ಬೆಂಗಳೂರು: ರಾಜ್ಯಾದ್ಯಂತ ಆಗಸ್ಟ್ 2 ರಂದು ಯಶಸ್ವಿಯಾಗಿ ನಡೆದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (CPC) ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಯ OMR ಹಾಗೂ ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆಗಳಿಗೆ (Serial Numbers) ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೊಂದಲಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಸ್ಪಷ್ಟನೆ ನೀಡಿದೆ.
ಪರೀಕ್ಷಾ ಸಮಯದಲ್ಲಿ ವಿತರಿಸಲಾದ ಓಎಂಆರ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆಗಳು ಒಂದೇ ಆಗಿಲ್ಲವೆಂದು ಕೆಲವು ಅಭ್ಯರ್ಥಿಗಳು ಗೊಂದಲ ಸೃಷ್ಟಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಅಭ್ಯರ್ಥಿಗಳನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ.
ಕೆಇಎ ನೀಡಿದ ಮುಖ್ಯ ಸ್ಪಷ್ಟೀಕರಣಗಳು:
ಕ್ರಮಸಂಖ್ಯೆ ಒಂದೇ ಇರಬೇಕಿಲ್ಲ: ಓಎಂಆರ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮಸಂಖ್ಯೆ ಒಂದೇ ಇರಬೇಕು ಅಥವಾ ಇರುತ್ತದೆ ಎಂದು KEA ಯಾವುದೇ ಸೂಚನೆ ಅಥವಾ ಪ್ರಕಟಣೆಯಲ್ಲಿ ಹೇಳಿಲ್ಲ.
ವಿವರ ತುಂಬಲು ಜಾಗ ನೀಡಲಾಗಿದೆ: OMR ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆ ಕ್ರಮಸಂಖ್ಯೆ (Question Booklet Serial No.) ಹಾಗೂ ವರ್ಷನ್ ಕೋಡ್ (Version Code) ತುಂಬಲು ಪ್ರತ್ಯೇಕ ಜಾಗವನ್ನು ನೀಡಲಾಗಿರುತ್ತದೆ. ಎರಡೂ ಸಂಖ್ಯೆ ಒಂದೇ ಇರಬೇಕಿದ್ದರೆ ಓಎಂಆರ್‌ನಲ್ಲಿ ಬರೆಯಲು ಅವಕಾಶ ಕಲ್ಪಿಸುವ ಅಗತ್ಯವೇ ಇರುತ್ತಿರಲಿಲ್ಲ.
ವದಂತಿ ಹರಡಬೇಡಿ: ಪರೀಕ್ಷೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದ್ದು, ಅಭ್ಯರ್ಥಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಯುವ ಅನಗತ್ಯ ವದಂತಿಗಳನ್ನು ನಂಬಬಾರದು ಎಂದು ಕೋರಲಾಗಿದೆ.
- Civil Police Constable OMR Issue
- CPC Exam Update 2026
- Karnataka Examinations Authority News
- Karnataka Police Constable Exam 2026
- KEA Fake News Alert
- KEA Karnataka
- KEA Police Constable Exam Clarification
- OMR Question Paper Serial Number KEA
- ಓಎಂಆರ್ ಗೊಂದಲ ಕೆಇಎ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಕೆಇಎ ಪ್ರಕಟಣೆ
- ಕೆಇಎ ಸ್ಪಷ್ಟೀಕರಣ
- ಪೋಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ 2026
- ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಅರ್ಜಿ
- ಸುಳ್ಳು ಸುದ್ದಿ ಕೆಇಎ ಎಚ್ಚರಿಕೆ





Leave a comment