಠೆ: 

ಶಾಮನೂರು ಶಿವಶಂಕರಪ್ಪನವರನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷದ ಖಾಯಂ ಖಜಾಂಚಿ ಎಂದೇ ಕರೆಯುವುದುಂಟು. ಏಕೆಂದರೆ ಶಾಮನೂರು ಮನೆತನದವರು ಎಂಥಹ ಸಂದರ್ಭದಲ್ಲಿಯೂ ಸಹ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದ ಕಡೆ ತಿರುಗಿಯೂ ನೋಡಿದವರಲ್ಲ. ಕರ್ನಾಟಕ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಪ್ರಮುಖ ಲಿಂಗಾಯಿತ ಮುಖಂಡರುಗಳಿಗೆ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ನೀಡಿ ಬಿ.ಜೆ.ಪಿ.ಗೆ ಪಕ್ಷಾಂತರ ಮಾಡಿಸಿಕೊಂಡರೂ ಆ ಸಂದರ್ಭದಲ್ಲಿಯೇ ಡಾ. ಶಾಮನೂರು ಶಿವಶಂಕರಪ್ಪನವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿಯೂ ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನುಸಂಸಸ್ ಸದಸ್ಯರನ್ನಾಗಿ ಮಾಡುವುದಾಗಿ ಆಸೆ ತೋರಿಸಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ. ಸೇರುವಂತೆ ಹಲವಾರು ಮುಖಂಡರು ಮತ್ತು ಮಠಾಧೀಶರುಗಳಿಂದ ಒತ್ತಡ ಹಾಕಿದರೂ ಸಹ ಯಾವುದೇ ಆಸೆ-ಆಕಾಂಕ್ಷೆಗಳಿಗೆ ಒಳಗಾಗದೆ ನಮಗೆ ಅಧಿಕಾರ ಮುಖ್ಯವಲ್ಲ ದೇಶದ ಅಭಿವೃದ್ಧಿ ಮುಖ್ಯ. ದೇಶದಲ್ಲಿ ಸ್ಥಿರ ಸರ್ಕಾರಗಳು ಇರಬೇಕಾದರೆ ಅದು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರವೆಂದು ಹೇಳಿ ಪಕ್ಷಾಂತರ ಮಾಡದೇ ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದು ಪಕ್ಷ ನಿಷ್ಠೆ ತೋರಿದರು.

ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪೂರಾ ನೆಲಕಚ್ಚಿ ಅಂದಿನ ಜನತಾದಳ ಸರ್ಕಾರಗಳು ಇದ್ದಾಗ ಜಿಲ್ಲೆಯು ಜನತಾದಳದ ಪಾಲಾಗಿತ್ತು. ನಂತರ ಶಾಮನೂರು ಶಿವಶಂಕರಪ್ಪನವರಿಗೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ನಂತರ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ದಿನದಿಂದ ದಿನಕ್ಕೆ ವರ್ಚಸ್ ಗಳಿಸುತ್ತಾ ಗ್ರಾಮ ಪಂಚಾಯ್ತಿಗಳು, ತಾಲ್ಲೂಕು ಪಂಚಾಯ್ತಿಗಳು, ಜಿಲ್ಲಾ ಪಂಚಾಯ್ತಿ, ಪುರಸಭೆ, ನಗರಸಭೆಗಳಲ್ಲಿ ಕಾಂಗ್ರೆಸ್ ಪಕ್ಷವು ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು.

ದಾವಣಗೆರೆ 2013ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಎಸ್. ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 7ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ವಿಶೇಷವೆಂದರೆ, ಎಸ್.ಎ. ರವೀಂದ್ರನಾಥರವರನ್ನು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅತ್ಯಧಿಕ ಮತಗಳಿಂದ ಸೋಲಿಸಿದ್ದರು.

2016ರಲ್ಲಿ ಎಪಿಎಂಸಿ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾಸ ಚಿವರಾಗಿ ಅತ್ಯುತ್ತಮ ಸೇವೆಸಲ್ಲಿಸಿ  ಏಷ್ಯಾದಲ್ಲಿ ಅತಿ ದೊಡ್ಡದಾದ ಸುಂದರ ಗ್ಲಾಸ್ ಹೌಸ್ ನಿರ್ಮಾಣ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಲು ಮತ್ತು ಜಲಸಿರಿಯಂತಹ ಮಹತ್ವದ ಯೋಜನೆಗಳನ್ನು ಜಾರಿ ತಂದ ಕೀರ್ತಿಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ.

2023ರ ಮೇ.10ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರು. ಸಿದ್ದರಾಮಯ್ಯರವರ ಸಚಿವ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿ ದಿನಾಂಕ: 27-5-2023ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರ ಸರ್ಕಾರ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ದಿನಾಂಕ: 9-6-2023 ರಂದುನೇಮಿಸಿತು. ಗಣಿಮತ್ತುಭೂವಿಜ್ಞಾನ, ತೋಟಗಾರಿಕೆ ಸಚಿವರಾಗಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಜ್ಯಹಾಗೂ ಕ್ಷೇತ್ರದಲ್ಲಿ ಯಶಸ್ವಿಯಾಗಿಕಾರ್ಯನಿರ್ವಹಣೆಮಾಡಿದ್ದಾರೆ. ಈಗ ಮತ್ತೊಮ್ಮೆ ಸಚಿವರಾಗಿದ್ದು, ಮತ್ತಷ್ಟು ಅಭಿವೃದ್ಧಿ ದಾವಣಗೆರೆ ಆಗಲಿದೆ ಎಂಬ ನಂಬಿಕೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರದ್ದು.

Share

Leave a comment

Leave a Reply

Your email address will not be published. Required fields are marked *